ಮಿರ್ಜಾಪುರ, ಉತ್ತರಪ್ರದೇಶ: ತಮ್ಮ ಖಾತೆಗೆ ತಪ್ಪಾಗಿ ಜಮೆಯಾದ ಬರೋಬ್ಬರಿ ಒಂದು ಕೋಟಿ ರೂಪಾಯಿಗಳನ್ನು ಅರ್ಚಕರೊಬ್ಬರು ಹಿಂದಿರುಗಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ. ಉಮೇಶ್ ಶುಕ್ಲಾ ಅವರ ಮನಿ ಕಾಪಿಟಲ್ ಲಿಮಿಟೆಡ್ ಕಂಪನಿಯಿಂದ ಶ್ರೀ ಮಾ ವಿಂದ್ಯಾವಾಸಿನಿ ಸೇವಾ ಸಮಿತಿ ಸಂಸ್ಥಾನ ಖಾತೆಗೆ ಇಷ್ಟು ದೊಡ್ಡ ಮೊತ್ತದ ಹಣ ಜಮೆಯಾಗಿತ್ತು.
ತಮ್ಮ ಖಾತೆಯಲ್ಲಿ ಭಾರೀ ಮೊತ್ತದ ಹಣ ಜಮೆಯಾಗಿರುವ ಬಗ್ಗೆ ಅರ್ಚಕರರಾದ ಮೋಹಿತ್ ಮಿಶ್ರಾ ಅವರ ಮೊಬೈಲ್ಗೆ ಸಂದೇಶ ಬಂದಿತ್ತು. ಇಷ್ಟೊಂದು ಹಣ ಜಮೆಯಾಗಿರುವ ಸಂದೇಶದಲ್ಲಿ 1,48,50,047 ರೂ. ನಿಮ್ಮ ಖಾತೆಗೆ ರವಾನೆ ಆಗಿದೆ ಎಂಬ ವಿಚಾರ ಇತ್ತು. ಇಷ್ಟು ದೊಡ್ಡ ಮೊತ್ತದ ಹಣ ತಮ್ಮ ಖಾತೆಗೆ ಹಾಕಿದ್ಯಾರು ಎಂಬ ಪ್ರಶ್ನೆ ಮಿಶ್ರಾ ಅವರನ್ನು ಕಾಡಿತ್ತು. ಇಷ್ಟೊಂದು ದೊಡ್ಡ ಮೊತ್ತದ ಹಣದ ಮೂಲ ಯಾವುದು ಎಂಬ ಚಿಂತೆಗೆ ಬಿದ್ದ ಅವರು ಅಫಾತಕ್ಕೂ ಒಳಗಾದರು.
ತಪ್ಪಾಗಿ ಮಿಶ್ರಾ ಖಾತೆಗೆ ಹಣ ಜಮೆ ಮಾಡಿದ್ದ ಉಮೇಶ್ ಶುಕ್ಲಾ:ಹೀಗೆ ಹಣದ ಮೂಲದ ತಡಕಾಟದಲ್ಲಿದ್ದ ಅರ್ಚಕ ಮೋಹಿತ್ ಮಿಶ್ರಾಗೆ ಉಮೇಶ್ ಶುಕ್ಲಾ ಎಂಬ ಭಕ್ತರು ಕರೆ ಮಾಡಿ. ತಪ್ಪಾಗಿ ನಿಮ್ಮ ಖಾತೆಗೆ ಹಣ ವರ್ಗಾವಣೆಗೊಂಡಿರುವುದಾಗಿ ತಿಳಿಸಿದ್ದರು. ಈ ವೇಳೆಗಾಗಲೇ ಬ್ಯಾಂಕ್ ಕಾರ್ಯನಿರ್ವಹಣೆ ಅವಧಿ ಮುಗಿದಿದ್ದು, 24 ಗಂಟೆಯೊಳಗೆ ನಿಮ್ಮ ಹಣ ಹಿಂದಿರುಗಿಸುವುದಾಗಿ ಅರ್ಚಕರು ಭರವಸೆ ನೀಡಿದ್ದರು. ಅದರಂತೆ ಆಗಸ್ಟ್ 27ರಂದು ಬೆಳಗ್ಗೆ ಅರ್ಚಕ ಮಿಶ್ರಾ, ಹತ್ತಿರದ ಎಚ್ಡಿಎಫ್ಸಿ ಬ್ಯಾಂಕ್ ಬ್ರಾಂಚ್ಗೆ ಭೇಟಿ ನೀಡಿದ್ದು, ಚೆಕ್ ರೂಪದಲ್ಲಿ ಅಷ್ಟು ಹಣವನ್ನು ಎಲ್ಲಿಂದ ಬಂದಿತ್ತೋ ಅದೇ ಖಾತೆಗೆ ಹಣ ಹಿಂದಿರುಗಿಸಿದ್ದಾರೆ.
ಮಾತಿನಂತೆ ಹಣ ವಾಪಸ್ ಮಾಡಿದ ವಿಂದ್ಯಾವಾಸಿನಿ ಸೇವಾ ಸಮಿತಿ:ಶ್ರೀ ಮಾ ವಿಂದ್ಯಾವಾಸಿನಿ ಸೇವಾ ಸಮಿತಿ ಸಂಘಟನೆ ಪ್ರತಿ ವರ್ಷ ವಿಂದ್ಯಾಚಲ ಧಾಮದಲ್ಲಿ ಜಾಗರಣೆ ಮತ್ತು ಭಂಡಾರ ಸೇರಿದಂತೆ ಪೂಜಾ ಕಾರ್ಯಕ್ರಮ ಆಯೋಜನೆ ಮಾಡುತ್ತದೆ. ಭಾರತದಾದ್ಯಂತ ಮಾತ್ರವಲ್ಲದೇ ಜಗತ್ತಿನೆಲ್ಲೆಡೆ ಪ್ರವಾಸಿಗರು ಈ ಸಂಘಟನೆಗೆ ಭಾರಿ ಮೊತ್ತದ ದೇಣಿಗೆ ನೀಡುತ್ತಾರೆ. ಶುಕ್ಲಾ ಅವರು ಕೂಡ ಮಂಗಳವಾರ ಈ ಖಾತೆಗೆ 11 ರೂ ಜಮೆ ಮಾಡಿದ್ದರು. ಎರಡನೇ ಬಾರಿ ಹಣ ವರ್ಗಾವಣೆ ಮಾಡುವಾಗ ಆದ ತಪ್ಪಿನಿಂದಾಗಿ ಭಾರಿ ಮೊತ್ತದ ಹಣ ಮಿಶ್ರಾ ಅವರ ಸಮಿತಿಯ ಖಾತೆಗೆ ಜಮೆಯಾಗಿತ್ತು. ಮಿಶ್ರಾ ಅವರ ಈ ಪ್ರಾಮಾಣಿಕತೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತ: ಸಂಕಷ್ಟದಲ್ಲಿ ಸಿಲುಕಿದ ದೆಹಲಿ ನಿವಾಸಿಗಳು