ಎರ್ನಾಕುಲಂ (ಕೇರಳ):ಫ್ಲಾಟ್‌ನಿಂದ ಬಿದ್ದು ಸಾವನ್ನಪ್ಪಿದ ತನ್ನ ಸಲಿಂಗಕಾಮಿ ಸಂಗಾತಿಯ ಮೃತದೇಹವನ್ನು ನೀಡುವಂತೆ ಯುವಕನೊಬ್ಬ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಕೇರಳದ ಹೈಕೋರ್ಟ್ ಪೊಲೀಸರು ಮತ್ತು ಖಾಸಗಿ ಆಸ್ಪತ್ರೆಯಿಂದ ವಿವರಣೆ ಕೇಳಿದೆ. ಕಲಮಶ್ಶೇರಿ ಪೊಲೀಸರು ವಿವರಣೆ ನೀಡುವಂತೆ ಕೇಳಲಾಗಿದೆ. ಅರ್ಜಿ ಇತ್ಯರ್ಥವಾಗುವವರೆಗೆ ಮೃತದೇಹವನ್ನು ಸುರಕ್ಷಿತವಾಗಿಡುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಇಬ್ಬರೂ ಕಲಮಸ್ಸೆರಿಯಲ್ಲಿ ಆರು ವರ್ಷಗಳ ಕಾಲ ಲಿವಿಂಗ್ ಟು ಗೆದರ್( ಸಹಜೀವನ) ನಲ್ಲಿದ್ದರು. ಫೆಬ್ರವರಿ 3 ರಂದು, ಪಾಲುದಾರರಲ್ಲಿ ಒಬ್ಬರು ಫ್ಲಾಟ್‌ನಿಂದ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಅವರು ಫೆಬ್ರವರಿ 4 ರಂದು ನಿಧನರಾಗಿದ್ದರು. 1.3 ಲಕ್ಷ ಮೊತ್ತದ ಬಿಲ್ ಪಾವತಿಸದ ಕಾರಣ ಮೃತದೇಹವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿಲ್ಲ. ನಂತರ ಯುವಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.
ಪಾಲುದಾರ ಎಂದು ಹೇಳಿಕೊಳ್ಳುವ ಅರ್ಜಿದಾರರಿಗೆ ಮೃತದೇಹವನ್ನು ಸ್ವೀಕರಿಸಲು ಯಾವುದೇ ಕಾನೂನುಬದ್ಧತೆ ಇಲ್ಲ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ. ಹೈಕೋರ್ಟ್ ಇಂದು ಮತ್ತೆ ಅರ್ಜಿಯ ವಿಚಾರಣೆ ನಡೆಸಲಿದೆ.