ಕರ್ನಾಟಕ

karnataka

ETV Bharat / bharat

ಹರಿಯಾಣದಲ್ಲಿ ಮುರಿದುಬಿದ್ದ ಬಿಜೆಪಿ-ಜೆಜೆಪಿ ಮೈತ್ರಿ: ಸಿಎಂ ಖಟ್ಟರ್, ಸಂಪುಟ ಸದಸ್ಯರಿಂದ ಸಾಮೂಹಿಕ ರಾಜೀನಾಮೆ - Political Crisis In Haryana

ಹರಿಯಾಣದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ಸಂಪುಟದ ಎಲ್ಲ ಸಚಿವರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.

Hariyan  Manohar Lal Khattar
ಹರಿಯಾಣದಲ್ಲಿ ರಾಜಕೀಯ ಬಿಕ್ಕಟ್ಟು: ಸಿಎಂ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ

By ETV Bharat Karnataka Team

Published : Mar 12, 2024, 12:11 PM IST

Updated : Mar 12, 2024, 1:14 PM IST

ಚಂಡೀಗಢ:ಹರಿಯಾಣದಲ್ಲಿ ಬಿಜೆಪಿ ಮತ್ತು ಜೆಜೆಪಿ ಪಕ್ಷದ ಮೈತ್ರಿ ಮುರಿದುಬಿದ್ದ ಪರಿಣಾಮ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ಸಂಪುಟದ ಎಲ್ಲ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿಯಾಗಿ ಸಿಎಂ ಖಟ್ಟರ್ ರಾಜೀನಾಮೆ ಸಲ್ಲಿಸಿದರು.

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಲ್ಲಿ ಕ್ಷೇತ್ರ ಹಂಚಿಕೆ ಕುರಿತು ಒಮ್ಮತ ಮೂಡದ ಹಿನ್ನೆಲ್ಲೆಯಲ್ಲಿ ಬಿಕ್ಕಟ್ಟು ಉಂಟಾಗಿತ್ತು. ಇದರಿಂದ ಬಿಜೆಪಿ ಸಿಎಂ ಖಟ್ಟರ್ ಮತ್ತು ಸಂಪುಟ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಬೆನ್ನಲ್ಲೇ ಬಿಜೆಪಿ ತುರ್ತು ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಜೊತೆಗೆ ಪಕ್ಷೇತರ ಶಾಸಕರನ್ನು ಕೂಡ ಸಭೆಗೆ ಆಹ್ವಾನಿಸಿದೆ. ಇದರಿಂದಾಗಿ ಬಿಜೆಪಿಯು ಪಕ್ಷೇತರರ ಜೊತೆ ಸೇರಿ ಮತ್ತೆ ಸರ್ಕಾರ ರಚಿಸುವ ಸಾಧ್ಯತೆ ಇದೆ.

ಮನೋಹರ್ ಲಾಲ್ ಮಾತ್ರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಯೂ ಇದೆ. ಈ ಬಗ್ಗೆ ಜೆಜೆಪಿ ಸಂಚಾಲಕ ಅಜಯ್ ಚೌತಾಲಾ ಅವರು ಪ್ರತಿಕ್ರಿಯಿಸಿ, ಈ ಕುರಿತಂತೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.

ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ: ಮೂಲಗಳ ಪ್ರಕಾರ, 4 ಗಂಟೆಗೆ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ವರದಿಯಾಗಿದೆ. ರಾಜಭವನದಲ್ಲಿ ಹೂವುಗಳು ಮತ್ತು ಪುಸ್ತಕಗಳನ್ನು ಜೋಡಿಸಿ ಇಡಲಾಗಿದ್ದು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ತರುಣ್ ಚುಗ್ ಮತ್ತು ಅರ್ಜುನ್ ಮುಂಡಾ ಅವರನ್ನು ಕೇಂದ್ರದಿಂದ ವೀಕ್ಷಕರನ್ನಾಗಿ ಮಾಡಲಾಗಿದೆ. ಇವರಿಬ್ಬರೂ ದೆಹಲಿಯಿಂದ ಚಂಡೀಗಢಕ್ಕೆ ಬಂದಿದ್ದಾರೆ. ಇದೇ ವೇಳೆ ಮಾತನಾಡಿದ ಕನ್ವರ್ಪಾಲ್ ಗುರ್ಜರ್ ಅವರು, ಮನೋಹರ್ ಲಾಲ್ ಮುಖ್ಯಮಂತ್ರಿಯಾಗಿಯೇ ಇರುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ ಸಿಎಂ ಮುಖವನ್ನೇ ಬದಲಾಯಿಸಬಹುದು ಎಂಬ ಚರ್ಚೆಯೂ ಮುನ್ನೆಲೆಗೆ ಬಂದಿದೆ.

ಸಂಪುಟಕ್ಕೆ ಹೊಸ ಮುಖಗಳ ಸೇರ್ಪಡೆ ಸಾಧ್ಯತೆ: ಹರಿಯಾಣದ ಹೊಸ ಸಚಿವ ಸಂಪುಟದಲ್ಲಿ 4 ರಿಂದ 5 ಹೊಸ ಮುಖಗಳನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಇದರಲ್ಲಿ 2-3 ಪಕ್ಷೇತರರನ್ನೂ ಸಚಿವರನ್ನಾಗಿ ಮಾಡಬಹುದು ಎಂದು ಮೂಲಗಳು ತಿಳಿಸಿವೆ

ಹರಿಯಾಣದ ಉಪಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಅವರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲು ತೆರಳಿದ್ದರು. ಸೀಟು ಹಂಚಿಕೆ ವಿಷಯದ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದರು. ಉನ್ನತ ಮಟ್ಟದ ಸಂವಾದ ನಡೆದರೂ ಪರಸ್ಪರ ಒಪ್ಪಿಗೆಯಾಗದ ಹಿನ್ನೆಲೆ ಸೀಟು ಹಂಚಿಕೆ ಸೂತ್ರ ರೂಪುಗೊಳ್ಳಲಿಲ್ಲ.

ಇದನ್ನೂ ಓದಿ:ಮುಸ್ಲಿಮರಿಗೆ ಸಿಎಎಯಿಂದ ಸಮಸ್ಯೆಯಿಲ್ಲ: ದಿಲ್ಲಿ ಹಜ್​ ಕಮಿಟಿ, ಮುಸ್ಲಿಂ ಜಮಾತ್ ಸಂಘಟನೆ ಸ್ಪಷ್ಟನೆ

Last Updated : Mar 12, 2024, 1:14 PM IST

ABOUT THE AUTHOR

...view details