ಕರ್ನಾಟಕ

karnataka

ETV Bharat / bharat

ಮಳೆ ಅವಾಂತರ: 24 ಗಂಟೆಗಳಲ್ಲಿ ಸಿಡಿಲಿಗೆ ಐವರು ಬಲಿ, ಜನಜೀವನ ಅಸ್ತವ್ಯಸ್ತ - Died Due To Lightning In Bihar - DIED DUE TO LIGHTNING IN BIHAR

ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಸಿಡಿಲು ಬಡಿದು 5 ಜನ ಮೃತಪಟ್ಟಿದ್ದಾರೆ.

ಬಿಹಾರದಲ್ಲಿ ಮಳೆ ಅವಾಂತರ
ಬಿಹಾರದಲ್ಲಿ ಮಳೆ ಅವಾಂತರ (ETV Bharat)

By ETV Bharat Karnataka Team

Published : May 8, 2024, 4:45 PM IST

ಪಾಟ್ನಾ(ಬಿಹಾರ): ಬಿಹಾರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮತ್ತೊಂದೆಡೆ, ಕಳೆದ 24 ಗಂಟೆಗಳಲ್ಲಿ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಬಡಿದು 5 ಜನ ಮೃತಪಟ್ಟಿದ್ದಾರೆ.

ಗಯಾದಲ್ಲಿ ಇಬ್ಬರು, ಪೂರ್ವ ಚಂಪಾರಣ್‌ನಲ್ಲಿ ಒಬ್ಬರು ಸಾವು:ಗಯಾದಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದು, 10 ಜನರಿಗೆ ಸುಟ್ಟ ಗಾಯಗಳಾಗಿವೆ. ಮೃತರನ್ನು ಬಾರಾ ಬೈಜ್ಡಾ ಗ್ರಾಮದ ನಿವಾಸಿ ಸರೋಜ್ ದೇವಿ (54 ವರ್ಷ), ದಂಗ್ರಾ ಗ್ರಾಮದ ನಿವಾಸಿ ವಿಶ್ವನಾಥ್ ಯಾದವ್ (45 ವರ್ಷ) ಎಂದು ಗುರುತಿಸಲಾಗಿದೆ. ಪೂರ್ವ ಚಂಪಾರಣ್‌ನಲ್ಲಿ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.

ನವಾಡಾದಲ್ಲಿ ಒಬ್ಬ ಯುವಕ ಸಾವು: ನವಾಡಾದಲ್ಲಿ ಸಿಡಿಲು ಬಡಿದು ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನವಾಡಾ ಸದರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತನನ್ನು ಏಕ್ತಾರಾ ಗ್ರಾಮದ ನಿವಾಸಿ ಬಾಲೇಶ್ವರ್ ರಾಜವಂಶಿ ಅವರ ಪುತ್ರ ಮುಖೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಯುವಕನು ಮಲವಿಸರ್ಜನೆಗಾಗಿ ಮನೆಯಿಂದ ಬದರ್ ಕಡೆಗೆ ಹೋಗಿದ್ದನು. ಈ ವೇಳೆ, ಭಾರಿ ಗುಡುಗು - ಮಿಂಚು ಕಾಣಿಸಿಕೊಂಡಿತು, ನಂತರ ಸಿಡಿಲು ಬಡಿದು ಯುವಕ ಮೃತಪಟ್ಟಿದ್ದಾನೆ ಎಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ.

ಶಿವಾರ್‌ನಲ್ಲಿ ಸಿಡಿಲಿಗೆ ಯುವಕ ಬಲಿ: ಗುಡುಗು ಸಿಡಿಲಿನ ರಭಸಕ್ಕೆ ಶಿವಹಾರ ಬ್ಲಾಕ್‌ನ ಉಕಣಿ ವಾರ್ಡ್ ನಿವಾಸಿ ಸುರೇಂದ್ರ ಸಾಹ್(25) ಮೃತಪಟ್ಟಿದ್ದಾರೆ. ಮೃತ ಸುರೇಂದ್ರ ಸಾಹ್ ಮಲವಿಸರ್ಜನೆಗೆ ಹೊಲಕ್ಕೆ ಹೋಗಿದ್ದ ವೇಳೆ ಸಿಡಿಲು ಬಡಿದ ಪರಿಣಾಮ ಸಾವನ್ನಪ್ಪಿದ್ದಾನೆ.

ನಳಂದಾದಲ್ಲಿ ಒಬ್ಬ ಮಹಿಳೆ ಸಾವು:ಬಿಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಇಮಾದ್‌ಪುರ ಪ್ರದೇಶದಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಮಾದ್‌ಪುರ ನಿವಾಸಿ ಸಲ್ಮಾ (45) ಮೃತ ಮಹಿಳೆ. ಗೋಡೆಗೆ ಬೆರಣಿ ತಟ್ಟುವಾಗ ಈ ದುರಂತ ಸಂಭವಿಸಿದೆ ಎಂದು ಮೃತಳ ಕುಟುಂಬಸ್ಥರು ತಿಳಿಸಿದ್ದಾರೆ.

ಮರ ಬಿದ್ದು ಆಟೋ ಚಾಲಕ ಮೃತ: ಭಾರಿ ಬಿರುಗಾಳಿಗೆ ಮರ ಆಟೋ ಮೇಲೆ ಉರುಳಿ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿದ ಘಟನೆ ಸಹರ್ಸಾದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಸದರ್ ಪೊಲೀಸ್ ಠಾಣೆ ಪ್ರದೇಶದ ವಿಮಾನ ನಿಲ್ದಾಣ ಮೋರ್ ಬಳಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ತ್ರಿವಳಿ ಕೊಲೆ: ಹುಚ್ಚನ ದಾಳಿಗೆ ಇಬ್ಬರು ರೈತರು ಬಲಿ, ಮಾನಸಿಕ ಅಸ್ವಸ್ಥನ ಬಡಿದು ಕೊಂದ ಜನರು! - triple murder

ABOUT THE AUTHOR

...view details