ಕರ್ನಾಟಕ

karnataka

ETV Bharat / bharat

'ಮಸ್ಕಿಟೋ ಟರ್ಮಿನೇಟರ್ ಆನ್ ವೀಲ್ಸ್': ಸೊಳ್ಳೆಗಳ ನಿಯಂತ್ರಣಕ್ಕೆ ವಿಶೇಷ ರೈಲು ಆರಂಭ - Special Train To Control Mosquitos - SPECIAL TRAIN TO CONTROL MOSQUITOS

ಹಳಿಗಳ ಉದ್ದಕ್ಕೂ ಸೊಳ್ಳೆ ನಿಯಂತ್ರಣಕ್ಕಾಗಿ ದೆಹಲಿ ರೈಲ್ವೆ ವಿಶೇಷ ರೈಲನ್ನು ಪ್ರಾರಂಭಿಸಿದೆ. ರೈಲಿನಲ್ಲಿರುವ ಸಾಧನವು ಹಳಿಗಳಿಂದ ಸುಮಾರು 50ರಿಂದ 60 ಮೀಟರ್ ದೂರದವರೆಗೆ ಸೊಳ್ಳೆ ನಿವಾರಕವನ್ನು ಸಿಂಪಡಿಸಲಿದೆ.

TRAIN WITH MOQUITO PREVENTION  SPECIAL TRAIN FOR MOSQUITOS  PREVENT MOSQUITO BREEDING TRAIN  SPECIAL TRAIN FOR SPRAY
ಸಂಗ್ರಹ ಚಿತ್ರ (Getty Images)

By ETV Bharat Karnataka Team

Published : Aug 17, 2024, 9:23 AM IST

ನವದೆಹಲಿ: ದೆಹಲಿ ರೈಲ್ವೆ ವಿಭಾಗವು ಸೊಳ್ಳೆ ನಿಯಂತ್ರಣಕ್ಕಾಗಿ ವಿಶೇಷ ರೈಲೊಂದನ್ನು ಆರಂಭಿಸಿದೆ. 'ಮಸ್ಕಿಟೋ ಟರ್ಮಿನೇಟರ್ ಆನ್ ವೀಲ್ಸ್' ಎಂಬ ಸ್ಪೆಷಲ್​ ರೈಲನ್ನು ಶುಕ್ರವಾರದಿಂದ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.

ಮಹಾನಗರ ಪಾಲಿಕೆ ಒದಗಿಸಿದ ಡಿಬಿಕೆಎಂ ಎಂಬ ವಿಶೇಷ ಸಾಧನವನ್ನು ರೈಲಿನ ವ್ಯಾಗನ್‌ಗೆ ಅಳವಡಿಸಲಾಗಿದೆ. ಈ ಸಾಧನವು ರೈಲು ಚಲಿಸುವಾಗ ಹಳಿಗಳಿಂದ ಸುಮಾರು 50ರಿಂದ 60 ಮೀಟರ್ ದೂರದವರೆಗೆ ಸೊಳ್ಳೆ ನಿವಾರಕವನ್ನು ಸಿಂಪಡಿಸುತ್ತದೆ.

ರೈಲು ದೆಹಲಿಯ ರಥಧಾನದಿಂದ ಆದರ್ಶನಗರದ ಮೂಲಕ ಬದ್ಲಿಗೆ ಸಂಚರಿಸಲಿದೆ. ಮರಳಿ ಅಲ್ಲಿಂದ ನವದೆಹಲಿಗೆ ಚಲಿಸುತ್ತದೆ. ಸೊಳ್ಳೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸೆಪ್ಟೆಂಬರ್ 21ರವರೆಗೆ ವಿಶೇಷ ರೈಲು ಓಡಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಸಂಚಾರ ಮಾಡಲಿದೆ.

ಸಾಮಾನ್ಯವಾಗಿ ಈ ಋತುವಿನಲ್ಲಿ ಸೊಳ್ಳೆ ಲಾರ್ವಾಗಳು ಹೊರಬರುತ್ತವೆ. ಹೀಗಾಗಿ ಸೊಳ್ಳೆಗಳನ್ನು ನಿಯಂತ್ರಿಸಲು, ಸೊಳ್ಳೆ ಟರ್ಮಿನೇಟರ್ ರೈಲು ಎರಡು ಸುತ್ತುಗಳಲ್ಲಿ ಚಲಿಸಲಿದೆ. ಒಂದು ಸುತ್ತಿನಲ್ಲಿ ಸುಮಾರು 75 ಕಿ.ಮೀ ವರೆಗೆ ಹಳಿಗಳ ಉದ್ದಕ್ಕೂ ಸೊಳ್ಳೆ ನಿವಾರಕವನ್ನು ಸಿಂಪಡಿಸಲಿದೆ. ಇದರಿಂದ ರೈಲ್ವೆ ಹಳಿಗಳ ಪಕ್ಕದಲ್ಲಿರುವ ಹೊಂಡಗಳಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳ ಸಂಖ್ಯೆಯು ನಿಯಂತ್ರಣ ಆಗಲಿದೆ. ಈ ಮೂಲಕ ರೈಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆರೋಗ್ಯ ಮತ್ತು ಸುರಕ್ಷತೆ ಒದಗಿಸಲಿದೆ. ಅಷ್ಟೇ ಅಲ್ಲದೆ, ರೈಲ್ವೆ ಕಾಲೋನಿಗಳು, ನೀರಿನ ಕಾಲುವೆಗಳು, ಅನೈರ್ಮಲ್ಯ ರೈಲ್ವೆ ಜಮೀನುಗಳು ಸೇರಿದಂತೆ ಮುಂತಾದ ರೈಲ್ವೆಗೆ ಸಂಬಂಧಿಸಿದ ವಿವಿಧ ಪ್ರದೇಶಗಳಲ್ಲಿ ಸೊಳ್ಳೆ ನಿಯಂತ್ರಣ ಸ್ಪ್ರೇ ಸಿಂಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿ:ಕಾನ್ಪುರ ಬಳಿ ಸಬರಮತಿ ಎಕ್ಸ್‌ಪ್ರೆಸ್‌ ರೈಲು ಅಪಘಾತ: ಹಳಿತಪ್ಪಿದ 20 ಬೋಗಿಗಳು - Sabarmati Express Derailed

ABOUT THE AUTHOR

...view details