ಕರ್ನಾಟಕ

karnataka

ETV Bharat / bharat

ಪುಣೆ ಪೋರ್ಷೆ ಕಾರು ಅಪಘಾತ ಕೇಸ್: ಆರೋಪಿಯ ರಕ್ತದ ವರದಿಯೇ ಬದಲು; ಆಸ್ಪತ್ರೆಗೆ ತ್ರಿಸದಸ್ಯ ಸಮಿತಿ ಭೇಟಿ - Pune Porsche Crash Case - PUNE PORSCHE CRASH CASE

ಪುಣೆಯಲ್ಲಿ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಆರೋಪಿ ಅಪ್ರಾಪ್ತ ಚಾಲಕನ ರಕ್ತದ ಮಾದರಿ ವರದಿ ಬದಲಿಸಿದ ಆರೋಪದಡಿ ಬಂಧಿತರ ಇಬ್ಬರು ವೈದ್ಯರ ವಿರುದ್ಧ ತನಿಖೆ ಮುಂದುವರಿದಿದೆ.

Pune: luxury Porsche car, Three-Member Panel Visits Sassoon Hospital.
ಪುಣೆಯಲ್ಲಿ ಇಬ್ಬರು ಸಾವಿಗೆ ಕಾರಣವಾದ ಪೋರ್ಷೆ ಕಾರು (ಎಡ ಚಿತ್ರ): ಆಸ್ಪತ್ರೆಗೆ ತ್ರಿಸದಸ್ಯ ಸಮಿತಿ ಭೇಟಿ ನೀಡಿತು. (ಬಲ ಚಿತ್ರ) (ETV Bharat)

By ETV Bharat Karnataka Team

Published : May 28, 2024, 4:53 PM IST

ಮುಂಬೈ (ಮಹಾರಾಷ್ಟ್ರ): ಪುಣೆಯ ಪೋರ್ಷೆ ಕಾರು ಅಪಘಾತ ಪ್ರಕರಣವು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ಈ ಘಟನೆಯಲ್ಲಿ ಇಬ್ಬರ ಸಾವಿಗೆ ಕಾರಣವಾದ ಬಾಲಾಪರಾಧಿ ಚಾಲಕನ ರಕ್ತದ ಮಾದರಿ ವರದಿ ಬದಲಿಸಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಸಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ನೌಕರನನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರವು ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ಡಾ. ಪಲ್ಲವಿ ಸಪಳೆ ನೇತೃತ್ವದಲ್ಲಿ ಡಾ. ಗಜಾನನ್ ಚವ್ಹಾಣ್, ಡಾ. ಸುಧೀರ್ ಚೌಧರಿ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಡಾ. ಸಪಳೆ ಗ್ರಾಂಟ್ ಮೆಡಿಕಲ್ ಕಾಲೇಜು ಮತ್ತು ಜೆಜೆ ಗ್ರೂಪ್ ಆಸ್ಪತ್ರೆಗಳ ಡೀನ್ ಆಗಿದ್ದಾರೆ. ಡಾ. ಗಜಾನನ್ ಚವ್ಹಾಣ್ ಗ್ರಾಂಟ್ ಮೆಡಿಕಲ್ ಕಾಲೇಜಿನ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕರಾಗಿದ್ದು, ಡಾ. ಸುಧೀರ್ ಚೌಧರಿ ಛತ್ರಪತಿ ಸಂಭಾಜಿ ನಗರ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದಾರೆ.

ಇದನ್ನೂ ಓದಿ:ಪೋರ್ಷೆ ಕಾರು ಅಪಘಾತ; ಅಪ್ರಾಪ್ತ ಮಗನ ಕೈಗೆ ವಾಹನ ಕೊಟ್ಟ ತಂದೆ ಪೊಲೀಸರ ವಶಕ್ಕೆ

ಮಂಗಳವಾರ ಈ ಸಮಿತಿಯು ಸಸೂನ್ ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿಯನ್ನೂ ಕಲೆ ಹಾಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಾ. ಪಲ್ಲವಿ ಸಪಳೆ, ಪ್ರಕರಣದ ತನಿಖೆಯ ಭಾಗವಾಗಿ ಎಲ್ಲ ಮಾಹಿತಿ ಪಡೆಯಲಾಗುವುದು. ವಿಚಾರಣೆ ಬಳಿಕ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ರವೀಂದ್ರ ಧಾಂಗೇಕರ ಸಮಿತಿ ಸದಸ್ಯರನ್ನು ಭೇಟಿಯಾಗಿ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ:ಮೇ 19ರಂದು ಪುಣೆ ನಗರದ ಕಲ್ಯಾಣಿ ನಗರ ಪ್ರದೇಶದಲ್ಲಿ ಐಷಾರಾಮಿ ಪೋರ್ಷೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಐಟಿ ವೃತ್ತಿಪರರು ಸಾವನ್ನಪ್ಪಿದ್ದರು. ಈ ಕಾರನ್ನು ಅಪ್ರಾಪ್ತ ಚಲಾಯಿಸುತ್ತಿದ್ದ ಎಂದು ಹೇಳಲಾಗಿದೆ. ಅಲ್ಲದೇ, ಅಪಘಾತದ ಸಮಯದಲ್ಲಿ ಆರೋಪಿ ಮದ್ಯ ಸೇವಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಅಪ್ರಾಪ್ತ ಆರೋಪಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಇವನನ್ನು ರಕ್ಷಿಸಲು ರಕ್ತದ ವರದಿಯನ್ನೇ ಸಸೂನ್ ಆಸ್ಪತ್ರೆಯವರು ಬದಲಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆಸ್ಪತ್ರೆಯ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಅಜಯ್ ತಾವರೆ, ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಹರಿ ಹಾಲ್ನೋರ್ ಹಾಗೂ ಡಾ. ತಾವರೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರ ಅತುಲ್ ಘಟಕಾಂಬ್ಳೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಎಲ್ಲ ಆರೋಪಿಗಳನ್ನು ಮೇ 30ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ:ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ: ರಕ್ತದ ಮಾದರಿ ತಿರುಚಿದ್ದ ಆರೋಪದಡಿ ವೈದ್ಯರಿಬ್ಬರು ಅರೆಸ್ಟ್​

ABOUT THE AUTHOR

...view details