ಕರ್ನಾಟಕ

karnataka

ETV Bharat / bharat

ಸಿನಿಮೀಯ ರೀತಿಯಲ್ಲಿ ನಡೆದ ಭೂ ಒತ್ತುವರಿ: ರಾತ್ರೋರಾತ್ರಿ ಐದು ಎಕರೆ ಕೆರೆ ಕಣ್ಮರೆ - ಸಿನಿಮೀಯ ರೀತಿಯಲ್ಲಿ ನಡೆದ ಭೂ ಒತ್ತುವರಿ

ಹೈದರಾಬಾದ್​ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆರಗಳು ಕಣ್ಮರೆ ಆಗುತ್ತಿವೆ ಎಂಬ ಆರೋಪಗಳಿವೆ. ಈ ಅಕ್ರಮ ತಡೆಯಲು ಸ್ಥಳೀಯರು ಮುಂದಾದರೂ ರೌಡಿಗಳ ಬೆದರಿಕೆಯಿಂದಾಗಿ ಅವರು ಹಿಂದೆ ಸರಿದಿದ್ದಾರೆ.

land-occupation-a-five-acre-pond-disappeared-overnight
land-occupation-a-five-acre-pond-disappeared-overnight

By ETV Bharat Karnataka Team

Published : Feb 9, 2024, 12:40 PM IST

ಹೈದರಾಬಾದ್​: ಹೈದರಾಬಾದ್​ ಮಹಾನಗರ ವ್ಯಾಪ್ತಿಯಲ್ಲಿ ರಾತ್ರೋರಾತ್ರಿ ನಡೆಯುವ ಭೂ ಕಬಳಿಕೆಗಳಿಂದಾಗಿ ಅನೇಕ ಕೆರೆಗಳು ಕಣ್ಮರೆಯಾಗುತ್ತಿವೆ. ಕಂದಾಯ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಓಲೈಕೆ ಮಾಡುವ ಮೂಲಕ ಈ ರೀತಿ ನೂರಾರು ಕೋಟಿಯ ಭೂಮಿಗಳು ಒತ್ತುವರಿದಾರರ ಪಾಲಾಗುತ್ತಿದೆ ಎಂಬ ಆರೋಪಗಳು ಇಲ್ಲಿನ ಜನರಿಂದ ವ್ಯಕ್ತವಾಗುತ್ತವೆ.

ಕೆರೆಗಳಿದ್ದ ಜಾಗದಲ್ಲಿ ದೊಡ್ಡ ದೊಡ್ಡ ಮನೆ, ಪ್ಲಾಟ್​, ಉದ್ಯಮಗಳು ತಲೆ ಎತ್ತುತ್ತಿವೆ. ಇದೀಗ ಅದೇ ರೀತಿಯಲ್ಲಿ ರಾತ್ರೋ ರಾತ್ರಿ ಭೂಮಿ ಒತ್ತುವರಿ ಮಾಡಲು ಯತ್ನಿಸಿರುವ ಘಟನೆ ರಾಜೇಂದ್ರನಗರ ಕ್ಷೇತ್ರದ ಮಮಿಡಿಕುಂಟಾ ಕೆರೆಯಲ್ಲಿ ನಡೆದಿದೆ. ಬುಧವಾರ ರಾತ್ರಿ 8 ಗಂಟೆಯಿಂದ ಗುರುವಾರ ಬೆಳಗ್ಗೆ 4 ಗಂಟೆಯವರೆಗೆ ಐದು ಎಕರೆ ಕೆರೆ ಪ್ರದೇಶವನ್ನು 20 ಪ್ರೊಕ್ಲೈನರ್​ ಮತ್ತು 40 ಟಿಪ್ಪರ್​​ಗಳು ಮರಳಿನಿಂದ ಮುಚ್ಚಿ ಹಾಕಿವೆ ಎಂಬ ಆರೋಪಗಳು ಕೇಳಿ ಬಂದಿವೆ.

ಸ್ಥಳೀಯರು ಈ ಅಕ್ರಮ ತಡೆಯಲು ಮುಂದಾದರೂ ರೌಡಿಗಳ ಬೆದರಿಕೆಯಿಂದಾಗಿ ಅವರು ಹಿಂದೆ ಸರಿದಿದ್ದಾರೆ. ಜಿಎಚ್​ಎಂಸಿ ಅಡಿ 185 ಹೊಂಡಗಳಿದ್ದವು, ಇನ್ನು ಎಚ್​ಎಂಡಿಎ ಅಡಿ 3,500 ಹೊಂಡಗಳಿವೆ. ಇದರಲ್ಲಿ ಶೇ 50ರಷ್ಟು ಒತ್ತುವರಿದಾರರ ಪಾಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್​​ ಎಲ್ಲ ಕೆರೆ, ಕೊಳದ ಸುತ್ತ ಎಫ್​ಟಿಎಲ್​ ಬೇಲಿ ಹಾಕುವಂತೆ ಅಧಿಕಾರಿಗಳಿಗೆ ಆದೇಶ ನೀಡಿದೆ. ಆದರೂ, ಇಲ್ಲಿಯವರೆಗೆ ಶೇ 25ರಷ್ಟು ಕೊಳಗಳನ್ನು ಕೂಡ ಗುರುತಿಸಲಾಗಿಲ್ಲ.

ರಾಜೇಂದ್ರನಗರ ಪ್ರದೇಶ:ರಾಜೇಂದ್ರನಗರ ಸರ್ಕಲ್​​ನಲ್ಲಿ ಕಳೆದೊಂದು ವರ್ಷದಿಂದ ಹಲವು ಎಕರೆ ಪ್ರದೇಶಗಳನ್ನು ಈ ರೀತಿ ಕಬಳಿಸಲಾಗಿದೆ. ಇದೇ ಸಂದರ್ಭದಲ್ಲಿ ಈ ಕುರಿತು ಸ್ಥಳೀಯರು ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಇಡೀ ಸಂಪೂರ್ಣ ಪ್ರಕರಣದಲ್ಲಿ ಅನೇಕ ಕಾಣದ ಕೈಗಳು ಕೂಡ ಇದೆ ಎಂಬುದು ತಿಳಿದು ಬರುತ್ತದೆ. ಗುರುವಾರ ನಡೆದ ಹೊಂಡ ಒತ್ತುವರಿ ಪ್ರಕರಣ ಸಂಬಂಧ ಕೂಡ ಸ್ಥಳೀಯರು ದೂರಿದ್ದಾರೆ. ಆದರೆ, ಇದನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಮೈಲಾರ್​ದೆವುಪಲ್ಲಿ ವಿಭಾಗದ ಕಾಂಗ್ರೆಸ್​ ಅಧ್ಯಕ್ಷ ಧನುಂಜಯ್​ ನೇತೃತ್ವದಲ್ಲಿ ಅಧಿಕಾರಿಗಳು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ ಶಂಶಬಾದ್​ ಪೊಲೀಸರು 2 ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಬಾಬುಲ್​ ರೆಡ್ಡಿಯಲ್ಲಿನ ನರ್ಸಬಾಯಿ ಕುಂಟಾದ ಕಟೆಡಾನ್​ನಲ್ಲಿ ಎರಡು ವರ್ಷದ ಹಿಂದೆ 22 ಎಕರೆ ಪ್ರದೇಶವನ್ನು ಹೊಂದಿತು. ಇಲ್ಲಿನ ಮಮಿಡಿಕುಂಟಾವನ್ನು ಒತ್ತುವರಿ ಮಾಡಿ, ಸಂಪೂರ್ಣ ಕೆರೆಯನ್ನು ಮಣ್ಣನ್ನು ಹಾಕಿ ಮುಚ್ಚಿ ಹಾಕಲಾಗಿದ್ದು, ಆ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿ ಮಾರಲಾಗಿದೆ.

ಕಟೆಡಾನ್​ನಲ್ಲಿನ ಅಪ್ಪ ಕೊಳ ಕೂಡ 39 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಈ ಹಿಂದೆ ಈ ಕೊಳವೂ ಸಾವಿರಾರು ಜನರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುತ್ತಿತ್ತು. ಈ ಪ್ರದೇಶವನ್ನು ಪ್ರವಾಹದಿಂದ ರಕ್ಷಿಸುತ್ತಿತ್ತು. ಆದರೆ, ಈ ಪ್ರದೇಶದ ಮೇಲೆ ಕಬಳಿಕೆದಾರರ ಕಣ್ಣು ಬಿದ್ದು, ಇದೀಗ ಈ ಕೊಳ ಕೇವಲ 12 ಎಕರೆಯಷ್ಟು ಉಳಿದು ಕೊಂಡಿದೆ. ಉಳಿದ ಜಾಗದಲ್ಲಿ ಮನೆ, ಫ್ಲಾಟ್​​ಗಳು ತಲೆ ಎತ್ತಿನಿಂತಿದೆ.

ಇದನ್ನೂ ಓದಿ: ಅತೀಂದ್ರಿಯ ಆಚರಣೆ: ಮೂಢನಂಬಿಕೆಯಿಂದ ಮಗುವಿನ ಕತ್ತು ಸೀಳಿದ ತಾಯಿ

ABOUT THE AUTHOR

...view details