ಕರ್ನಾಟಕ

karnataka

ETV Bharat / bharat

7 ಹಂತಗಳಲ್ಲಿ ಲೋಕಸಭಾ ಚುನಾವಣೆ: ಜೂನ್​​ 4ಕ್ಕೆ ಫಲಿತಾಂಶ - Lok Sabha Elections

Lok Sabha Election 2024: 18ನೇ ಲೋಕಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ.

ಲೋಕಸಭಾ ಚುನಾವಣೆ
Lok Sabha Polls 2024

By ETV Bharat Karnataka Team

Published : Mar 16, 2024, 3:51 PM IST

Updated : Mar 16, 2024, 7:12 PM IST

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ದೇಶಾದ್ಯಂತ 543 ಲೋಕಸಭೆ ಕ್ಷೇತ್ರಗಳಿಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಮುಖ್ಯ ಆಯುಕ್ತ ರಾಜೀವ್​ ಕುಮಾರ್, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಚುನಾವಣಾ ಮಾಹಿತಿಯನ್ನು ನೀಡಿದರು. ಲೋಕಸಭೆ ಚುನಾವಣೆ, ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಹಾಗೂ ವಿವಿಧ ರಾಜ್ಯಗಳ 26 ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆಗಳಿಗೆ ದಿನಾಂಕ ಘೋಷಿಸಿದರು. ಈ ಎಲ್ಲ ಚುನಾವಣೆಗಳ ಮತ ಎಣಿಕೆಯು ಜೂನ್​ 4ರಂದು ನಡೆಯಲಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ

ಲೋಕಸಭೆಗೆ ಮೊದಲ ಹಂತದ ಚುನಾವಣೆಯು ಏಪ್ರಿಲ್​​​​ 19ಕ್ಕೆ ನಡೆಯಲಿದೆ. ಏಪ್ರಿಲ್​ 26ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಇದೇ ದಿನವೇ ಕರ್ನಾಟಕದ ಮೈಸೂರು ಭಾಗದಲ್ಲಿ ಮೊದಲ ಹಂತದ ಚುನಾವಣೆ ಆಗಲಿದೆ. ಮೇ 7ರಂದು ದೇಶದಲ್ಲಿ ಮೂರನೇ ಹಂತದ ಚುನಾವಣೆ ನಡೆಯಲಿದೆ. ಅದೇ ದಿನವೇ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ರಾಜ್ಯದ ಪಾಲಿನ ಎರಡನೇ ಹಂತದ ಮತದಾನ ಜರುಗಲಿದೆ.

ಲೋಕಸಭಾ ಚುನಾವಣೆ

ಮತದಾನದ ಹಂತಗಳ ವಿವರ:ಏಪ್ರಿಲ್​​​​ 19ರಂದು ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತ ಕೇಂದ್ರಾಡಳಿತ ಪ್ರದೇಶ ಚುನಾವಣೆ ಜರುಗಲಿದೆ. ಎಪ್ರಿಲ್​ 26ರಂದು ಎರಡನೇ ಹಂತದಲ್ಲಿ 13 ರಾಜ್ಯಗಳು ಮತ್ತ ಕೇಂದ್ರಾಡಳಿತ ಪ್ರದೇಶಗಳು, ಮೇ 7ರಂದು ಮೂರನೇ ಹಂತದಲ್ಲಿ 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಮೇ 13 ರಂದು ನಾಲ್ಕನೇ ಹಂತದಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಮೇ 20ರಂದು ಐದನೇ ಹಂತದಲ್ಲಿ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಆರನೇ ಹಂತದಲ್ಲಿ 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಏಳನೇ ಹಂತರದಲ್ಲಿ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ.

ಲೋಕಸಭಾ ಚುನಾವಣೆ

ಯಾವ ರಾಜ್ಯದಲ್ಲಿ ಎಷ್ಟು ಹಂತದ ಮತದಾನ?:ಅರುಣಾಚಲ ಪ್ರದೇಶ, ಅಂಡಮಾನ್​, ಆಂಧ್ರಪ್ರದೇಶ, ಚಂಢೀಗಡ್, ದೆಹಲಿ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಕೇರಳ, ಲಕ್ಷದ್ವೀಪ, ಲಡಾಖ್, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ಪುದುಚೇರಿ, ಸಿಕ್ಕಿಂ, ತಮಿಳುನಾಡು, ಪಂಜಾಬ್​, ತೆಲಂಗಾಣ ಮತ್ತು ಉತ್ತರಾಖಂಡ್ ಸೇರಿ 22​ ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ಜರುಗಲಿದೆ.

ಲೋಕಸಭಾ ಚುನಾವಣೆ

ಕರ್ನಾಟಕ, ರಾಜಸ್ಥಾನ, ತ್ರಿಪುರಾ, ಮಣಿಪುರ ಸೇರಿ 4 ರಾಜ್ಯಗಳಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಛತ್ತೀಸ್​ಗಢ್, ಅಸ್ಸೋಂ ಸೇರಿ 2 ರಾಜ್ಯಗಳಲ್ಲಿ ಮೂರು ಹಂತಗಳಲ್ಲಿ ಮತದಾನ, ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್ ಸೇರಿ 3 ರಾಜ್ಯಗಳಲ್ಲಿ ನಾಲ್ಕು ಹಂತಗಳಲ್ಲಿ ಮತದಾನ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಸೇರಿ 2 ಕಡೆಗಳಲ್ಲಿ ಐದು ಹಂತಗಳಲ್ಲಿ ಹಾಗೂ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿ ಏಳು ಹಂತಗಳಲ್ಲಿ ಮತದಾನ ಜರುಗಲಿದೆ.

ಲೋಕ ಸಮರ

ಇದನ್ನೂ ಓದಿ:2022-23ರ ವಿವಿಧ ಚುನಾವಣೆಗಳಲ್ಲಿ ₹ 3,400 ಕೋಟಿ ಮೌಲ್ಯದ ವಸ್ತುಗಳು ಜಪ್ತಿ: ಚುನಾವಣಾ ಆಯೋಗ

ನಿಮ್ಮ ಕ್ಷೇತ್ರಗಳಲ್ಲಿ ಯಾವಾಗ ಚುನಾವಣೆ?

ಮೊದಲ ಹಂತದ ಕ್ಷೇತ್ರಗಳು - ಮತದಾನ - ಏಪ್ರಿಲ್​ 26

  • ಉಡುಪಿ ಚಿಕ್ಕಮಗಳೂರು
  • ಹಾಸನ
  • ದಕ್ಷಿಣ ಕನ್ನಡ
  • ಚಿತ್ರದುರ್ಗ
  • ತುಮಕೂರು
  • ಮಂಡ್ಯ
  • ಮೈಸೂರು
  • ಚಾಮರಾಜನಗರ
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ಉತ್ತರ
  • ಬೆಂಗಳೂರು ಕೇಂದ್ರ
  • ಬೆಂಗಳೂರು ದಕ್ಷಿಣ
  • ಚಿಕ್ಕಬಳ್ಳಾಪುರ
  • ಕೋಲಾರ

2ನೇ ಹಂತದ ಲೋಕಸಭಾ ಕ್ಷೇತ್ರಗಳು - ಮತದಾನ - ಮೇ -7

  • ಚಿಕ್ಕೋಡಿ
  • ಬೆಳಗಾವಿ
  • ಬಾಗಲಕೋಟೆ
  • ವಿಜಯಪುರ
  • ಕಲಬುರಗಿ
  • ರಾಯಚೂರು
  • ಬೀದರ್
  • ಕೊಪ್ಪಳ
  • ಬಳ್ಳಾರಿ
  • ಹಾವೇರಿ
  • ಧಾರವಾಡ
  • ಉತ್ತರ ಕನ್ನಡ
  • ದಾವಣಗೆರೆ
  • ಶಿವಮೊಗ್ಗ
Last Updated : Mar 16, 2024, 7:12 PM IST

ABOUT THE AUTHOR

...view details