ಕರ್ನಾಟಕ

karnataka

ETV Bharat / bharat

ರಾಹುಲ್ ಗಾಂಧಿ ಎದುರಾಳಿ ಅಭ್ಯರ್ಥಿ ವಿರುದ್ಧ 243 ​​ಕ್ರಿಮಿನಲ್ ಕೇಸ್ - K Surendran cases

K Surendran Criminal Cases : ಕೇರಳದ ಹೈ - ಪ್ರೊಫೈಲ್ ವಯನಾಡಿನಲ್ಲಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಮುಖ್ಯಸ್ಥ ಸುರೇಂದ್ರನ್ ವಿರುದ್ಧ ಬರೋಬ್ಬರಿ 243 ​​ಕ್ರಿಮಿನಲ್ ಪ್ರಕರಣಗಳಿವೆ. ಇದರೊಂದಿಗೆ ಸುರೇಂದ್ರನ್ ಕೇರಳದಲ್ಲಿ ಅತಿ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿಯಾಗಿದ್ದಾರೆ.

WAYANAD  BJP STATE CHIEF K SURENDRAN  NOMINATIONS FROM WAYANAD  LOK SABHA ELECTION 2024
ರಾಹುಲ್ ಗಾಂಧಿ

By PTI

Published : Apr 5, 2024, 2:25 PM IST

ವಯನಾಡು (ಕೇರಳ):ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಕೆ.ಸುರೇಂದ್ರನ್ ವಿರುದ್ಧ 243 ​​ಪ್ರಕರಣಗಳಿವೆ. ಈ ಮೂಲಕ ಕೇರಳದಲ್ಲಿ ಅತಿ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು ಅಕ್ರಮ ಸಭೆ, ಗಲಭೆ ಮತ್ತು ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿದ್ದಾಗಿವೆ. ಸುರೇಂದ್ರನ್ ವಿರುದ್ಧ ಸಾರ್ವಜನಿಕ ಆಸ್ತಿ ನಾಶ, ನಿಯಮ ಉಲ್ಲಂಘನೆ, ಕೊಲೆ ಯತ್ನದಂತಹ ಪ್ರಕರಣಗಳೂ ಸಹ ದಾಖಲಾಗಿವೆ.

ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು 2018 ಮತ್ತು 2019 ರಲ್ಲಿ ವರದಿಯಾಗಿವೆ. ಆ ಸಮಯದಲ್ಲಿ ವಿವಾದಿತ ಶಬರಿಮಲೆ ಆಂದೋಲನದಲ್ಲಿ ಸುರೇಂದ್ರನ್ ವಿರುದ್ಧವೂ ಪ್ರಕರಣಗಳು ದಾಖಲಾಗಿದ್ದವು. 2004ರ ಲೋಕಸಭೆ ಚುನಾವಣೆಯಲ್ಲಿ ಕೆ ಸುರೇಂದ್ರನ್ ವಿರುದ್ಧ ಮೂರು ಹೊಸ ಪ್ರಕರಣಗಳು ದಾಖಲಾಗಿದ್ದವು. ಆದರೆ, ಈ ಯಾವುದೇ ಪ್ರಕರಣಗಳಲ್ಲಿ ಸುರೇಂದ್ರನ್‌ಗೆ ಶಿಕ್ಷೆಯಾಗಿಲ್ಲ. ಬುಧವಾರ ಸುರೇಂದ್ರನ್ ಅವರು ನಾಮಪತ್ರ ಸಲ್ಲಿಸಿದ್ದು, ಅಫಿಡವಿಟ್ ಮೂಲಕ ಈ ಪ್ರಕರಣಗಳ ವಿವರ ಹೊರಬಿದ್ದಿವೆ.

ಸುರೇಂದ್ರನ್ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, 2022-23ನೇ ಸಾಲಿನಲ್ಲಿ ಅವರ ಆದಾಯ 2,26,800 ರೂ. ಆಗಿತ್ತು. ಆತನ ಬಳಿ 15 ಸಾವಿರ ನಗದು ಹಾಗೂ ಸುರೇಂದ್ರನ ಪತ್ನಿ ಬಳಿ 10 ಸಾವಿರ ನಗದು ಇತ್ತು. ಸುರೇಂದ್ರನ್ ಅವರ ಬ್ಯಾಂಕ್ ಠೇವಣಿ ಮೊತ್ತ 66,455 ರೂಪಾಯಿ. ಸುರೇಂದ್ರನ್ 10 ಷೇರುಗಳನ್ನು ಹೊಂದಿದ್ದಾರೆ. ಅವರ ಎಲ್ಐಸಿ ಪಾಲಿಸಿ 3,25,000 ರೂ. ಮೌಲ್ಯದ್ದಾಗಿದೆ. ಅವರ ಬಳಿ 8 ಗ್ರಾಂ ಚಿನ್ನವಿದ್ದರೆ, ಸುರೇಂದ್ರನ್ ಪತ್ನಿ ಬಳಿ 32 ಗ್ರಾಂ ಚಿನ್ನವಿದೆ. ಅವರ ಒಟ್ಟು ಭೂ ಆಸ್ತಿಯ ಅಂದಾಜು ಮೌಲ್ಯ 21,75,000ರೂ.ಗಳಷ್ಟೇ

ಸುರೇಂದ್ರನ್ 2019ರ ಲೋಕಸಭೆ ಚುನಾವಣೆಯಲ್ಲಿ ಪತ್ತಂತಿಟ್ಟ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಸುರೇಂದ್ರನ್ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ನಂತರ ಮೂರನೇ ಸ್ಥಾನದಲ್ಲಿದ್ದರು. 2016ರ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರಂ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ 89 ಮತಗಳಿಂದ ಸೋತಿದ್ದರು. 2019ರ ಉಪ ಚುನಾವಣೆಯಲ್ಲೂ ಸೋತಿದ್ದರು. ಸುರೇಂದ್ರನ್ ಅವರನ್ನು 2020 ರಲ್ಲಿ ಕೇರಳ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿರುದ್ಧದ ಹೋರಾಟದಲ್ಲಿ ಅವರು ಜನರಿಗೆ ತುಂಬಾ ಹತ್ತಿರವಾಗಿದ್ದಾರೆ. ಈ ಬಾರಿ ಸಿಪಿಐ ಪರವಾಗಿ ಯಾನಿರಾಜ ಇಲ್ಲಿ ಸ್ಪರ್ಧಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ - ಎಡಪಕ್ಷಗಳು ಒಂದೇ ಮೈತ್ರಿಕೂಟದಲ್ಲಿದ್ದರೂ ಕೇರಳದಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ.

ಓದಿ:ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸಿದ ರಾಹುಲ್​ ಗಾಂಧಿ: 20 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಣೆ - Rahul Gandhi Declares Assets

ABOUT THE AUTHOR

...view details