ವಿಜಯವಾಡ,ಆಂಧ್ರಪ್ರದೇಶ;ಪಶ್ಚಿಮ ಮಧ್ಯ ಬಂಗಾಳಕೊಲ್ಲಿಯಲ್ಲಿ ತೀವ್ರ ಕಡಿಮೆ ಒತ್ತಡ ಮುಂದುವರಿದಿದೆ. ಇದರ ಪರಿಣಾಮ ಮುಂದಿನ 48 ಗಂಟೆಗಳಲ್ಲಿ ಕರಾವಳಿ ಆಂಧ್ರದಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ವಿಶಾಖ ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಸಮುದ್ರದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಕರಾವಳಿ ಬಂದರುಗಳಲ್ಲಿ ಅಪಾಯದ ಎಚ್ಚರಿಕೆ ಸಂಖ್ಯೆ 3 ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ವಿಶಾಖ ಹವಾಮಾನ ಕೇಂದ್ರದ ಪ್ರಭಾರಿ ನಿರ್ದೇಶಕ ಕೆವೈಎಸ್ ಶ್ರೀನಿವಾಸ್ ಮಾತನಾಡಿ, ತೀವ್ರ ಕಡಿಮೆ ಒತ್ತಡವು ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.
ಈ ಜಿಲ್ಲೆಗಳಲ್ಲಿ ಮಳೆ: ಮುಂದಿನ 12 ಗಂಟೆಗಳಲ್ಲಿ ಉತ್ತರ ತಮಿಳುನಾಡು ಮತ್ತು ದಕ್ಷಿಣ ಕರಾವಳಿಯ ಕಡೆಗೆ ವಾಯವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಇದು ಉತ್ತರಾಭಿಮುಖವಾಗಿ ಆಂಧ್ರಪ್ರದೇಶ ಕರಾವಳಿಯತ್ತ ಚಲಿಸುವ ಸಾಧ್ಯತೆ ಇದೆ. ಶ್ರೀಕಾಕುಳಂ, ವಿಜಯನಗರಂ, ಅಲ್ಲೂರಿ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆಗಳಿವೆ. ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಏಲೂರು, ಕೃಷ್ಣಾ, ಎನ್‌ಟಿಆರ್, ಗುಂಟೂರು, ಬಾಪಟ್ಲಾ, ಪ್ರಕಾಶಂ, ನೆಲ್ಲೂರು, ಅನ್ನಮಯ್ಯ ಮತ್ತು ಚಿತ್ತೂರು ತಿರುಪತಿ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.