ನವದೆಹಲಿ:ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ದೇಶದ ನಾಗರಿಕರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ.
ದೀಪಾವಳಿಯ ಶುಭ ಸಂದರ್ಭದಲ್ಲಿ, ನಾನು ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲ ಭಾರತೀಯರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ಅಧ್ಯಕ್ಷ ಮುರ್ಮು X ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ದೀಪಾವಳಿಯು ಸಂತೋಷದ ಹಬ್ಬವಾಗಿದೆ, ಇದು ಕತ್ತಲೆ ಹೊಡೆದೋಡಿಸಿ ಬೆಳಕು ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವಾಗಿದೆ. ಈ ಹಬ್ಬವನ್ನು ವಿವಿಧ ಸಮುದಾಯಗಳು ಮತ್ತು ವರ್ಗದವರು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ಈ ಹಬ್ಬವು ಉಜ್ವಲ ಭವಿಷ್ಯದ ಭರವಸೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
"ದೀಪಾವಳಿಯ ಶುಭ ಸಂದರ್ಭದಲ್ಲಿ, ನಾವು ನಮ್ಮ ಆತ್ಮಸಾಕ್ಷಿಯನ್ನು ಬೆಳಗಿಸಲು ಸಂಕಲ್ಪ ಮಾಡಬೇಕು. ಪ್ರೀತಿ, ಸಹಾನುಭೂತಿ ಮತ್ತು ಸಾಮಾಜಿಕ ಸಾಮರಸ್ಯದಂತಹ ಉತ್ತಮ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಈ ಹಬ್ಬವು ವಂಚಿತರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಮತ್ತು ಅವರೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ಒಂದು ಸದಾವಕಾಶವಾಗಿದೆ. ಭಾರತದ ವೈಭವಯುತ ಸಂಸ್ಕೃತಿಯಲ್ಲಿ ಒಳ್ಳೆಯತನವನ್ನು ನಂಬುವ ಮೂಲಕ ಮತ್ತು ಆರೋಗ್ಯಕರ, ಸಮೃದ್ಧ ಮತ್ತು ಸಂವೇದನಾಶೀಲ ಸಮಾಜವನ್ನು ನಿರ್ಮಿಸಲು ಪ್ರತಿಜ್ಞೆ ಮಾಡಿ. ಅಂದ ಹಾಗೆ ನಾವು ಮಾಲಿನ್ಯ ಮುಕ್ತ ದೀಪಾವಳಿಯನ್ನು ಆಚರಿಸೋಣ ಎಂದು ರಾಷ್ಟ್ರಪತಿ ಇದೇ ವೇಳೆ ಕರೆ ನೀಡಿದ್ದಾರೆ.