ಕರ್ನಾಟಕ

karnataka

ETV Bharat / bharat

ಭಯೋತ್ಪಾದನೆ ಮುಕ್ತ ಭಾರತ ನಿರ್ಮಾಣಕ್ಕೆ ಮೋದಿ ಸರ್ಕಾರ ಬದ್ಧ: ಅಮಿತ್​ ಶಾ - BUILDING TERROR FREE INDIA

ಇಂದಿನಿಂದ ಆರಂಭವಾಗಲಿರುವ ಎರಡು ದಿನಗಳ ಭಯೋತ್ಪಾದನೆ ವಿರೋಧಿ ಸಮ್ಮೇಳನಕ್ಕೆ ಮುನ್ನ ಮಾತನಾಡಿರುವ ಅಮಿತ್ ಶಾ, ಭಾರತದ ಭದ್ರತೆಯನ್ನು ಬಲಪಡಿಸಲು ತನಿಖಾ ಏಜೆನ್ಸಿಗಳ ನಡುವೆ ಸಮನ್ವಯವನ್ನು ಮತ್ತಷ್ಟು ಹೆಚ್ಚಿಸಬೇಕಿದೆ ಎಂದು ತಿಳಿಸಿದರು.

modi-govt-committed-to-building-terror-free-india-amit-shah
ಅಮಿತ್​ ಶಾ (ANI)

By PTI

Published : Nov 7, 2024, 11:14 AM IST

ನವದೆಹಲಿ: ಶೂನ್ಯ ಸಹಿಷ್ಣುತೆಯ ನೀತಿಯೊಂದಿಗೆ ಭಯೋತ್ಪಾದನೆ ಮುಕ್ತ ಭಾರತ ನಿರ್ಮಿಸಲು ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'​ನಲ್ಲಿ ಪೋಸ್ಟ್​ ಮಾಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಡಿ, ಕೇಂದ್ರ ಸರ್ಕಾರ ಶೂನ್ಯ ಸಹಿಷ್ಣತೆಯೊಂದಿಗೆ ಭಯೋತ್ಪಾದನೆಯನ್ನು ಕಿತ್ತೆಸೆಯಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಎರಡು ದಿನಗಳ ಭಯೋತ್ಪಾದನೆ ವಿರೋಧಿ ವಾರ್ಷಿಕ ಸಮ್ಮೇಳನದಲ್ಲಿ ವಿವಿಧ ಭದ್ರತಾ ಪಡೆಗಳು, ತಾಂತ್ರಿಕ, ಕಾನೂನು ಮತ್ತು ವಿಧಿವಿಜ್ಞಾನ ತಜ್ಞರು, ಭಯೋತ್ಪಾದನೆ ನಿಗ್ರಹದಲ್ಲಿ ತೊಡಗಿರುವ ಏಜೆನ್ಸಿಗಳೊಂದಿಗೆ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ಸಮಸ್ಯೆಗಳು ಮತ್ತು ಭಯೋತ್ಪಾದನೆಯಿಂದ ಎದುರಾಗುವ ಬೆದರಿಕೆಗಳ ಕುರಿತು ಚರ್ಚೆ ನಡೆಯಲಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಪೊಲೀಸ್ ಅಧಿಕಾರಿಗಳು, ಕೇಂದ್ರದ ಏಜೆನ್ಸಿಗಳು ಮತ್ತು ಇಲಾಖೆಗಳ ಅಧಿಕಾರಿಗಳು ಮತ್ತು ಕಾನೂನು, ವಿಧಿವಿಜ್ಞಾನ ಮತ್ತು ತಂತ್ರಜ್ಞಾನದಂತಹ ಸಂಬಂಧಿತ ಕ್ಷೇತ್ರಗಳ ತಜ್ಞರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಹಿರಿಯ ನಾಗರಿಕರು, ಅಯ್ಯಪ್ಪ ಸ್ವಾಮಿಗಳೇ ವಂಚಕರ ಟಾರ್ಗೆಟ್! ಮೋಸದ ಮುಖವಾಡದ ಬಗ್ಗೆ ಪೊಲೀಸರ ಮಾಹಿತಿ

ABOUT THE AUTHOR

...view details