ಕರ್ನಾಟಕ

karnataka

ETV Bharat / bharat

ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ವಿಚಾರ: ಜೆಮ್‌ಶೆಡ್‌ಪುರದ ವ್ಯಕ್ತಿ ಬಂಧಿಸಿದ ಮುಂಬೈ ಪೊಲೀಸರು

ನಟ ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಿ ಮುಂಬೈ ಟ್ರಾಫಿಕ್​ ಪೊಲೀಸರಿಗೆ ಸಂದೇಶ ರವಾನಿಸಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

Mumbai police arrests man from Jamshedpu
ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ವಿಚಾರ: ಜೆಮ್‌ಶೆಡ್‌ಪುರದ ವ್ಯಕ್ತಿ ಬಂಧಿಸಿದ ಮುಂಬೈ ಪೊಲೀಸರು (File ANI)

By ANI

Published : 9 hours ago

ಮುಂಬೈ, ಮಹಾರಾಷ್ಟ್ರ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ, ಇಬ್ಬರ ನಡುವಣ ದ್ವೇಷ ಕೊನೆಗೊಳಿಸಲು 5 ಕೋಟಿ ರೂಪಾಯಿ ನೀಡುವಂತೆ ಒತ್ತಾಯಿಸಿದ್ದ ಜೆಮ್‌ಶೆಡ್‌ಪುರದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಟ್ರಾಫಿಕ್ ಪೊಲೀಸರಿಗೆ ಈ ಬೆದರಿಕೆ ಸಂದೇಶ ಬಂದ ನಂತರ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ ಜೆಮ್ಶೆಡ್‌ಪುರದ ಸ್ಥಳೀಯ ಪೊಲೀಸರ ಸಹಾಯದಿಂದ ಈ ಬೆದರಿಕೆ ಸಂದೇಶದ ಬಗ್ಗೆ ತನಿಖೆ ನಡೆಸಲಾಯಿತು ಮತ್ತು ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರನ್ನು ಮುಂಬೈಗೆ ಕರೆತರಲಾಗುವುದು ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆದರಿಕೆ ಸಂದೇಶ ರವಾನಿಸಿ, ಬಳಿಕ ಕ್ಷಮೆ ಕೇಳಿದ್ದ ವ್ಯಕ್ತಿ:ಅಕ್ಟೋಬರ್ 18 ರಂದು ಖಾನ್ ಅವರಿಗೆ ಬೆದರಿಕೆ ಹಾಕಿ ಸಂದೇಶ ಕಳುಹಿಸಲಾಗಿತ್ತು. ಆದರೆ ಅ.21 ರಂದು ಸಂದೇಶ ಕಳುಹಿಸಿದವರಿಂದಲೇ ಕ್ಷಮೆಯಾಚನೆ ಸಂದೇಶ ಮುಂಬೈ ಟ್ರಾಫಿಕ್​ ಪೊಲೀಸರಿಗೆ ಬಂದಿತ್ತು. "ತಪ್ಪಾಗಿ ಈ ಸಂದೇಶ ಕಳುಹಿಸಲಾಗಿದೆ" ಎಂದು ಆ ಬಳಿಕ ಕ್ಷಮೆಯಾಚಿಸಲಾಗಿತ್ತು. ಮುಂಬೈ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಸಂದೇಶ ಬಂದಿದ್ದು ಎಲ್ಲಿಂದ ಎಂದು ತಲೆ ಕಡೆಸಿಕೊಂಡು ಹುಡುಕಾಟಕ್ಕೆ ಬಿದ್ದಿದ್ದರು. ಅಂತಿಮವಾಗಿ ಈ ಸಂದೇಶವನ್ನು ಕಳುಹಿಸಿದ ವ್ಯಕ್ತಿಯ ಸ್ಥಳ ಜಾರ್ಖಂಡ್‌ ಎಂಬುದನ್ನು ಪತ್ತೆ ಹಚ್ಚಿದ್ದರು.

ಮುಂಬೈ ಪೊಲೀಸರಿಗೆ ಕಳುಹಿಸಿದ ಬೆದರಿಕೆ ಸಂದೇಶದಲ್ಲಿದ್ದಿದ್ದೇನು?:ಇನ್ನು ಸಂದೇಶ ಕಳುಹಿಸಿದ ವ್ಯಕ್ತಿ ತಾನು ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ಗೆ ಹತ್ತಿರವಾಗಿರುವುದಾಗಿ ಹೇಳಿಕೊಂಡಿದ್ದಾನೆ ಮತ್ತು ಸುಲಿಗೆ ಹಣವನ್ನು ನೀಡದಿದ್ದರೆ ನಟನ ಜೀವಕ್ಕೆ ಅಪಾಯವನ್ನುಂಟುಮಾಡುವುದಾಗಿ ಸಂದೇಶದಲ್ಲಿ ಹೇಳಿಕೊಂಡಿದ್ದ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಈ ಸಂದೇಶವನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದ್ವೇಷವನ್ನು ಕೊನೆಗೊಳಿಸಲು ಬಯಸಿದರೆ ಅವರು 5 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಹಣ ನೀಡದಿದ್ದರೆ, ಸಲ್ಮಾನ್ ಖಾನ್ ಅವರ ಸ್ಥಿತಿ ಬಾಬಾ ಸಿದ್ದಿಕ್ ಗಿಂತ ಕೆಟ್ಟದಾಗುತ್ತದೆ‘‘ ಎಂದು ಈ ವ್ಯಕ್ತಿ ಮುಂಬೈ ಟ್ರಾಫಿಕ್ ಪೊಲೀಸರಿಗೆ ಬೆದರಿಕೆ ಸಂದೇಶ ರವಾನಿಸಿದ್ದ. ಈ ಸಂಬಂಧ ವರ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಇದನ್ನು ಓದಿ:ಖಾನ್​ ಮೇಲಿನ ಬಿಷ್ಣೋಯಿ ವೈಷಮ್ಯ ಕೊನೆಗೊಳಿಸಲು 5 ಕೋಟಿ ನೀಡುವಂತೆ ಬೆದರಿಕೆ ಹಾಕಿದ್ದ ವ್ಯಕ್ತಿಯಿಂದ ಕ್ಷಮೆಯಾಚನೆ!

ABOUT THE AUTHOR

...view details