ಕರ್ನಾಟಕ

karnataka

By ETV Bharat Karnataka Team

Published : 5 hours ago

ETV Bharat / bharat

MCD ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಬಿಜೆಪಿ ಗೆಲುವು; ಮತದಾನ ಬಹಿಷ್ಕರಿಸಿದ ಎಎಪಿ - ಕಾಂಗ್ರೆಸ್ - MCD election

ಎಂಸಿಡಿ ಸ್ಥಾಯಿ ಸಮಿತಿಯ ಒಬ್ಬ ಸದಸ್ಯರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದಕ್ಕೂ ಮುನ್ನ, ಮಧ್ಯಾಹ್ನ ಆರಂಭವಾದ ಮತದಾನವನ್ನು ಎಎಪಿ ಮತ್ತು ಕಾಂಗ್ರೆಸ್ ಬಹಿಷ್ಕರಿಸಿದ್ದವು. ಬಿಜೆಪಿ ಕೌನ್ಸಿಲರ್‌ಗಳು ಮಾತ್ರ ಮತ ಚಲಾಯಿಸಿದರು. ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡೆಸುವಂತೆ ಎಂಸಿಡಿ ಆಯುಕ್ತರು ಸೆ.27ರಂದು ಗುರುವಾರ ತಡರಾತ್ರಿ ಆದೇಶ ಹೊರಡಿಸಿದ್ದರು.

MCD House
ದೆಹಲಿ ಎಂಎಸ್​ಡಿ ಹೌಸ್ (ETV Bharat)

ನವದೆಹಲಿ :ನಗರದಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಂದರ್ ಸಿಂಗ್ ತನ್ವಾರ್ ಗೆಲುವು ಸಾಧಿಸಿದ್ದಾರೆ. ಅವರು 115 ಮತಗಳನ್ನು ಪಡೆದಿದ್ದಾರೆ. ಆದರೆ, ಎಎಪಿಗೆ ಯಾವುದೇ ಮತ ಬಂದಿಲ್ಲ. ವಾಸ್ತವವಾಗಿ, ಮಧ್ಯಾಹ್ನ ಆರಂಭವಾದ ಮತದಾನವನ್ನು ಎಎಪಿ ಮತ್ತು ಕಾಂಗ್ರೆಸ್ ಬಹಿಷ್ಕರಿಸಿದ್ದವು.

ಬಿಜೆಪಿ ಕೌನ್ಸಿಲರ್‌ಗಳು ಮಾತ್ರ ಮತದಾನದಲ್ಲಿ ಪಾಲ್ಗೊಂಡಿದ್ದರು. ಸಭಾಧ್ಯಕ್ಷ, ಹೆಚ್ಚುವರಿ ಆಯುಕ್ತ ಜಿತೇಂದ್ರ ಯಾದವ್ ಮತದಾನ ನಡೆಸಿದರು. ಮತದಾನಕ್ಕೆ ಎರಡೂವರೆ ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಮತದಾನಕ್ಕೆ ಎರಡು ಬೂತ್‌ಗಳನ್ನು ಮಾಡಲಾಗಿತ್ತು.

ಆಮ್ ಆದ್ಮಿ ಪಕ್ಷದ ಕೌನ್ಸಿಲರ್‌ಗಳು ಈ ಚುನಾವಣಾ ಪ್ರಕ್ರಿಯೆಯನ್ನು ಅಸಂವಿಧಾನಿಕ ಎಂದು ಕರೆದು ಮತದಾನ ಮಾಡಲು ನಿರಾಕರಿಸಿದ್ದಾರೆ. ಇದಲ್ಲದೇ ಮತದಾನದಿಂದ ದೂರ ಉಳಿಯುವುದಾಗಿ ಕಾಂಗ್ರೆಸ್ ಈಗಾಗಲೇ ಘೋಷಿಸಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಸದನದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ದೆಹಲಿ ಪೊಲೀಸರ ಹೊರತಾಗಿ ಇತರ ಅರೆಸೇನಾ ಪಡೆಗಳನ್ನೂ ನಿಯೋಜಿಸಲಾಗಿತ್ತು.

ಇದಕ್ಕೂ ಮುನ್ನ ದೆಹಲಿ ಎಲ್‌ಜಿ ವಿಕೆ ಸಕ್ಸೇನಾ ಅವರು ಸ್ಥಾಯಿ ಸಮಿತಿಯ ಆರನೇ ಸದಸ್ಯರ ಚುನಾವಣೆಯ ನಡವಳಿಕೆಯ ವರದಿಯನ್ನು ಸಲ್ಲಿಸುವಂತೆ ಎಂಸಿಡಿ ಆಯುಕ್ತರಿಗೆ ಸೂಚಿಸಿದರು. ಮೇಯರ್ ಲಭ್ಯವಿಲ್ಲದಿದ್ದರೆ ಅಥವಾ ಸಭೆಯ ಅಧ್ಯಕ್ಷತೆ ವಹಿಸಲು ನಿರಾಕರಿಸಿದರೆ, ಉಪಮೇಯರ್ ಅವರನ್ನು ಚುನಾವಣೆ ನಡೆಸಲು ಸಭೆಯ ಅಧ್ಯಕ್ಷತೆ ವಹಿಸುವಂತೆ ಮನವಿ ಮಾಡಬಹುದು ಎಂದೂ ಹೇಳಿದ್ದಾರೆ.

ಗುರುವಾರ ಚುನಾವಣೆ ನಡೆಸಲಾಗಲಿಲ್ಲ :ದೆಹಲಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸದಸ್ಯರಿಗೆ ಗುರುವಾರ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಯಿತು. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಡಾ.ಶೈಲಿ ಒಬೆರಾಯ್ ಅವರು ಚುನಾವಣೆಯನ್ನು ಮುಂದೂಡಿದ ನಂತರ, ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರಿಗೆ ಗುರುವಾರ ರಾತ್ರಿ 10 ಗಂಟೆಗೆ ಚುನಾವಣೆ ನಡೆಸುವಂತೆ ಸೂಚಿಸಿದ್ದರು. ಆದರೆ, ಚುನಾವಣೆಯನ್ನು ನಡೆಸಲು ಸಾಧ್ಯವಾಗಲಿಲ್ಲ.

ಚುನಾವಣೆ ಮುಂದೂಡಿದ್ದು ಏಕೆ? : ಗುರುವಾರ ಭಾರತೀಯ ಜನತಾ ಪಕ್ಷದ ಕೌನ್ಸಿಲರ್‌ಗಳು ಮಾತ್ರ ಸದನದಲ್ಲಿ ಹಾಜರಿದ್ದರು. ಆಮ್ ಆದ್ಮಿ ಪಕ್ಷದ ಯಾವುದೇ ಕೌನ್ಸಿಲರ್ ಹಾಜರಾಗಲಿಲ್ಲ. ಇದರಿಂದಾಗಿ ಚುನಾವಣೆಯನ್ನು ಮುಂದೂಡಲು ನಿರ್ಧರಿಸಲಾಗಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ಯಾವುದೇ ಅಧಿಕೃತ ಕಾರಣ ನೀಡಿಲ್ಲ.

ವಾಸ್ತವವಾಗಿ, ದೆಹಲಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲು ಗುರುವಾರ ಮಧ್ಯಾಹ್ನ 2 ಗಂಟೆಗೆ ಸದನದ ಸಭೆಯನ್ನು ಕರೆಯಲಾಗಿತ್ತು. ಚುನಾವಣೆಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿತ್ತು. ಚುನಾವಣೆ ಹಿನ್ನೆಲೆ ಸದನದಲ್ಲಿ ಮೊಬೈಲ್ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಆಮ್ ಆದ್ಮಿ ಪಕ್ಷದ ಕೌನ್ಸಿಲರ್‌ಗಳು ಸದನದಲ್ಲಿ ಮೊಬೈಲ್ ಫೋನ್ ಕೊಂಡೊಯ್ಯುವುದನ್ನು ನಿಷೇಧಿಸಿ ಪ್ರತಿಭಟನೆ ಆರಂಭಿಸಿದರು. ಎಎಪಿ ಕೌನ್ಸಿಲರ್‌ಗಳು ಸದನದ ಗೇಟ್‌ನಲ್ಲಿ ಧರಣಿ ಕುಳಿತರು. ಎಎಪಿ ಕೌನ್ಸಿಲರ್‌ಗಳು ಮಧ್ಯಪ್ರವೇಶಿಸಿ, ಮೊಬೈಲ್ ಫೋನ್‌ಗಳೊಂದಿಗೆ ಪ್ರವೇಶಕ್ಕೆ ಅವಕಾಶ ನೀಡಲು ಮೇಯರ್‌ಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಲೆಫ್ಟಿನೆಂಟ್ ಗವರ್ನರ್ ಸೂಚನೆಗಳನ್ನು ಪಿತೂರಿ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ :ಸ್ಥಾಯಿ ಸಮಿತಿ ಚುನಾವಣೆ: ದೆಹಲಿ ಎಂಸಿಡಿ ಹೌಸ್‌ನಲ್ಲಿ ಬಿಜೆಪಿ ಕೌನ್ಸಿಲರ್‌ಗಳಿಂದ ಘೋಷಣೆ

ABOUT THE AUTHOR

...view details