ಕರ್ನಾಟಕ

karnataka

ETV Bharat / bharat

100ಕ್ಕೂ ಹೆಚ್ಚು ಬಾಲಕಿಯರ ಮೇಲೆ ಅತ್ಯಾಚಾರ-ಬ್ಲ್ಯಾಕ್​ಮೇಲ್​ ಪ್ರಕರಣ: ಉಳಿದ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ ಕೋರ್ಟ್​ - 100 Girls Rape Victims

1992 ರ ಅಜ್ಮೇರ್ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣದ ಉಳಿದ ಆರು ಆರೋಪಿಗಳನ್ನು ಪೋಕ್ಸೊ ಕೋರ್ಟ್-2 ಮಂಗಳವಾರ ದೋಷಿಗಳೆಂದು ಘೋಷಿಸಿ ಆದೇಶಿಸಿದೆ.

1992 AJMER RAPE AND BLACKMAIL  POSCO COURT CONVICTS 6  OBSCENE PHOTOGRAPHS  AJMER POCSO COURT RAPE BLACKMAIL
100ಕ್ಕೂ ಹೆಚ್ಚು ಬಾಲಕಿಯರ ಅತ್ಯಾಚಾರ-ಬ್ಲ್ಯಾಕ್​ಮೇಲ್​ ಪ್ರಕರಣ (ETV Bharat)

By ETV Bharat Karnataka Team

Published : Aug 21, 2024, 6:47 AM IST

ಅಜ್ಮೇರ್ (ರಾಜಸ್ಥಾನ): 1992 ರಲ್ಲಿ ಅಜ್ಮೇರ್‌ನಲ್ಲಿ 100 ಕ್ಕೂ ಹೆಚ್ಚು ಶಾಲಾ ಬಾಲಕಿಯರನ್ನು ಲೈಂಗಿಕವಾಗಿ ಶೋಷಣೆಗೆ ಒಳಪಡಿಸಿದ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಅಜ್ಮೇರ್‌ ಜಿಲ್ಲೆಯ ವಿಶೇಷ ಮಕ್ಕಳ ಲೈಂಗಿಕ ಅಪರಾಧಗಳ (ಪೋಕ್ಸೊ) ಕಾಯ್ದೆ ನ್ಯಾಯಾಲಯವು ಮಂಗಳವಾರ ಉಳಿದ ಆರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ.

ಸಯ್ಯದ್ ನಫೀಸ್ ಚಿಸ್ತಿ, ಇಕ್ಬಾಲ್ ಭಾಟಿ, ಸಲೀಂ ಚಿಶ್ತಿ, ಸೊಹೈಲ್ ಘನಿ, ಜಮೀರ್ ಮತ್ತು ನಸೀಮ್ ಅಲಿಯಾಸ್ ಟಾರ್ಜನ್ ಎಂಬ ಆರು ಆರೋಪಿಗಳನ್ನು ಎರಡೂ ಕಡೆಯ ವಿಚಾರಣೆಯ ನಂತರ ನ್ಯಾಯಾಲಯವು ತಪ್ಪಿತಸ್ಥರೆಂದು ಪರಿಗಣಿಸಿದೆ ಎಂದು ಪ್ರಾಸಿಕ್ಯೂಷನ್ ಸಹಾಯಕ ನಿರ್ದೇಶಕ ವೀರೇಂದ್ರ ಸಿಂಗ್ ಹೇಳಿದ್ದಾರೆ. ಪೋಕ್ಸೊ ನ್ಯಾಯಾಲಯ-2 ಅಪರಾಧಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಆರು ಆರೋಪಿಗಳ ಪೈಕಿ ಐವರನ್ನು ಈ ಹಿಂದೆ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಆರೋಪಿಗಳು ಪ್ರಸ್ತುತ ಜಾಮೀನಿನ ಮೇಲೆ ಇದ್ದಾರೆ. ಅವರಲ್ಲಿ ಸೈಯದ್ ನಫೀಸ್ ಚಿಶ್ತಿ ಎಂಟು ವರ್ಷ, ಮುಂಬೈ ನಿವಾಸಿ ಇಕ್ಬಾಲ್ ಭಾಟಿ 3.5 ವರ್ಷ, ಸೊಹೈಲ್ ಘನಿ ನಾಲ್ಕು ವರ್ಷ, ನಸೀಮ್ ಮತ್ತು ಸಲೀಂ ಚಿಶ್ತಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ.

ಪ್ರಮುಖವಾಗಿ, ನಾಲ್ವರು ಅಪರಾಧಿಗಳಾದ ಇಶ್ರತ್, ಅನ್ವರ್ ಚಿಶ್ತಿ, ಶಂಶು ಭೀಷ್ಟಿ ಮತ್ತು ಪುಟ್ಟನ್ ಅಲಹಬಾಡಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದಾದ ಬಳಿಕ ಸುಪ್ರೀಂ ಕೋರ್ಟ್ ಅವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅದೇ ರೀತಿ, ಪ್ರಮುಖ ಆರೋಪಿ ಸೈಯದ್ ಫಾರೂಕ್ ಚಿಶ್ತಿಗೆ ನ್ಯಾಯಾಲಯವು 2007 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕೆ ಇಳಿಸಿತ್ತು.

2001ರಲ್ಲಿ ನ್ಯಾಯಾಲಯವು ಈ ಪ್ರಕರಣದಲ್ಲಿ ಮಹೇಶ್ ಲೋಧಾನಿ, ಹರೀಶ್ ತೋಲಾನಿ, ಕೈಲಾಶ್ ಸೋನಿ ಮತ್ತು ಪರ್ವೇಜ್ ಅನ್ಸಾರಿ ಅವರನ್ನು ಖುಲಾಸೆಗೊಳಿಸಿತ್ತು. ಇನ್ನೋರ್ವ ವ್ಯಕ್ತಿ ಅಲ್ಮಾಸ್ ಮಹಾರಾಜ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ತನ್ನ ಹೆಸರು ಕಾಣಿಸಿಕೊಂಡ ನಂತರ ಆತ ಅಮೆರಿಕಕ್ಕೆ ಪಲಾಯನ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಅಲ್ಲಿ ಆತ ಅಮೆರಿಕದ ಪೌರತ್ವವನ್ನೂ ಪಡೆದುಕೊಂಡಿದ್ದಾನೆ. ತಲೆಮರೆಸಿಕೊಂಡಿದ್ದರೂ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ಅದು ಇನ್ನೂ ನಿರ್ಧಾರವಾಗಿಲ್ಲ.

ಈ ಪ್ರಕರಣವು 1992 ರ ಹಿಂದಿನ ಅಜ್ಮೇರ್‌ ಯೂತ್ ಕಾಂಗ್ರೆಸ್‌ನ ಅಂದಿನ ಅಧ್ಯಕ್ಷ ಫಾರೂಕ್ ಚಿಶ್ತಿ, ಅವರ ಸಹವರ್ತಿ ನಫೀಸ್ ಚಿಶ್ತಿ ಮತ್ತು ಸಹಾಯಕರು ಅನೇಕ ಹುಡುಗಿಯರನ್ನು ತೋಟದ ಮನೆಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾರ್ಟಿಗಳಿಗೆ ಕರೆದರು ಮತ್ತು ಅಲ್ಲಿ ಮಾದಕವಸ್ತು ಮತ್ತು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲದೆ, ಅವರ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದುಕೊಂಡು ಬ್ಲ್ಯಾಕ್​ಮೇಲ್​ ಶುರುಮಾಡಲು ಪ್ರಾರಂಭಿಸಿದರು.

ಕೊನೆಗೆ ಕೆಲ ಹುಡುಗಿಯರು ಧೈರ್ಯ ಮಾಡಿ ಪೊಲೀಸರ ಮೊರೆ ಹೋಗಿ ದೂರು ನೀಡಿದರು. ಆದರೂ ಈ ಸಂತ್ರಸ್ತರಿಗೆ ನಿರಂತರವಾಗಿ ಬೆದರಿಕೆಗಳು ಬರುತ್ತಿದ್ದವು ಮತ್ತು ಅವರು ಮತ್ತೆ ಪೊಲೀಸರ ಬಳಿಗೆ ಹೋಗಲಿಲ್ಲ. ಈ ಮಧ್ಯೆ ಅಜ್ಮೇರ್‌ನ ಸ್ಟುಡಿಯೊದಿಂದ ಕೆಲವು ಅಶ್ಲೀಲ ಛಾಯಾಚಿತ್ರಗಳು ಸೋರಿಕೆಯಾಗಿ ವೈರಲ್ ಆಗಿದ್ದವು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. 100ಕ್ಕೂ ಹೆಚ್ಚು ಶಾಲಾ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಬಹಿರಂಗವಾಗಿದ್ದವು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾದ ಬಳಿಕವೂ ಯಾವೊಬ್ಬ ಬಾಲಕಿಯೂ ಅವರ ವಿರುದ್ಧ ಸಾಕ್ಷಿ ಹೇಳಲು ಮುಂದೆ ಬರಲಿಲ್ಲ.

ನಂತರ ಪೊಲೀಸರು ಛಾಯಾಚಿತ್ರಗಳ ಆಧಾರದ ಮೇಲೆ ಸಂತ್ರಸ್ತರನ್ನು ಹುಡುಕಲು ಪ್ರಾರಂಭಿಸಿದರು. ಬಲಿಯಾದವರಲ್ಲಿ ಕೆಲವರು ಆತ್ಮಹತ್ಯೆಯಿಂದ ಸತ್ತರೆ ಕೆಲವರು ನಗರವನ್ನು ತೊರೆದರು. ಪೊಲೀಸರು ಕಷ್ಟಪಟ್ಟು ಕೆಲವು ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಂಡರು ನ್ಯಾಯಾಲಯಕ್ಕೆ ಸಲ್ಲಿಸಿದರು.

ಓದಿ:ಮ್ಯಾನೇಜ್‌ಮೆಂಟ್, ಎನ್‌ಆರ್‌ಐ ಕೋಟಾದ ಸೀಟುಗಳ ಕುರಿತ ಏಕಸದಸ್ಯ ಪೀಠದ ಆದೇಶಕ್ಕೆ ತಡೆ - High Court

ABOUT THE AUTHOR

...view details