ಕರ್ನಾಟಕ

karnataka

ETV Bharat / bharat

ಬಂಡಾಯ ಶಮನ ಮಾಡುವಲ್ಲಿ ಕಾಂಗ್ರೆಸ್​ ಯಶಸ್ವಿ: ನವೆಂಬರ್​ 6 ರಂದು ಮಹಾ ವಿಕಾಸ್ ಅಘಾಡಿ ಪ್ರಣಾಳಿಕೆ ಬಿಡುಗಡೆ​ - JOINT CAMPAIGN MVA

ಮಹಾರಾಷ್ಟ್ತ ಚುನಾವಣೆಗೆ ನಾಮಪತ್ರ ವಾಪಸ್​ ಪಡೆಯಲು ಇಂದು ಕೊನೆ ದಿನವಾಗಿತ್ತು. ಈ ನಡುವೆ ಕಾಂಗ್ರೆಸ್​ ತನ್ನ ಬಂಡುಕೋರರನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಣ ಮಾಡುವಲ್ಲಿ ಸಫಲವಾಗಿದೆ ಎಂದು ಹೇಳಿಕೊಂಡಿದೆ.

Maharashtra rebels under control, Congress prepares for MVA joint manifesto launch Nov 6
ಬಂಡಾಯ ಶಮನ ಮಾಡುವಲ್ಲಿ ಕಾಂಗ್ರೆಸ್​ ಯಶಸ್ವಿ: ನವೆಂಬರ್​ 6 ರಂದು ಮಹಾ ವಿಕಾಸ್ ಅಘಾಡಿ ಪ್ರಣಾಳಿಕೆ ಬಿಡುಗಡೆ​ (ETV Bharat)

By Amit Agnihotri

Published : Nov 4, 2024, 8:57 PM IST

ಮುಂಬೈ:288 ಸ್ಥಾನಗಳ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು ಸ್ಥಾನಗಳ ಪೈಕಿ ಕಾಂಗ್ರೆಸ್​​​ 102 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದೆ. 9 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಬಂಡಾಯ ಎದುರಿಸಿತ್ತು. ಈ ಬಂಡಾಯವನ್ನು ಶಮನ ಮಾಡಲು ಯಶಸ್ವಿಯಾಗಿದ್ದೇವೆ ಎಂದು ಪಕ್ಷ ಹೇಳಿಕೊಂಡಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ-ಎಸ್‌ಪಿ ಮುಖ್ಯಸ್ಥ ಶರದ್ ಪವಾರ್ ಅವರು ನವೆಂಬರ್ 6 ರಂದು ಮುಂಬೈನಲ್ಲಿ ಎಂವಿಎ ಜಂಟಿ ಪ್ರಣಾಳಿಕೆಯನ್ನು ಅನಾವರಣಗೊಳಿಸಲಿದ್ದಾರೆ. ಅದಕ್ಕೂ ಮುನ್ನ ಪಕ್ಷ ಬಂಡಾಯ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

“ಒಂದು ಅಥವಾ ಎರಡು ಪ್ರಕರಣಗಳನ್ನು ಹೊರತುಪಡಿಸಿ ಬಂಡುಕೋರರನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸಲಾಗಿದೆ. ಎಲ್ಲರಿಗೂ ಮನವರಿಕೆ ಮಾಡುವುದು ಯಾವಾಗಲೂ ಕಷ್ಟ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ನಾವು ಹೇಳಬಹುದು. ಚುನಾವಣೆ ಎದುರಿಸಲು ಕಾಂಗ್ರೆಸ್ ಉತ್ತಮ ರೀತಿಯಲ್ಲಿ ಸನ್ನದ್ಧವಾಗಿದೆ. ಆದರೆ ನಿಜವಾದ ಸವಾಲು ಈಗ ಪ್ರಾರಂಭವಾಗಿದೆ ಎಂದು ಎಐಸಿಸಿ ಉತ್ತರ ಪ್ರದೇಶ ಉಸ್ತುವಾರಿ ಅವಿನಾಶ್ ಪಾಂಡೆ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಮಾಜಿ ಸಿಎಂಗಳಾದ ಅಶೋಕ್ ಗೆಹ್ಲೋಟ್ ಮತ್ತು ಭೂಪೇಶ್ ಬಾಘೆಲ್, ಸಿಡಬ್ಲ್ಯೂಸಿ ಸದಸ್ಯ ಸಚಿನ್ ಪೈಲಟ್, ತೆಲಂಗಾಣ ಸಚಿವ ಉತ್ತಮ್ ರೆಡ್ಡಿ ಮತ್ತು ಕರ್ನಾಟಕದ ಸಚಿವ ಜಿ ಪರಮೇಶ್ವರ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ,. ಅವಿನಾಶ್​ ಪಾಂಡೇ ಸಹ ಇವರಲ್ಲಿ ಒಬ್ಬರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಬಂಡುಕೋರರ ಹಾವಳಿ ಹರಿಯಾಣದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯನ್ನು ನೆನಪಿಸಿದಂತೂ ಸುಳ್ಳಲ್ಲ. ಅಲ್ಲಿ ಇದೇ ಸಮಸ್ಯೆಯು ಕಾಂಗ್ರೆಸ್‌ಗೆ ಸಾಕಷ್ಟು ಹಾನಿಯನ್ನುಂಟುಮಾಡಿತು.

ಪ್ರಣಾಳಿಕೆ ಬಿಡುಗಡೆ ಬಳಿಕ ಜಂಟಿ ಪ್ರಚಾರ:ಮಿತ್ರಪಕ್ಷಗಳೊಂದಿಗೆ ಜಂಟಿ ಕಾರ್ಯತಂತ್ರಗಳ ಮೇಲೆ ಮುಂದಿನ ಕಾರ್ಯತಂತ್ರದ ಮೇಲೆ ಗಮನ ಹರಿಸಲಾಗುವುದು ಎಂದು ಕಾಂಗ್ರೆಸ್ ವ್ಯವಸ್ಥಾಪಕರು ತಿಳಿಸಿದ್ದಾರೆ. "MVA ನಾಯಕರು ನವೆಂಬರ್ 6 ರಂದು ಜಂಟಿ ಪ್ರಣಾಳಿಕೆಯನ್ನು ಅನಾವರಣಗೊಳಿಸುತ್ತಾರೆ ಮತ್ತು ಜನಪರ ಆಡಳಿತದ ಮೇಲೆ ಅದರ ಗಮನವನ್ನು ಪ್ರಸ್ತುತಪಡಿಸುತ್ತಾರೆ. ಅದರ ಬೆನ್ನಲ್ಲೇ ಜಂಟಿ ಪ್ರಚಾರ ಕೂಡಾ ನಡೆಯಲಿದೆ' ಎಂದು ಪಾಂಡೆ ಹೇಳಿದ್ದಾರೆ.

ರೈತರ ಸಮಸ್ಯೆಗಳ ಮೇಲೆ ಬೆಳಕು ಚಲ್ಲುತ್ತೇವೆ:ಪಕ್ಷದ ಆಂತರಿಕ ಮೂಲಗಳ ಪ್ರಕಾರ, ಕಳೆದ ವರ್ಷ ಹಣಕಾಸಿನ ಸಮಸ್ಯೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆಗೆ ಒಳಗಾಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮಹಾ ವಿಕಾಸ್​ ಅಘಾಡಿ ರೈತರ ಸಂಕಷ್ಟದ ಮೇಲೆ ಪ್ರಮುಖವಾಗಿ ಗಮನಹರಿಸುತ್ತದೆ ಎಂದು ತಿಳಿದು ಬಂದಿದೆ

ಹತ್ತಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮತಿ ನೀಡಿದೆ. ಇದು ವ್ಯಾಪಾರಿಗಳಿಗೆ ಉತ್ತಮ ನಿರ್ಧಾರವಾಗಿದೆ. ಆದರೆ ರೈತರು ಸಂಕಷ್ಟ ಎದುರಿಸಲಿದ್ದಾರೆ. ರೈತರು ಸರ್ಕಾರದ ವಿರುದ್ಧ ಮುನಿಸಿಕೊಳ್ಳುವ ಸಾಧ್ಯತೆಗಳಿವೆ. ಇನ್ನು ಸರ್ಕಾರದ ಈ ನಿರ್ಧಾರವನ್ನು ನಾವು ನಾವು ವಿರೋಧಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಹೇಳಿದ್ದಾರೆ.

ಇನ್ನು ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ-ಎಸ್‌ಪಿ ಮುಖ್ಯಸ್ಥ ಶರದ್ ಪವಾರ್ ಕೂಡ ರಾಜ್ಯಾದ್ಯಂತ ಹಲವಾರು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪವಾರ್ ಅವರು ನಾಗ್ಪುರ, ತಿರೋಡಾ, ಕರೋಲ್, ಹಿಂಗನ್‌ಘಾಟ್, ಜಿಂಟೂರ್ ಮತ್ತು ಬಾಸ್ಮತ್‌ನಂತಹ ಪ್ರದೇಶಗಳಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಠಾಕ್ರೆ ಅವರು ಮುಂದಿನ ಕೆಲವು ದಿನಗಳಲ್ಲಿ ರತ್ನಗಿರಿ, ರಾಜಾಪುರ, ಭಿವಂಡಿ, ದಯಾಪುರ್, ಬದ್ನೇರಾ, ಬುಲ್ಧಾನ, ಮೆಲ್ಕಾರ್ ಮತ್ತು ಪಟೂರ್‌ಗಳಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನು ಓದಿ:ಯುಪಿ, ಕೇರಳ - ಪಂಜಾಬ್ ಉಪಚುನಾವಣೆ ದಿನಾಂಕ ಬದಲಾವಣೆ

ABOUT THE AUTHOR

...view details