ಕರ್ನಾಟಕ

karnataka

ETV Bharat / bharat

ಕರ್ನಾಟಕ ಲೋಕಸಭೆ ಕ್ಷೇತ್ರಗಳ ಚುನಾವಣೋತ್ತರ ಸಮೀಕ್ಷೆ; ಬಿಜೆಪಿ​ಗೆ ಎಷ್ಟು ನಷ್ಟ, ಕಾಂಗ್ರೆಸ್​ಗೆ ಎಷ್ಟು ಲಾಭ? - exit poll results 2024

ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್​ ಮತ್ತು ಬಿಜೆಪಿ, ಜೆಡಿಎಸ್​ಗೆ ಆಗುವ ಲಾಭ, ನಷ್ಟದ ನಿರೀಕ್ಷೆ ಹೆಚ್ಚಿಸಿದೆ.

ಕರ್ನಾಟಕ ಲೋಕಸಭೆ ಕ್ಷೇತ್ರಗಳ ಚುನಾವಣೋತ್ತರ ಸಮೀಕ್ಷೆ
lok sabha election 2024: Karnataka exit poll results (Etv Bharat)

By ETV Bharat Karnataka Team

Published : Jun 1, 2024, 7:31 PM IST

Updated : Jun 1, 2024, 9:40 PM IST

ನವದೆಹಲಿ: ಲೋಕಸಭೆ ಚುನಾವಣೆಗೆ ಮತದಾನ ಮುಕ್ತಾಯವಾಗಿದೆ. ಜೂನ್​ 4ರಂದು ಮತ ಎಣಿಕೆ ನಡೆಯಲಿದೆ. ಈಗಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು, ಕರ್ನಾಟಕದ 28 ಕ್ಷೇತ್ರಗಳ ಬಗ್ಗೆಯೂ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕಳೆದ ಬಾರಿಗೆ ಹೋಲಿಸಿದರೆ, ಕಾಂಗ್ರೆಸ್​ ಕನಿಷ್ಠ 5ರಿಂದ 6 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಬಿಜೆಪಿಗೆ ಇದೇ 5 ರಿಂದ 6 ಸ್ಥಾನಗಳು ನಷ್ಟವಾಗುವ ನಿರೀಕ್ಷೆ ಇದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ.

ಚುನಾವಣೋತ್ತರ ಸಮೀಕ್ಷೆ (ETV Bharat)

ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿವೆ. ಮೈತ್ರಿ ಭಾಗವಾಗಿ ಬಿಜೆಪಿ 25 ಕ್ಷೇತ್ರಗಳು, ಜೆಡಿಎಸ್​ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್​ ಎಲ್ಲ 28 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿದೆ. ಕಳೆದ ಬಾರಿ ಕಾಂಗ್ರೆಸ್​ ಕೇವಲ ಒಂದು ಸ್ಥಾನದಲ್ಲಿ ಗೆದ್ದಿತ್ತು. ಈ ಬಾರಿ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ಬಿಜೆಪಿ 25 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಈ ಸಲ ಕೂಡ ಬಿಜೆಪಿ ಹೆಚ್ಚಿನ ಸ್ಥಾನಗಳ ಗಳಿಕೆಯ ನಂಬಿಕೆ ಹೊಂದಿದೆ.

ವಿವಿಧ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಇಲ್ಲಿದೆ..

  • ಇಂಡಿಯಾ ಟುಡೆ ಸಮೀಕ್ಷೆ ಪ್ರಕಾರ, ಬಿಜೆಪಿ 20-22, ಕಾಂಗ್ರೆಸ್​ 03-05 ಹಾಗೂ ಜೆಡಿಎಸ್​ 02-03 ಸ್ಥಾನ ಪಡೆಯಲಿದೆ.
  • ನ್ಯೂಸ್​ 18 ಪ್ರಕಾರ, ಬಿಜೆಪಿ 21-24, ಕಾಂಗ್ರೆಸ್​ 03-07, ಜೆಡಿಎಸ್​ 01-02 ಸ್ಥಾನ ಗಳಿಸಲಿದೆ.
  • ಆ್ಯಕ್ಸಿಸ್​ ಮೈ ಇಂಡಿಯಾ ಪ್ರಕಾರ, ಬಿಜೆಪಿ 23-25, ಕಾಂಗ್ರೆಸ್​ 03-05, ಜೆಡಿಎಸ್​ 02-03 ಸ್ಥಾನ ಪಡೆಯಲಿದೆ.
  • ಸಿಎನ್​ಎನ್ ಪ್ರಕಾರ,​ ಬಿಜೆಪಿ 21-24, ಕಾಂಗ್ರೆಸ್​ 03-07, ಜೆಡಿಎಸ್​ 01-03 ಸ್ಥಾನ ಗಳಿಸಲಿದೆ.
  • ಜನ್​-ಕಿ-ಬಾತ್​ ಪ್ರಕಾರ, ಬಿಜೆಪಿ 21-23, ಕಾಂಗ್ರೆಸ್​ 05-07, ಜೆಡಿಎಸ್​ 02-03 ಸ್ಥಾನ ಪಡೆಯಲಿದೆ.
  • ಎಬಿಸಿ-ಸಿವೋಟರ್​ ಪ್ರಕಾರ, ಬಿಜೆಪಿ 23-25, ಕಾಂಗ್ರೆಸ್​ 03-05 ಮತ್ತು ಜೆಡಿಎಸ್​ ಶೂನ್ಯ ಎಂದು ಭವಿಷ್ಯ ನುಡಿಯಲಾಗಿದೆ.

ಇದನ್ನೂ ಓದಿ:Exit poll LIVE: ಲೋಕಸಭೆ ಚುನಾವಣೆಯ ಎಕ್ಸಿಟ್​​ಪೋಲ್ ಸಮೀಕ್ಷೆ- ಯಾರಿಗೆ ಎಷ್ಟು ಸ್ಥಾನ?

Last Updated : Jun 1, 2024, 9:40 PM IST

ABOUT THE AUTHOR

...view details