ರತ್ಲಾಂ, ಮಧ್ಯಪ್ರದೇಶ:ಈ ಹಿಂದೆ ರೆಕಾರ್ಡಿಂಗ್ ಸ್ಟುಡಿಯೋ ಅಂದರೆ ಮಹಾನಗರಿ ಮುಂಬೈ ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಕಂಡು ಬರುತ್ತಿದ್ದವು. ಆದರೆ, ಇದೀಗ ಮಧ್ಯಪ್ರದೇಶದ ಬುಡಕಟ್ಟು ಪ್ರದೇಶದಂತಹ ಅದು ಕುಗ್ರಾಮದಲ್ಲಿ ಕಾಣಸಿಗುತ್ತಿದೆ. ಈ ರತ್ಲಾಂನಲ್ಲಿ ಕೂಡ ಈ ರೀತಿಯ ಒಂದು ಸ್ಟುಡಿಯೋ ಇದೆ. ಗುಡುಸಿಲಿನ ರೀತಿ ನಿರ್ಮಾಣವಾಗಿರುವ ಈ ಸ್ಟುಡಿಯೋದಲ್ಲಿ ಎಲ್ಲ ರೀತಿಯ ಸಾಧನಗಳನ್ನೂ ನೀವು ಕಾಣಬಹುದು. ತಂಬೂರ್ ಸ್ಟುಡಿಯೋ ಎಂದೇ ಇದು ಹೆಸರಾಗಿದ್ದು, ಮಧ್ಯಪ್ರದೇಶದ ಮತ್ತು ರಾಜಸ್ಥಾನದ ಕಲಾವಿದರು ಇಲ್ಲಿಗೆ ರೆಕಾರ್ಡಿಂಗ್ಗಾಗಿ ಆಗಮಿಸುತ್ತಾರೆ.
ಇಲ್ಲಿನ ಕಂಗ್ಸಿ ಗ್ರಾಮದ ಬುಡಕಟ್ಟು ಯುವಕ ದೀಪಕ್ ಚರ್ಪೊಟ್ ಈ ಸ್ಟುಡಿಯೋವನ್ನು ನಿರ್ಮಾಣ ಮಾಡಿದ್ದಾನೆ. ಜಾನಪದ ಕಲಾವಿದನಾಗಿರುವ ಈತ ಇದನ್ನು ಕಟ್ಟಲು ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂಬುದು ಗಮನಾರ್ಹ.
6 ವರ್ಷದಲ್ಲಿ ನಿರ್ಮಾಣವಾದ ಸ್ಟುಡಿಯೋ: ಬುಡಕಟ್ಟು ಕುಟುಂಬದ ದೀಪಕ್ ಈ ತಂಬೂರ್ ಸ್ಟುಡಿಯೋ ನಿರ್ಮಾಣ ಮಾಡಲು 6 ವರ್ಷ ಕಠಿಣ ಶ್ರಮ ವಹಿಸಿದ್ದಾನೆ. ತಾವು ಸಂಪಾದಿಸಿದ ಹಣವನ್ನು ಇಲ್ಲಿನ ಸಾಧನಗಳ ಖರೀದಿಗೆ ವ್ಯಯ ಮಾಡಿದ್ದಾರೆ. ಅವರ ಈ ಕಠಿಣ ಪರಿಶ್ರಮದಿಂದಾಗಿ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ಮಾಳ್ವ- ನಿಮರ್ ಈ ಸ್ಟುಡಿಯೋ ಬಲು ಖ್ಯಾತಿ ಪಡೆದಿದೆ. ಇಲ್ಲಿನ ಸುತ್ತಮುತ್ತಲಿನ ಜಾನಪದ ಕಲಾವಿದರು ಹಾಡು ಮತ್ತು ಆಲ್ಬಾಂ ರೆಕಾರ್ಡ್ ಮಾಡಲು ಇಲ್ಲಿಗೆ ಆಗಮಿಸುತ್ತಾರೆ. ಇದರಿಂದಾಗಿ ದೀಪಕ್ ಉತ್ತಮ ಗಳಿಕೆಯನ್ನೂ ಮಾಡುತ್ತಿದ್ದಾರೆ.
ತಂಬೂರ್ ಸ್ಟುಡಿಯೋ ಹುಟ್ಟಿದ ಕಥೆಯೇ ರೋಚಕ: ಅನೇಕ ಜನರು ಈ ಕುಗ್ರಾಮದಲ್ಲಿ ನಿರ್ಮಾಣವಾಗಿರುವ ಈ ಅತ್ಯಾಧುನಿಕ ಸ್ಟುಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅನೇಕ ಬುಡಕಟ್ಟು ಕಲಾವಿದರು ಈ ಸ್ಟುಡಿಯೋದಲ್ಲಿ ಹಾಡುಗಳನ್ನು ಮುದ್ರಿಸಿಕೊಂಡು ಹೋಗುತ್ತಿದ್ದಾರೆ.
ಬಡ ಕುಟುಂಬದಿಂದ ಬಂದ ದೀಪಕ್ ಅವರಿಗೆ ಸ್ಟುಡಿಯೋ ನಿರ್ಮಾಣ ಕಾರ್ಯ ಸುಲಭದ ಕೆಲಸವಾಗಿರಲಿಲ್ಲ. ಜಾನಪದ ಕಲಾವಿದರಾದ ಕಾರಣ ದೀಪಕ್ ಇಂದೂರ್ಗೆ ತೆರಳಿ ಅಲ್ಲಿ ತಮ್ಮ ಜಾನಪದ ಹಾಡನ್ನು ರೆಕಾರ್ಡ್ ಮಾಡುತಿದ್ದರು. ಆದರೆ ಅಲ್ಲಿನ ದರ ಕೇಳಿ ಸುಸ್ತಾಗುತ್ತಿದ್ದರು. ಇದಾದ ಬಳಿಕ, ತಮ್ಮ ಮನೆಯಲ್ಲಿಯೇ ಸ್ಟುಡಿಯೋ ನಿರ್ಮಾಣ ಮಾಡಲು ನಿರ್ಧರಿಸಿದರು. ಆದರೆ, ಬಜೆಟ್ ಸಾಲಲಿಲ್ಲ. ಇದಕ್ಕಾಗಿ ಕಾರ್ಮಿಕರಾಗಿ ಹಗಲಿರುಳು ದುಡಿದು ಹಣ ಕೂಡಿಸಿದರು. ಈ ಕೂಡಿಟ್ಟ ಹಣದಲ್ಲಿ ಒಂದೊಂದೇ ಸಂಗೀತ ಸಾಧನ ಕೊಳ್ಳಲು ಮುಂದಾದರು. ಭಜನೆಗಳನ್ನು ಹಾಡುತ್ತಿದ್ದ ದೀಪಕ್ ಭಜನಾ ಕಾರ್ಯಕ್ರಮದಿಂದ ಬಂದ ಹಣವನ್ನು ಸ್ಟುಡಿಯೋ ನಿರ್ಮಾಣಕ್ಕೆ ಹಾಕಿದರು. ಪರಿಣಾಮವಾಗಿ ಆರು ವರ್ಷದಲ್ಲಿ ಸಂಪೂರ್ಣ ಸ್ಟುಡಿಯೋ ನಿರ್ಮಾಣವಾಯಿತು.
ಗಳಿಕೆಯತ್ತ ಸ್ಟುಡಿಯೋ:ಇದೀಗ ದೀಪಕ್ ಅವರ ಅವಿರಹಿತ ಶ್ರಮಕ್ಕೆ ಫಲ ಸಿಕ್ಕಿದೆ. ಅಲ್ಲದೇ ಅವರ ಕೆಲಸವನ್ನು ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಪ್ರಹ್ಲಾ ತಿಪನಿಯಾ ಕೂಡ ಮೆಚ್ಚಿದ್ದಾರೆ. ಇದೀಗ ತಮ್ಮ ಸ್ಟುಡಿಯೋದಲ್ಲೇ ಅನೇಕ ಜಾನಪದ ಕಲಾವಿದರ ಹಾಡು ಮುದ್ರಿಸಲಾಗುತ್ತಿದೆ. ಸ್ಥಳೀಯ ಪ್ರತಿಭೆ ಪ್ರೋತ್ಸಾಹಿಸುವ ಉದ್ದೇಶದ ದೀಪಕ್ ಅನೇಕ ಉಚಿತ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಅನೇಕರು ರೆಕಾರ್ಡ್ ಆದ ಕೂಡಲೇ ಕೇಳದೇ ಹಣ ನೀಡುತ್ತಿದ್ದಾರೆ. ಇದರಿಂದ ನಿಧಾನವಾಗಿ ದೀಪಕ್ ಆದಾಯ ಕೂಡ ಹೆಚ್ಚುತ್ತಿದೆ. ಯೂಟ್ಯೂಬ್ನಲ್ಲಿ ಕೂಡ ಚಾನಲ್ ಹೊಂದಿರುವ ದೀಪಕ್ ಅದರಿಂದಲೂ ಹಣಗಳಿಸುತ್ತಿದ್ದಾರೆ.
ಇದನ್ನೂ ಓದಿ: ಹಣದ ಮಾಲೆಯನ್ನೇ ಕದ್ದೊಯ್ದ ಕಳ್ಳ: ಚಲಿಸುತ್ತಿದ್ದ ವಾಹನದೊಳಗೆ ನುಗ್ಗಿ ಹಿಡಿದ ಮದುಮಗ- ವಿಡಿಯೋ