ಕೋಲ್ಕತ್ತಾ, ಪಶ್ಚಿಮ ಬಂಗಾಳ:ತೃಣಮೂಲ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾಗಿರುವ ಟಿಎಂಸಿಪಿಯ ಸಂಸ್ಥಾಪನಾ ದಿನವನ್ನು ಆರ್ಜಿ ಕಾರ್ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ಕಿರಿಯ ವೈದ್ಯಕೀಯ ವೈದ್ಯೆಗೆ ಸಿಎಂ ಮಮತಾ ಬ್ಯಾನರ್ಜಿ ಅರ್ಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತೃಣಮೂಲ ಛತ್ರ ಪರಿಷತ್ ಸಂಸ್ಥಾಪನ ದಿನವನ್ನು ನಮ್ಮ ಸಹೋದರಿಗೆ ಅರ್ಪಿಸಲು ನಾನು ನಿರ್ಧರಿಸಿದ್ದೇನೆ. ಆರ್ಜಿ ಕರ್ ಆಸ್ಪತ್ರೆಯಲ್ಲಿ ಘಟನೆ ವಿಷಾದನೀಯ. ಕ್ರೂರವಾಗಿ ಹಿಂಸೆಗೆ ಒಳಗಾಗಿ ಸಾವನ್ನಪ್ಪಿದ ಸಹೋದರಿ ಹಾಗೂ ಈ ರೀತಿ ಅಮಾನವೀಯ ಕ್ರೌರ್ಯಕ್ಕೆ ಒಳಗಾದ ಎಲ್ಲ ಮಹಿಳೆಯರಿಗೆ ನನ್ನ ಸಂತಾಪಗಳಿವೆ. ಕ್ಷಮಿಸಿ ಎಂದು ಬರೆದಿದ್ದಾರೆ.
ವಿದ್ಯಾರ್ಥಿಗಳು ಸಮಾಜದಲ್ಲಿ ಅತಿ ದೊಡ್ಡ ಪಾತ್ರವನ್ನು ಹೊಂದಿದ್ದಾರೆ. ಸಮಾಜ ಮತ್ತು ಸಂಸ್ಕೃತಿಯನ್ನು ಜಾಗೃತಿಗೊಳಿಸುವಲ್ಲಿ ಸಂಸ್ಕೃತಿ ಪ್ರೇರೇಪಿಸುವುದು ವಿದ್ಯಾರ್ಥಿಗಳ ಸಾಮಾಜಿಕ ಕಾರ್ಯವಾಗಿದೆ. ಅವರಿಗೆ ಇಂದು ನಾನು ಮಾಡುತ್ತಿರುವ ಮನವಿ ಎಂದರೆ, ಪ್ರಯತ್ನಗಳನ್ನು ಪ್ರೋತ್ಸಾಹಿಸಿ, ಉತ್ತಮ ಆರೋಗ್ಯವನ್ನು ಹೊಂದಿ ಮತ್ತು ಭವಿಷ್ಯದ ಬಗ್ಗೆ ಬದ್ಧತೆ ಇಟ್ಟುಕೊಳ್ಳಿ ಎಂಬುದಾಗಿದೆ ಎಂದು ಇದೇ ವೇಳೆ ಕರೆ ಅವರು ಕರೆ ನೀಡಿದ್ದಾರೆ.