ಮುಂಬೈ(ಮಹಾರಾಷ್ಟ್ರ):2025ರ ವಿಶ್ವದ ಅತ್ಯಂತ ರೋಮ್ಯಾಂಟಿಕ್ ನಗರಗಳಲ್ಲಿ ಪಟ್ಟಿ ಬಿಡುಗಡೆಯಾಗಿದ್ದು, ಮಹಾರಾಷ್ಟ್ರದ ರಾಜಧಾನಿ ಮತ್ತು ಭಾರತದ ಆರ್ಥಿಕ ರಾಜಧಾನಿಯಾಗಿರುವ ಮುಂಬೈ 49ನೇ ಸ್ಥಾನ ಪಡೆದಿದೆ. ಈ ಮೂಲದ ದೇಶದ ಅತ್ಯಂತ ರೋಮ್ಯಾಂಟಿಕ್ ನಗರವಾಗಿ ಹೊರಹೊಮ್ಮಿದೆ.
ಆಹಾರ, ಸಂಸ್ಕೃತಿ, ನೈಟ್ ಲೈಫ್, ಜೀವನ ನಿರ್ವಹಣೆಗೆ ಆಗುವ ಖರ್ಚು ಮತ್ತು ಜೀವನದ ಗುಣಮಟ್ಟದ ಆಧಾರದ ಮೇಲೆ ವಿಶ್ವದಾದ್ಯಂತ ಜಾಗತಿಕ ಸಮೀಕ್ಷೆ ನಡೆಸಿ ಅತ್ಯಂತ ರೋಮ್ಯಾಂಟಿಕ್ ನಗರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸಮೀಕ್ಷೆಯ ಪ್ರಕಾರ, ದಕ್ಷಿಣ ಆಫ್ರಿಕಾದ ಕೇಪ್ ಟೌನ್, ಬ್ಯಾಂಕಾಕ್, ನ್ಯೂಯಾರ್ಕ್ ಸಿಟಿ, ಮೆಲ್ಬೋರ್ನ್ ಮತ್ತು ಲಂಡನ್ ಮೊದಲ ಐದು ಸ್ಥಾನಗಳನ್ನು ಅಲಂಕರಿಸಿವೆ. ಮುಂಬೈ 49ನೇ ಸ್ಥಾನದಲ್ಲಿದೆ. ಈ ಪ್ರತಿಯೊಂದು ನಗರ ತನ್ನದೇ ವಿಶಿಷ್ಟ ಸಂಸ್ಕೃತಿ, ವಿಭಿನ್ನ ಆಹಾರ ಶೈಲಿ ಮತ್ತು ಕ್ರಿಯಾತ್ಮಕ ಜೀವನಶೈಲಿಯಿಂದ ಖ್ಯಾತಿ ಪಡೆದಿವೆ.
ಇನ್ನು ಮುಂಬೈ ನಗರ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ನೀವು ಸಹ ದೇಶದ ಅತ್ಯಂತ ರೋಮ್ಯಾಂಟಿಕ್ ನಗರಕ್ಕೆ ಭೇಟಿ ನೀಡಲು ಪ್ಲ್ಯಾನ್ ಮಾಡಿದ್ದೀರಾ?. ಹಾಗಾದರೆ ಇಲ್ಲಿದೆ ಮುಂಬೈನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿ.
ಮೆರೈನ್ ಡ್ರೈವ್: ಇದು ಮುಂಬೈನ ಅದ್ಭುತ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು. ಇದನ್ನು ರಾಣಿಯ ನೆಕ್‌ಲೆಸ್ ಎಂದೂ ಕರೆಯಲಾಗುತ್ತದೆ. ಇಲ್ಲಿ ಸೂರ್ಯಾಸ್ತದ ನೋಟವನ್ನು ಕಣ್ಣುಂಬಿಕೊಳ್ಳುವುದೇ ಅದ್ಭುತ ಅನುಭವ. ಇದೂ ಮುಂಬೈನ ಹೆಗ್ಗುರುತು. ಇದು ಪ್ರೇಮಿಗಳ ಮತ್ತು ಕಪಲ್ಸ್ಗಳ ನೆಚ್ಚಿನ ತಾಣವಾಗಿದೆ. ನೀವು ಇಲ್ಲಿಗೆ ಭೇಟಿ ನೀಡಲು ಬಯಸಿದರೆ, ಮುಂಬೈನ ಚರ್ಚ್‌ಗೇಟ್ ನಿಲ್ದಾಣದಿಂದ ಕೇವಲ ಎರಡು ನಿಮಿಷ ನಡೆದರೆ ಈ ಸ್ಥಳ ಸಿಗುತ್ತದೆ. ಪ್ರತಿ ನೂರಾರು ಜನ ತಮ್ಮ ಪ್ರೀತಿಪಾತ್ರರೊಂದಿಗೆ ಸೂರ್ಯಾಸ್ತವನ್ನು ಆನಂದಿಸಲು ಅಲ್ಲಿಗೆ ಬರುತ್ತಾರೆ. ಶುಕ್ರವಾರ, ಶನಿವಾರ, ಭಾನುವಾರದಂದು ಅಂದರೆ ವಾರಾಂತ್ಯದ ದಿನಗಳಲ್ಲಿ ರಾತ್ರಿ ವಿಹಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಪಲ್ಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
ಗೇಟ್‌ವೇ ಆಫ್ ಇಂಡಿಯಾ:ಇಲ್ಲಿ ನೀವು ಹೋಟೆಲ್ ತಾಜ್, ಅರಬ್ಬಿ ಸಮುದ್ರದ ಅದ್ಭುತ ನೋಟ, ಸುಂದರವಾದ ಸೂರ್ಯಾಸ್ತವನ್ನು ಆನಂದಿಸಬಹುದು. ಅಲ್ಲದೆ, ನಿಮ್ಮ ಪ್ರೀತಿಪಾತ್ರರ ಜೊತೆ ಬೋಟಿಂಗ್ ಹೋಗಲು ನೀವು ಬಯಸಿದರೆ, ಅದು ಇಲ್ಲಿ ಲಭ್ಯವಿದೆ. ಈ ಬೋಟಿಂಗ್ ತುಂಬಾ ಜನಪ್ರಿಯವಾಗಿದೆ. ಬೋಟ್ನಲ್ಲಿ ಹೋಗುವಾಗ ಶಾಂತ ಸಮುದ್ರ ಮತ್ತು ಮುಂಬೈ ನಗರದ ಸುಂದರ ದೃಶ್ಯಗಳನ್ನು ನೀವು ನೋಡಬಹುದು. ಇನ್ನು ವಿದೇಶಿ ಪಕ್ಷಿಗಳು ಬೋಟ್ ಮೇಲೆ ಸುಳಿದಾಡುತ್ತವೆ. ಅನೇಕರು ಈ ವಿದೇಶಿ ಪಕ್ಷಿಗಳಿಗೆ ಪ್ರೀತಿಯಿಂದ ಆಹಾರವನ್ನು ನೀಡುತ್ತಾರೆ. ಆದರೆ, ಇದಕ್ಕೆ ನಿಷೇಧ ಇದೆ ಎಂಬುದು ಗೊತ್ತಿರಲಿ. ನೀವು ಗೇಟ್‌ವೇ ಆಫ್ ಇಂಡಿಯಾಕ್ಕೆ ಭೇಟಿ ನೀಡಲು ಬಯಸಿದರೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಚರ್ಚ್‌ಗೇಟ್ ನಿಲ್ದಾಣದಿಂದ ಎಸಿ ಬಸ್‌ಗಳು ಲಭ್ಯವಿದ್ದು, ಅಲ್ಲಿಂದ ಹೋಗಬಹುದು.