ಹೈದರಾಬಾದ್: ಹೈದರಾಬಾದ್ನಿಂದ ಕೌಲಲಾಂಪುರಕ್ಕೆ ಹೊರಟಿದ್ದ ಮಲೇಶಿಯಾ ಏರ್ಲೈನ್ಸ್ ವಿಮಾನ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ತುರ್ತು ಭೂಸ್ಪರ್ಶ ಮಾಡಿದ್ದು, ಭಾರೀ ಅವಘಡವೊಂದು ತಪ್ಪಿರುವ ಘಟನೆ ಇಂದು ನಡೆದಿದೆ.
ಇಂಜಿನ್ನಲ್ಲಿ ಬೆಂಕಿ: ಟೇಕ್ ಆಫ್ ಆದ 15 ನಿಮಿಷಗಳಲ್ಲೇ ವಿಮಾನ ತುರ್ತು ಭೂಸ್ಪರ್ಶ - FIRE IN THE FLIGHT ENGINE - FIRE IN THE FLIGHT ENGINE
ಕೌಲಲಾಂಪುರಕ್ಕೆ ಹೊರಟಿದ್ದ ಮಲೇಶಿಯಾ ಏರ್ಲೈನ್ಸ್ ವಿಮಾನ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ತುರ್ತು ಭೂಸ್ಪರ್ಶ ಮಾಡಿದೆ. ಸಂಭವಿಸಬಹುದಾಗಿದ್ದ ಭಾರೀ ಅವಘಡ ತಪ್ಪಿದ್ದರಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Published : Jun 20, 2024, 12:11 PM IST
ವಿಮಾನ ಟೇಕ್ ಆಫ್ ಆದ 15 ನಿಮಿಷಗಳಲ್ಲಿ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ತಕ್ಷಣವೇ ಪೈಲಟ್ ಭೂಸ್ಪರ್ಶಕ್ಕೆ ಅನುಮತಿ ಕೇಳಿದ್ದಾರೆ. ಅಪಘಾತದ ಗಂಭೀರತೆಯನ್ನು ಅರಿತ ಎಟಿಸಿ ಅಧಿಕಾರಿಗಳು ತುರ್ತು ಭೂಸ್ಪರ್ಶಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ಸಿಬ್ಬಂದಿ ಸೇರಿ 138 ಮಂದಿ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದು, ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ:ವಿಮಾನ ಟೇಕ್ ಆಫ್ ಆದ ಕೆಲ ನಿಮಿಷಗಳಲ್ಲೇ ಬೆಂಕಿ: ಆ ಹಕ್ಕಿಯೇ ಇಷ್ಟಕ್ಕೆಲ್ಲಾ ಕಾರಣವಾ?