ಕರ್ನಾಟಕ

karnataka

ETV Bharat / bharat

ಸರ್ಕಾರಿ ಉದ್ಯೋಗ ನೇಮಕಾತಿ ನಿಯಮ ಮಧ್ಯದಲ್ಲಿಯೇ ಬದಲಾಯಿಸುವಂತಿಲ್ಲ; ಸುಪ್ರೀಂಕೋರ್ಟ್​ ಆದೇಶ​ - RECRUITMENT RULES FOR GOVT JOBS

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ಅವರ ನೇತೃತ್ವದ ಐವರು ಸದಸ್ಯರ ಪೀಠ ಈ ಆದೇಶ ನೀಡಿದೆ.

recruitment-rules-for-govt-jobs-cant-be-changed-midway-unless-prescribed-sc
ಸುಪ್ರೀಂ ಕೋರ್ಟ್​​ (ಸಂಗ್ರಹ ಚಿತ್ರ)

By PTI

Published : Nov 7, 2024, 2:53 PM IST

ನವದೆಹಲಿ:ನೇಮಕಾತಿ ಪ್ರಕ್ರಿಯೆ ಕುರಿತು ಮಹತ್ವದ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್​​, ಸರ್ಕಾರಿ ನೇಮಕಾತಿ ಅಧಿಸೂಚನೆಯಲ್ಲಿ ನಿರ್ದಿಷ್ಟ ಸೂಚನೆ ನೀಡದೇ ಪ್ರಕ್ರಿಯೆಯನ್ನು ಮಧ್ಯದಲ್ಲಿಯೇ ತಡೆಯುವಂತಿಲ್ಲ ಎಂದು ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ಅವರ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಈ ಆದೇಶ ನೀಡಿದೆ. ನೇಮಕಾತಿ ಪ್ರಕ್ರಿಯೆ ಜಾಹೀರಾತಿನ ಮೂಲಕ ಅರ್ಜಿ ಆಹ್ವಾನದಿಂದ ಆರಂಭವಾಗಿ, ಅರ್ಜಿ ಸಲ್ಲಿಕೆಗೆ ಮುಕ್ತಯವಾಗುತ್ತದೆ. ನೇಮಕಾತಿ ಪ್ರಕ್ರಿಯೆಯ ಆರಂಭದಲ್ಲಿನ ನೇಮಕಾತಿ ಪ್ರಕ್ರಿಯೆಯನ್ನು ಅನುಮತಿಸದ ಹೊರತಾಗ ಮಧ್ಯದಲ್ಲಿ(ಆಗಾಗ) ಬದಲಾಯಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಅಸ್ತಿತ್ವದಲ್ಲಿರುವ ನಿಯಮಗಳಿಗೆ ಅನುಸಾರವಾಗಿ ನೇಮಕಾತಿ ಪ್ರಕ್ರಿಯೆಯ ತಾರ್ಕಿಕ ಅಂತ್ಯಕ್ಕೆ ತರಲು ಸೂಕ್ತವಾದ ಕಾರ್ಯವಿಧಾನವನ್ನು ರೂಪಿಸಬಹುದು, ಈ ರೀತಿ ಅಳವಡಿಸಿಕೊಂಡ ಕಾರ್ಯವಿಧಾನವು ಪಾರದರ್ಶಕ, ತಾರತಮ್ಯವಿಲ್ಲದೇ ನಡೆದುಕೊಂಡು ಬರಬೇಕಾಗುತ್ತದೆ ಎಂದು ನ್ಯಾ. ಮಿಶ್ರಾ ಹೇಳಿದ್ದಾರೆ.

ಅಸ್ತಿತ್ವದಲ್ಲಿರುವ ನಿಯಮಗಳು, ಕಾರ್ಯವಿಧಾನ ಮತ್ತು ಅರ್ಹತೆಯ ವಿಷಯದಲ್ಲಿ ನೇಮಕಾತಿ ಸಂಸ್ಥೆಗಳು ನಿಯಮಕ್ಕೆ ಬದ್ದವಾಗಿರಬೇಕು. ಆಯ್ಕೆ ಪಟ್ಟಿಯಲ್ಲಿರುವ ನಿಯೋಜನೆಯು ನೇಮಕಾತಿಗೆ ಯಾವುದೇ ಸಮರ್ಥನೀಯ ಹಕ್ಕನ್ನು ನೀಡುವುದಿಲ್ಲ ಎಂದು ತಿಳಿಸಿದೆ.

ನೇಮಕಾತಿ ಸಂಸ್ಥೆಯು ವಿವಿಧ ಹಂತಗಳಿಗೆ ಪ್ರತ್ಯೇಕ ಮಾನದಂಡಗಳನ್ನು ಹಾಕಬಹುದಾದರೂ, ಆ ಹಂತ ಮುಗಿದ ನಂತರ ಮಾನದಂಡಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಚಾಲ್ತಿಯಲ್ಲಿರುವ ನಿಯಮಗಳು ಅಥವಾ ಜಾಹೀರಾತಿನ ಅಡಿ ಬದಲಾವಣೆಯನ್ನು ಅನುಮತಿಸಿದರೆ, ಬದಲಾವಣೆಯು ಸಂವಿಧಾನದ 14 ನೇ ವಿಧಿಯ ಅಗತ್ಯತೆಯನ್ನು ಪೂರೈಸಲೇಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಗಂಡು ಮಕ್ಕಳಿಗೂ ಉಚಿತ ಶಿಕ್ಷಣ, ಧಾರಾವಿ ಯೋಜನೆ ರದ್ದು: ಉದ್ಧವ್​ ಠಾಕ್ರೆ ಪ್ರಣಾಳಿಕೆ

ABOUT THE AUTHOR

...view details