ಕರ್ನಾಟಕ

karnataka

ETV Bharat / bharat

ಡಬಲ್​ ಎಂಜಿನ್​ ಸರ್ಕಾರ ಎಂದರೆ ನಿರುದ್ಯೋಗಿಗಳಿಗೆ ಡಬಲ್​ ಹೊಡೆತ: ರಾಹುಲ್​ ಗಾಂಧಿ

ಡಬಲ್ ಇಂಜಿನ್ ಸರ್ಕಾರ ಎಂದರೆ ನಿರುದ್ಯೋಗಿಗಳಿಗೆ ಡಬಲ್​ ಹೊಡೆತ ಇದ್ದಂತೆ ಎಂದು ರಾಹುಲ್​ ಗಾಂಧಿ ಟೀಕಿಸಿದ್ದಾರೆ.

ಡಬಲ್​ ಎಂಜಿನ್​ ಸರ್ಕಾರ ಎಂದರೆ ನಿರುದ್ಯೋಗಿಗಳಿಗೆ ಡಬಲ್​ ಹೊಡೆತ: ರಾಹುಲ್​ ಗಾಂಧಿ
ಡಬಲ್​ ಎಂಜಿನ್​ ಸರ್ಕಾರ ಎಂದರೆ ನಿರುದ್ಯೋಗಿಗಳಿಗೆ ಡಬಲ್​ ಹೊಡೆತ: ರಾಹುಲ್​ ಗಾಂಧಿ

By PTI

Published : Feb 18, 2024, 5:05 PM IST

ನವದೆಹಲಿ: ಉತ್ತರ ಪ್ರದೇಶದ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರಿಸಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಎಂದರೆ ನಿರುದ್ಯೋಗಿಗಳಿಗೆ ಡಬಲ್​ ಹೊಡೆತ ಇದ್ದಂತೆ ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಅವರು, ಉತ್ತರ ಪ್ರದೇಶದ ಮೂರನೇ ಒಂದು ಭಾಗದಷ್ಟು ಯುವಕರು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಪದವೀಧರರು, ಸ್ನಾತಕೋತ್ತರ ಪದವೀಧರರು ಮತ್ತು ಪಿಎಚ್‌ಡಿ ಪದವಿ ಪಡೆದವರು ಕನಿಷ್ಠ ಅರ್ಹತೆಯ ಹುದ್ದೆಗಳಿಗೂ ಸಾಲುಗಟ್ಟಿ ನಿಂತಿದ್ದಾರೆ ಎಂದು ಆರೋಪಿಸಿದರು.

ಮೊದಲನೇಯದಾಗಿ ನೇಮಕಾತಿ ಅಧಿಸೂಚನೆಯು ಹೊರಡಿಸುವುದೇ ಕನಸಿನ ಮಾತಾಗಿದೆ. ಒಂದು ವೇಳೆ ನೇಮಕಾತಿ ಪ್ರಕ್ರಿಯೆ ಮುಗಿದರೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುತ್ತವೆ ಅಥವಾ ಪರೀಕ್ಷೆ ನಡೆದರೂ ಕೂಡಲೇ ಫಲಿತಾಂಶ ಪ್ರಕಟಗೊಳ್ಳಲ್ಲ. ಫಲಿತಾಂಶಕ್ಕಾಗಿ ಬಹಳ ಸಮಯ ಕಾಯಬೇಕಾಗುತ್ತದೆ. ಒಂದು ವೇಳೆ ಫಲಿತಾಂಶ ಪ್ರಕಟಗೊಂಡರೂ ಉದ್ಯೋಗ ಪಡೆಯಲು ಆಗಾಗ ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತದೆ ಎಂದು ರಾಹುಲ್​ ಹೇಳಿದ್ದಾರೆ.

ಸೇನೆಯಿಂದ ಹಿಡಿದು ರೈಲ್ವೇ ಮತ್ತು ಪೊಲೀಸ್​ ಹುದ್ದೆ ನೇಮಕಾತಿಗಾಗಿ ವರ್ಷಗಟ್ಟಲೆ ಕಾಯುತ್ತಿರುವ ಲಕ್ಷಾಂತರ ಆಕಾಂಕ್ಷಿಗಳ ವಯಸ್ಸು ಮೀರುತ್ತಿದೆ. ಇದರಿಂದ ಅವರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅಲ್ಲದೆ ಇದೆಲ್ಲದರಿಂದ ನೊಂದು ವಿದ್ಯಾರ್ಥಿಗಳೊಂದಿಗೆ ರಸ್ತೆಗಿಳಿದಾಗ ಪೊಲೀಸರಿಂದ ಲಾಠಿಪೆಟ್ಟು ತಿನ್ನುತ್ತಾರೆ. ವಿದ್ಯಾರ್ಥಿಗಳಿಗೆ ಉದ್ಯೋಗವು ಕೇವಲ ಆದಾಯದ ಮೂಲವಾಗಿರದೆ ಅವರ ಕುಟುಂಬದ ಜೀವನವನ್ನು ಬದಲಾಯಿಸುವ ಕನಸಾಗಿದೆ. ಈ ಕನಸು ನುಚ್ಚುನೂರಾದಾಗ ಇಡೀ ಕುಟುಂಬದ ಭರವಸೆಯೇ ನುಚ್ಚುನೂರಾಗುತ್ತದೆ ಎಂದು ರಾಹುಲ್​ ಗಾಂಧಿ ಹೇಳಿದರು.

ಕಾಂಗ್ರೆಸ್​ನಿಂದ ನ್ಯಾಯ: ಕಾಂಗ್ರೆಸ್​ನ ನೀತಿಗಳು ಯುವಕರ ಕನಸಿಗೆ ನ್ಯಾಯ ಒದಗಿಸುತ್ತವೆ. ಅವರ ತಪಸ್ಸು, ಶ್ರಮ ವ್ಯರ್ಥವಾಗಲು ಬಿಡುವುದಿಲ್ಲ ಎಂದು ರಾಹುಲ್​ ಭರವಸೆ ನೀಡಿದ್ದಾರೆ.

ಪ್ರಯಾಗ್​ರಾಜ್​ನಿಂದ ನ್ಯಾಯಯಾತ್ರೆ ಪುನರಾರಂಭ:ವಯನಾಡಿಗೆ ರಾಹುಲ್​ ಗಾಂಧಿ ದಿಢೀರ್​ ಭೇಟಿಯಿಂದ ಅರ್ಧದಲ್ಲೇ ನಿಂತಿದ್ದ ನ್ಯಾಯ ಯಾತ್ರೆ ಇಂದು ಸಂಜೆ 4 ಗಂಟೆಯಿಂದ ಪ್ರಯಾಗ್​ ರಾಜ್​ನಿಂದ ಪುನರಾರಂಭಗೊಂಡಿದೆ.

ಇದನ್ನೂ ಓದಿ:ರೈತರ ಹೋರಾಟ: ಪಂಜಾಬ್‌ನ ಏಳು ಜಿಲ್ಲೆಗಳಲ್ಲಿ ಇಂಟರ್​​ನೆಟ್ ಸೇವೆ ರದ್ದು, ಕೇಂದ್ರ ಸರ್ಕಾರದ ಆದೇಶ

ABOUT THE AUTHOR

...view details