ಕರ್ನಾಟಕ

karnataka

ETV Bharat / bharat

ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್​ ಷರೀಫ್​​ಗೆ ಪ್ರಧಾನಿ ಮೋದಿ ಅಭಿನಂದನೆ - Pakistan Prime Minister

ಎರಡನೇ ಬಾರಿ ಪಾಕಿಸ್ತಾನದ ಪ್ರಧಾನಿ ಹುದ್ದೆಗೇರಿದ ಶೆಹಬಾಜ್​ ಷರೀಫ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ತಿಳಿಸಿದ್ದಾರೆ.

pm-modi-congratulates-shehbaz-sharif-on-taking-oath-as-prime-minister-of-pakistan
pm-modi-congratulates-shehbaz-sharif-on-taking-oath-as-prime-minister-of-pakistan

By PTI

Published : Mar 5, 2024, 11:53 AM IST

ನವದೆಹಲಿ: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶೆಹಬಾಜ್​ ಷರೀಫ್​​​ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಪಾಕಿಸ್ತಾನ್​​ ಮುಸ್ಲಿಂ ಲೀಗ್​ ಪಕ್ಷದ 77 ವರ್ಷದ ಹಿರಿಯ ನಾಯಕ ಶೆಹಬಾಜ್ ಪ್ರಧಾನಿಯಾಗಿ ಎರಡನೇ ಬಾರಿಗೆ​ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಭ ಹಾರೈಸಿರುವ ಮೋದಿ, ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶೆಹಬಾಜ್​ ಅವರಿಗೆ ಅಭಿನಂದನೆಗಳು ಎಂದು ಪೋಸ್ಟ್​ ಮಾಡಿದ್ದಾರೆ.

ಫೆಬ್ರವರಿ 8ರಂದು ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಷರೀಫ್​ ನೇತೃತ್ವದ ಮುಸ್ಲಿಂ ಲೀಗ್​ ನವಾಜ್​ (ಪಿಎಲ್​ಎಲ್​-ಎನ್​) ಎರಡನೇ ಸ್ಥಾನ ಗಳಿಸಿತ್ತು. ಸ್ವತಂತ್ರ ಅಭ್ಯರ್ಥಿಯಾಗಿ ಕಾರಾಗೃಹದಿಂದಲೇ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರ ಪಾಕಿಸ್ತಾನ್​ ತೆಹ್ರಿಕ್​-ಇ-ಇನ್ಸಾಫ್​ (ಪಿಟಿಐ) ಬಹುತೇಕ ಸ್ಥಾನಗಳನ್ನು ಗೆದ್ದುಕೊಂಡಿತಾದರೂ ಸಂಸತ್ತಿನಲ್ಲಿ ಬಹುಮತ ಪಡೆಯುವಲ್ಲಿ ವಿಫಲವಾಗಿತ್ತು.

ಕಳೆದ ಏಪ್ರಿಲ್​ನಲ್ಲಿ ಇಮ್ರಾನ್​ ಖಾನ್​ ಬಹುಮತ ಸಾಬೀತುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಶೆಹಬಾಬ್​ ಷರೀಫ್‌ ಏಪ್ರಿಲ್​ 2022ರಿಂದ ಆಗಸ್ಟ್​ 2023ರವರೆಗೆ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ಶೆಹಬಾಜ್ ಪಾಕಿಸ್ತಾನದಲ್ಲಿ ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್​​ ಷರೀಫ್​ ಅವರ ಕಿರಿಯ ಸಹೋದರ.

ಕಳೆದ ತಿಂಗಳು ನಡೆದ ಸಂಸತ್ತಿನ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬಂದಿರಲಿಲ್ಲ. ಷರೀಫ್​​ ಅವರ ಪಾಕಿಸ್ತಾನ್​ ಮುಸ್ಲಿಂ ಲೀಪ್​ ಪಕ್ಷ ಕೂಡ ಸರ್ಕಾರ ರಚಿಸುವಷ್ಟು ಬಹುಮತ ಪಡೆದಿರಲಿಲ್ಲ. ಆದರೆ, ಬಹುಮತ ಪಡೆದ ಪಿಎಂಎಲ್-ಎನ್​ ಪಿಪಿಪಿ​ ಮತ್ತು ಎಂಕ್ಯೂಎಂ ಪಕ್ಷಗಳೊಂದಿಗೆ ಮೈತ್ರಿಗೆ ಮುಂದಾಗಿ ಎರಡನೇ ಸ್ಥಾನ ಪಡೆಯುವ ಹಾದಿಯನ್ನು ಸುಗಮಗೊಳಿಸಿಕೊಂಡಿತು.

ದೇಶದ ರಾಜಧಾನಿ ಇಸ್ಲಾಮಾಬಾದ್​ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶೆಹಬಾಜ್​ ಷರೀಫ್​ ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷ ಆರೀಫ್​ ಪ್ರಮಾಣವಚನ ಬೋಧಿಸಿದರು.(ಪಿಟಿಐ)

ಇದನ್ನೂ ಓದಿ: ಪಾಕಿಸ್ತಾನ: ಖೈಬರ್ ಪಖ್ತುನಖ್ವಾ ಸಿಎಂ ಆಗಿ ಪಿಟಿಐ ಅಭ್ಯರ್ಥಿ ಗಂಡಾಪುರ್ ಆಯ್ಕೆ

ABOUT THE AUTHOR

...view details