ಕರ್ನಾಟಕ

karnataka

ETV Bharat / bharat

ಸಂಸತ್​ ಆವರಣದಲ್ಲಿ ಪ್ರತಿಭಟನೆ ನಡೆಸಿದರೆ ಕ್ರಮ: ಸದಸ್ಯರಿಗೆ ಎಚ್ಚರಿಕೆ ನೀಡಿದ ಸ್ಪೀಕರ್​​ ಬಿರ್ಲಾ - LOKSABHA SPEAKER WARNING TO PROTEST

ಸಂಸತ್​ ಚಳಿಗಾಲದ ಅಧಿವೇಶನದ ಕೊನೆಯ ದಿನದ ಕಲಾಪದಲ್ಲಿ ಆಡಳಿತ ಮತ್ತು ವಿಪಕ್ಷಗಳು ಪ್ರತಿಭಟನೆ ಮುಂದುವರಿಸಿವೆ. ಸಂಸದರ ಈ ನಡೆಗೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ls-speaker-warns-of-action-over-protests-in-parliament-premises
ಸ್ಪೀಕರ್​​ ಓಂ ಬಿರ್ಲಾ (ಎಎನ್​ಐ)

By PTI

Published : 12 hours ago

ನವದೆಹಲಿ:ಅಮಿತ್​ ಶಾ ಹೇಳಿಕೆ ಖಂಡಿಸಿ ಇಂದು ಕೂಡ ಕಾಂಗ್ರೆಸ್​ ನಾಯಕರು ಸಂಸತ್​ ಆವರಣದಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ. ವಿಜಯ್​ ಚೌಕ್​ನಿಂದ ಸಂಸತ್​ವರೆಗೆ ಇಂಡಿಯಾ ಒಕ್ಕೂಟದ ಬಣದ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಅಮಿತ್​ ಶಾ ಅವರು ರಾಜೀನಾಮೆ ನೀಡಬೇಕು ಮತ್ತು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಆಡಳಿತರರೂಢ ಪಕ್ಷ ಎನ್​ಡಿಎ ನಾಯಕರು ಕೂಡ ಸಂಸತ್​ ಆವರಣದಲ್ಲಿ ಕಾಂಗ್ರೆಸ್​, ಡಾ ಬಿಆರ್​ ಅಂಬೇಡ್ಕರ್​ ಅವರಿಗೆ ಅಗೌರವ ತೋರಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದೆ.

ಸಂಸತ್​ ಚಳಿಗಾಲ ಅಧಿವೇನದ ಕಡೆಯ ದಿನದ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳು ಪ್ರತಿಭಟನೆ ಮುಂದುವರೆಸಿರುವ ನಡೆಗೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಸತ್​ ಆವರಣದೊಳಗೆ ಪ್ರತಿಭಟನೆ ಮತ್ತು ಪ್ರದರ್ಶನ ನಡೆಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ.

ಸಂಸತ್​ ಆವರಣದ ಎಲ್ಲಿಯೂ ಪ್ರತಿಭಟನೆ ನಡೆಸುವಂತಿಲ್ಲ- ಸ್ಪೀಕರ್​ ವಾರ್ನಿಂಗ್:ಸಂಸತ್​ ಆವರಣದ ಎಲ್ಲಿಯೂ ಮತ್ತು ಯಾವುದೇ ಗೇಟ್​ ಬಳಿಕ ಪ್ರತಿಭಟನೆ ಮತ್ತು ಪ್ರದರ್ಶನ ನಡೆಸುವಂತಿಲ್ಲ. ನಡೆಸಿದಲ್ಲಿ, ಸದನವೂ ಗಂಭೀರ ಕ್ರಮಕ್ಕೆ ಮುಂದಾಗಲಿದೆ ಎಂದು ಎಚ್ಚರಿಸಿದ್ದಾರೆ.

ಗುರುವಾರ ಆಡಳಿತ ಮತ್ತು ವಿಪಕ್ಷಗಳು ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಇಬ್ಬರು ಸಂಸದರು ಗಾಯಗೊಂಡಿದ್ದರು. ಉಭಯ ಸಂಸದರ ನಡುವೆ ತಳ್ಳಾಟ, ನೂಕಾಟ ನಡೆದಿತ್ತು. ಘಟನೆಯಲ್ಲಿ ಬಿಜೆಪಿ ಇಬ್ಬರು ಹಿರಿಯ ಸಂಸದರಾದ ಪ್ರತಾಪ್ ಚಂದ್ರ ಸಾರಂಗಿ ಮತ್ತು ಮುಖೇಶ್ ರಜಪೂತ್ ಕೆಳಗೆ ಬಿದ್ದು ಗಾಯಗೊಂಡಿದ್ದರು.

ಇಂದು ಸದನದಲ್ಲಿ ಈ ಬಗ್ಗೆ ಮಾತನಾಡಿದ ಸ್ಪೀಕರ್​, ಸದನದ ನಿಯಮವನ್ನು ಪಾಲನೆ ಮಾಡಬೇಕಿದ್ದು, ಪ್ರತಿಯೊಬ್ಬರಿಗೂ ಸದನದ ಘನತೆ ಮತ್ತು ಗೌರವವನ್ನು ಕಾಪಾಡಬೇಕು, ಯಾವುದೇ ರೀತಿಯ ಪ್ರತಿಭಟನೆಯನ್ನು ಸಂಸತ್​ ಅವರಣದಲ್ಲಿ ನಡೆಸುವುದು ಸರಿಯಲ್ಲ. ಸಂಸತ್ತಿನ ಗೇಟ್​ ಮುಂದೆ ಪ್ರತಿಭಟನೆ ನಡೆಸುವುದು ಸರಿಯಲ್ಲ. ಪ್ರತಿಭಟನೆ ನಡೆಸದಂತೆ ನಾನು ಒತ್ತಾಯಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ಇದಕ್ಕೂ ಸಂಸದೀಯ ಸಚಿವ ಕಿರಣ್​ ರಿಜಿಜು​ ಕೂಡ ಕಾಂಗ್ರೆಸ್​ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಗಾಂಧಿ ಅವರ ಕ್ರಮವೂ ಬಿಜೆಪಿ ಸದಸ್ಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಇಬ್ಬರು ಸಂಸದರು ಗಾಯಗೊಂಡ ಘಟನೆ ಖಂಡನೀಯ. ಸ್ಪೀಕರ್​ ಹೇಳಿದಂತೆ ನಾವು ಸಂಸತ್ತಿನ ಗೇಟ್​ ಮುಂದೆ ನಾವು ಪ್ರತಿಭಟನೆ ನಡೆಸುವುದಿಲ್ಲ, ನಮ್ಮ ಸಂಸದರು ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮುಂದುವರೆಸಲಿದ್ದೇವೆ ಎಂದರು.

ಇದನ್ನೂ ಓದಿ: ಸಂಸತ್ ಮುಂದೆ ಹೈಡ್ರಾಮಾ: ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸರು

ABOUT THE AUTHOR

...view details