ಕರ್ನಾಟಕ

karnataka

ETV Bharat / bharat

ಸಂಸತ್​​​ ಅಧಿವೇಶನದಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಎತ್ತಲು ರಾಹುಲ್​ ಗಾಂಧಿ ಕಾರ್ಯತಂತ್ರ - Rahul Gandhi Prepares Strategy - RAHUL GANDHI PREPARES STRATEGY

ಮುಂಬರುವ ಬಜೆಟ್‌ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ನಿರುದ್ಯೋಗ, ಹಣದುಬ್ಬರ ಮತ್ತು ಆರ್ಥಿಕ ಅಸಮಾನತೆಯಂತಹ ಪ್ರಮುಖ ಆರ್ಥಿಕ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪ ಮಾಡಲು ಕಾರ್ಯತಂತ್ರ ರೂಪಿಸಿದ್ದಾರೆ.

Rahul Gandhi Prepares Strategy To Raise Public Issues During Parliament Session
ಬಜೆಟ್​ ಅಧಿವೇಶನದಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಎತ್ತಲು ರಾಹುಲ್​ ಗಾಂಧಿ ಕಾರ್ಯತಂತ್ರ (ETV Bharat)

By ETV Bharat Karnataka Team

Published : Jul 20, 2024, 9:11 PM IST

ನವದೆಹಲಿ: ಜುಲೈ ಕೊನೆಯ ವಾರದಲ್ಲಿ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಆರ್ಥಿಕ ಅಸಮಾನತೆ, ಉದ್ಯೋಗ ಮತ್ತು ಬೆಲೆ ಏರಿಕೆ, ಮಣಿಪುರ ಮತ್ತು ತ್ರಿಪುರದಲ್ಲಿ ರಾಜಕೀಯ ಹಿಂಸಾಚಾರ ಮತ್ತು ಜಮ್ಮು ಪ್ರದೇಶದಲ್ಲಿನ ಭಯೋತ್ಪಾದಕ ಘಟನೆಗಳಂತಹ ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನು ಆಕ್ರಮಣಕಾರಿಯಾಗಿ ಪ್ರಸ್ತಾಪಿಸಲು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಯೋಜನೆ ರೂಪಿಸಿದ್ದಾರೆ.

ಕೇಂದ್ರ ಬಜೆಟ್ 2024-25 ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23 ರಂದು ಸಂಸತ್​ನಲ್ಲಿ ಮಂಡಿಸಲಿದ್ದಾರೆ. ಮುಂಬರುವ ಅಧಿವೇಶನದಲ್ಲಿ ಇದು ಪ್ರಮುಖ ಅಂಶವಾಗಿದೆ. ಪ್ರತಿಪಕ್ಷಗಳು ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳನ್ನು ಪ್ರಸ್ತಾಪಿಸಲು ಮತ್ತು ಎನ್‌ಡಿಎ ಸರ್ಕಾರದಿಂದ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸ್ಪಷ್ಟೀಕರಣವನ್ನು ಪಡೆಯಲು ಎಲ್ಲ ರೀತಿ ಅವಕಾಶಗಳನ್ನು ಬಳಸಿಕೊಳ್ಳಲು ಚಿಂತನೆ ನಡೆಸಿವೆ.

"ಹೊಸ ಲೋಕಸಭೆಯಲ್ಲಿ ಹೊಸ ಸರ್ಕಾರದ ಆಡಳಿತ ನಡೆಯುತ್ತಿದ್ದು, ಈ ಬಾರಿ ಪ್ರತಿಪಕ್ಷಗಳು ಬಲಪಡೆದುಕೊಂಡಿವೆ. ಹೀಗಾಗಿ ಈ ಬಾರಿ ಏಕಪಕ್ಷೀಯವಾಗಿ ಸರ್ಕಾರ ನಡೆದುಕೊಳ್ಳುವುದು ಕಷ್ಟವಾಗಲಿದೆ ಎಂದು ಅಂಕಿಅಂಶಗಳು ಸೂಚಿಸುತ್ತವೆ. ಅದರಂತೆ, ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಸಾರ್ವಜನಿಕ ಸಮಸ್ಯೆಗಳನ್ನು ಪ್ರಸ್ತಾಪಿಸಲು ಸರ್ವರೀತಿಯಿಂದಲೂ ಸನ್ನದ್ಧರಾಗಿದ್ದಾರೆ. ಬಜೆಟ್ ಆರ್ಥಿಕ ಅಸಮಾನತೆ, ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ನಾವು ಭಾವಿಸುತ್ತೇವೆ, ಕನಿಷ್ಠ ವೇತನವನ್ನು ದಿನಕ್ಕೆ 400 ರೂ ಏರಿಕೆ ಮಾಡುವ ಬೇಡಿಕೆ ಇಡುವ ಸಾಧ್ಯತೆ ಇದೆ. ಅಲ್ಲದೇ. ರೈಲು ಸುರಕ್ಷತೆ, ಮಣಿಪುರ ಮತ್ತು ತ್ರಿಪುರಾದಲ್ಲಿ ರಾಜಕೀಯ ಹಿಂಸಾಚಾರ ಮತ್ತು ಜಮ್ಮು ಪ್ರದೇಶದಲ್ಲಿನ ಭಯೋತ್ಪಾದಕ ಘಟನೆಗಳು ಇತರ ವಿಷಯಗಳ ಬಗ್ಗೆ ಸರ್ಕಾರದಿಂದ ಉತ್ತರವನ್ನು ಪಡೆಯಲು ನಾವು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇವೆ ಎಂದು ಲೋಕಸಭೆಯ ಕಾಂಗ್ರೆಸ್ ವಿಪ್ ಮೊಹಮ್ಮದ್ ಜಾವೇದ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

"ಪ್ರತಿಪಕ್ಷಗಳು ರಚನಾತ್ಮಕ ಪಾತ್ರವನ್ನು ವಹಿಸಲು ಬಯಸುತ್ತವೆ. ಸದನವು ಸಾರ್ವಜನಿಕ ಸಮಸ್ಯೆಗಳನ್ನು ಪ್ರಜಾಸತ್ತಾತ್ಮಕವಾಗಿ ಚರ್ಚಿಸಬೇಕೆಂದು ಬಯಸುತ್ತದೆ. ಅದಕ್ಕಾಗಿ ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ಸಿಗಬೇಕು. ಹಿಂದಿನ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಧ್ವನಿ ಹೇಗೆ ಮೂಕವಿಸ್ಮಿತವಾಯಿತು ಎಂಬುದನ್ನು ನೋಡಿದ್ದೇವೆ. ಈ ಸದನದ ಮೊದಲ ಅಧಿವೇಶನದಲ್ಲಿ, ಪ್ರತಿಪಕ್ಷಗಳ ಮೈಕ್ ಅನ್ನು ಮೌನಗೊಳಿಸಲಾಗಿದೆ ಮತ್ತು ಅವರ ಭಾಷಣದ ಭಾಗಗಳನ್ನು ಅಳಿಸಲಾಗಿದೆ ಎಂದು ನಾವು ಗಮನಿಸಿದ್ದೇವೆ. ಈ ಬಾರಿ ವಿಷಯಗಳು ಉತ್ತಮವಾಗಿರುತ್ತವೆ ಮತ್ತು ಮುಂಬರುವ ಅಧಿವೇಶನವು ಉತ್ಪಾದಕವಾಗಿ ಹೊರಹೊಮ್ಮುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಲೋಕಸಭಾ ಸಂಸದ ಹಿಬಿ ಈಡನ್ ಮಾತನಾಡಿ, ಪ್ರಮುಖ ವಿರೋಧ ಪಕ್ಷವು ಸದನವು ಸುಗಮವಾಗಿ ನಡೆಯಬೇಕೆಂದು ಬಯಸುತ್ತದೆ ಎಂದಿದ್ದಾರೆ. "ನಾವು ಸಹಕರಿಸಲು ಉತ್ಸುಕರಾಗಿದ್ದೇವೆ. ಸದನವು ಸಾರ್ವಜನಿಕ ಪ್ರಾಮುಖ್ಯತೆಯ ಸಮಸ್ಯೆಗಳನ್ನು ಚರ್ಚಿಸಬೇಕಾಗುತ್ತದೆ ಮತ್ತು ಚರ್ಚಿಸುತ್ತದೆ. ನಾವು ಅದನ್ನು ಮಾಡಬೇಕಾಗಿದೆ. ನಮ್ಮ ಪಕ್ಷವು ಪ್ರಸ್ತಾಪಿಸುವ ಹಾಗೂ ಗಮನಸೆಳೆಯುವ ಸಮಸ್ಯೆಗಳಿಗೆ ಬಜೆಟ್ ಪರಿಹಾರವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ಬಜೆಟ್ ಆ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಪ್ಪಿಸಿದರೆ, ನಾವು ಅವುಗಳನ್ನು ಫ್ಲ್ಯಾಗ್ ಮಾಡಲು ಮತ್ತು ಅವುಗಳಿಗೆ ಸರ್ಕಾರದ ಪ್ರತಿಕ್ರಿಯೆಯನ್ನು ಪಡೆಯಲು ಬಯಸುತ್ತೇವೆ. ಅಷ್ಟೇ ಅಲ್ಲ ಸಾರ್ವಜನಿಕ ಸಮಸ್ಯೆಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳಿಗೆ ಅವಕಾಶ ಸಿಗದಿದ್ದರೆ, ನಾವು ನಮ್ಮ ಕಾರ್ಯತಂತ್ರವನ್ನು ಮರುಪರಿಶೀಲಿಸಬೇಕಾಗುತ್ತದೆ, ”ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:ನಾಳಿನ ಟಿಎಂಸಿ ಕಾರ್ಯಕ್ರಮದಲ್ಲಿ ಅಖಿಲೇಶ್​ ಯಾದವ್​ ಭಾಗಿ: ಇಂಡಿಯಾ ಕೂಟದ ಬಲ ಪ್ರದರ್ಶನ - INDIA alliance rally

ABOUT THE AUTHOR

...view details