ಮಾಲ್ಡಾ (ಪಶ್ಚಿಮ ಬಂಗಾಳ) :ಮುಂಗಾರು ಆರಂಭಕ್ಕೂ ಮುನ್ನವೇ ಗುರುವಾರ ಜಿಲ್ಲೆಯಾದ್ಯಂತ ಸಿಡಿಲು ಬಡಿದು 12 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತದೇಹಗಳನ್ನು ಮಾಲ್ಡಾ ಆಸ್ಪತ್ರೆಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಆಡಳಿತ ಮಂಡಳಿ ಆರಂಭಿಸಿದೆ.
ಜಿಲ್ಲೆಯಲ್ಲಿ ಮಧ್ಯಾಹ್ನದ ನಂತರ ಬಿರುಗಾಳಿ ಸಹಿತ ಗುಡುಗು, ಮಳೆ ಆರಂಭವಾಗಿದೆ. ಆ ಸಮಯದಲ್ಲಿ ಜಮೀನಿನಲ್ಲಿ ಕೆಲಸ ಮಾಡುವ ಕೆಲವರು ತೋಟದಲ್ಲಿ ಮಾವಿನಕಾಯಿ ಕೀಳಲು ಹೋಗಿದ್ರು. ಇದಕ್ಕೂ ಮೊದಲಿಗೆ ಸಿಡಿಲು ಬಡಿದು ವಿವಿಧ ಪ್ರದೇಶಗಳಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಓಲ್ಡ್ ಮಾಲ್ಡಾ ಪ್ರದೇಶದಲ್ಲಿ ಚಂದನ್ ಸಹಾನಿ (40), ರಾಜ್ ಮೃಧಾ (16) ಮತ್ತು ಮನೋಜಿತ್ ಮಂಡಲ್ (21) ಎಂಬ ಮೂವರು ಸಾವನ್ನಪ್ಪಿದ್ದಾರೆ. ಗಜೋಲ್‌ನ ಅಡಿನಾದಲ್ಲಿ ಸಿಡಿಲು ಬಡಿದು 11ನೇ ತರಗತಿ ವಿದ್ಯಾರ್ಥಿ ಅಸಿತ್ ಸಹಾ (19) ಮೃತಪಟ್ಟಿದ್ದಾನೆ. ಆಂಗ್ಲಬಜಾರ್‌ನ ಶೋಭಾನಗರ ಗ್ರಾಮ ಪಂಚಾಯತ್‌ನ ಮಹಿಳೆ ಪಂಕಜ್ ಮಂಡಲ್ (28) ಮತ್ತು ಶ್ವೇತಾರಾ ಬೀಬಿ (39) ಸಾವು ಕೂಡ ವರದಿಯಾಗಿದೆ. ಇವುಗಳಲ್ಲದೇ ಇನ್ನೂ 7 ಸಾವುಗಳು ವರದಿಯಾಗಿವೆ.