ಕರ್ನಾಟಕ

karnataka

ETV Bharat / bharat

ಬಿಜೆಪಿ ಅಭ್ಯರ್ಥಿಯಾಗಿರುವ ಸಂದೇಶ್‌ಖಾಲಿ ಸಂತ್ರಸ್ತೆ ರೇಖಾ ಪಾತ್ರ 'ಶಕ್ತಿ ಸ್ವರೂಪ' ಎಂದ ಮೋದಿ - Rekha Patra

ಪಶ್ಚಿಮ ಬಂಗಾಳದ ಬಸಿರ್‌ಹತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರಾ ಜತೆಗೆ ಮಂಗಳವಾರ ಪ್ರಧಾನಿ ಮೋದಿ ಮಾತನಾಡಿದರು.

BJP Basirhat candidate Rekha Patra  Prime Minister Narendra Modi  Lok Sabha Election  Lok Sabha Election 2024
ಬಿಜೆಪಿಯ ಬಸಿರ್‌ಹತ್ ಅಭ್ಯರ್ಥಿ ರೇಖಾ ಪಾತ್ರಾ ಜೊತೆಗೆ ಮಾತನಾಡಿದ ಪ್ರಧಾನಿ: ರೇಖಾರನ್ನು 'ಶಕ್ತಿ ಸ್ವರೂಪ'ವೆಂದು ಶ್ಲಾಘಿಸಿದ ಮೋದಿ

By PTI

Published : Mar 27, 2024, 10:05 AM IST

ನವದೆಹಲಿ:ಮಹಿಳೆಯರ ಸಂಕಷ್ಟಗಳನ್ನು ತೋರಿಸಿದ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಎಂಬಲ್ಲಿನ ಸಂತ್ರಸ್ತರಲ್ಲಿ ಒಬ್ಬರಾದ ಬಸಿರ್‌ಹತ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರ ಅವರನ್ನು ಪ್ರಧಾನಿ ನರೇಂದ್ರ ಮೋದಿ 'ಶಕ್ತಿ ಸ್ವರೂಪ' ಎಂದು ಶ್ಲಾಘಿಸಿದ್ದಾರೆ.

ಸ್ಥಳೀಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮುಖಂಡ ಶಾಜಹಾನ್ ಶೇಖ್ ಮತ್ತು ಆತನ ಆಪ್ತರು ನಡೆಸಿದ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದ ಸಂದೇಶಖಾಲಿ ಗ್ರಾಮ ವ್ಯಾಪ್ತಿಯ ಪಾತ್ರ ಅವರನ್ನು ಬಸಿರ್ಹತ್ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರಚಾರದ ಸಿದ್ಧತೆ ಮತ್ತು ಇತರ ವಿಷಯಗಳ ಕುರಿತು ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು.

ರೇಖಾ ಅವರು ತಮ್ಮ ಪ್ರದೇಶದಲ್ಲಿ ಮಹಿಳೆಯರು ಎದುರಿಸಿದ ಸಂಕಷ್ಟದ ಪರಿಸ್ಥಿತಿಗಳ ಕುರಿತು ವಿವರಿಸಿದರು. ಪ್ರಧಾನಿ ಮೋದಿ ನಮ್ಮ ಬೆಂಬಲಕ್ಕೆ ನಿಂತಿರುವುದು ಸಂತೋಷವಾಗಿದೆ ಎಂದು ಪಾತ್ರಾ ತಿಳಿಸಿದರು.

''ಕ್ಷೇತ್ರದ ಕೆಟ್ಟ ಪರಿಸ್ಥಿತಿಯಿಂದಾಗಿ ನಾನು 2011ರಿಂದ ಮತ ಚಲಾಯಿಸಿಲ್ಲ'' ಎಂದು ರೇಖಾ ಇದೇ ವೇಳೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ''ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುತ್ತದೆ. ಎಲ್ಲರೂ ಮತದಾನ ಮಾಡುವುದನ್ನು ಖಚಿತಪಡಿಸುತ್ತದೆ'' ಎಂದು ಭರವಸೆ ನೀಡಿದರು.

''ತನ್ನ ಸುತ್ತಲಿನ ಪ್ರದೇಶಗಳಲ್ಲಿ ಟಿಎಂಸಿ ಬೆಂಬಲಿಗರು ಆರಂಭದಲ್ಲಿ ನನಗೆ ಬಿಜೆಪಿಯಿಂದ ಟಿಕೆಟ್​ ನೀಡಿರುವುದನ್ನು ವಿರೋಧಿಸಿದರು. ಆದರೆ, ಇದೀಗ ಪರಿಸ್ಥಿತಿ ಸುಧಾರಿಸಿದೆ. ಕ್ಷೇತ್ರದಲ್ಲಿ ನನಗೆ ಯಾರೊಂದಿಗೂ ದ್ವೇಷವಿಲ್ಲ" ಎಂದು ಪಾತ್ರಾ ಹೇಳಿದರು.

ರೇಖಾ ಪಾತ್ರ 'ಶಕ್ತಿ ಸ್ವರೂಪ'- ಮೋದಿ:''ನಾನು ಬಡ ಕುಟುಂಬದಿಂದ ಬಂದವಳು. ಪತಿ ಕೇರಳ ಮತ್ತು ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಕೆಲಸಕ್ಕಾಗಿ ಯಾರೂ ಕೂಡಾ ಬೇರೆ ರಾಜ್ಯಗಳಿಗೆ ವಲಸೆ ಹೋಗದಂತೆ ಕ್ರಮ ಕೈಗೊಳ್ಳುತ್ತೇನೆ. ಈ ಭಾಗದ ಜನರಿಗೆ ಇಲ್ಲಿ ಮಾತ್ರ ಉದ್ಯೋಗ ಸಿಗಬೇಕಿದೆ'' ಎಂದು ರೇಖಾ ತಿಳಿಸಿದರು.

ಈ ವೇಳೆ, ಪ್ರಧಾನಿ ಮೋದಿ ರೇಖಾ ಪಾತ್ರ ಅವರನ್ನು 'ಶಕ್ತಿ ಸ್ವರೂಪ' ಎಂದು ಶ್ಲಾಘಿಸಿದರು. ಶಕ್ತಿ ಎಂಬುದು ಹಿಂದೂ ಧರ್ಮದ ಪದವಾಗಿದ್ದು, ದುರ್ಗಾ ಮತ್ತು ಕಾಳಿಯಂತಹ ದೇವತೆಗಳಿಗೆ ಸಂಬಂಧಿಸಿದೆ. "ನೀವು ಸಂದೇಶಖಾಲಿಯಲ್ಲಿ ಯುದ್ಧ ಮಾಡಿದ್ದೀರಿ, ನೀವು 'ಶಕ್ತಿ ಸ್ವರೂಪ' ಎಂದರು.

''ತೃಣಮೂಲ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರ ವಿರುದ್ಧ ಹೇಗೆ ಕೆಲಸ ಮಾಡುತ್ತಿದೆ ಎಂಬ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಜನರ ಮಧ್ಯೆಯೇ ಕೆಲಸ ಮಾಡಿ, ಟಿಎಂಸಿ ಸರ್ಕಾರವು ಜನರಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂಬ ಬಗ್ಗೆ ಜನರಲ್ಲಿ ಅರಿವಾಗಬೇಕು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಯೋಜನೆಗಳನ್ನು ಜಾರಿಗೆ ತರಲು ಟಿಎಂಸಿ ಅನುಮತಿಸುವುದಿಲ್ಲ. ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು" ಎಂದು ಪ್ರಧಾನಿ ಮೋದಿ ದೂರಿದರು.

ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳಲ್ಲಿ ಒಂದಾದ ಬಸಿರ್ಹತ್ ಕ್ಷೇತ್ರವನ್ನು ಪ್ರಸ್ತುತ ಟಿಎಂಸಿ ಪ್ರತಿನಿಧಿಸುತ್ತದೆ. ಟಿಎಂಸಿಯಿಂದ ಅಮಾನತುಗೊಂಡಿರುವ ಶೇಖ್ ಮತ್ತು ಆತನ ಕೆಲವು ಸಹಚರರನ್ನು ಬಂಧಿಸಲಾಗಿದ್ದು, ಸದ್ಯ ಸಿಬಿಐ ವಶದಲ್ಲಿದ್ದಾರೆ.

ಇದನ್ನೂ ಓದಿ:ನಾಗ್ಪುರದಿಂದ ನಾಗೌರ್‌ವರೆಗೆ ಕಾಂಗ್ರೆಸ್​ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಪ್ರದರ್ಶನ - Lok Sabha Election

ABOUT THE AUTHOR

...view details