ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣದಲ್ಲಿ ಬಂಧಿತವಾಗಿದ್ದ ಆರ್ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವರಾದ ಲಾಲು ಪ್ರಸಾದ್ ಯಾದವ್ ಮತ್ತು ಅವರ ಮಕ್ಕಳಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ಗೆ ನವದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.
ವಿಶೇಷ ನ್ಯಾಯಮೂರ್ತಿ ವಿಶಾಲ್ ಗೊಂಗ್ನೆ ಪೀಠ, ಪ್ರತಿಯೊಬ್ಬರಿಗೂ ಒಂದು ಲಕ್ಷ ಮೊತ್ತದ ಬಾಂಡ್ ಆಧಾರ ಮೇಲೆ ಷರತ್ತುಬದ್ಧ ಜಾಮೀನು ನೀಡಿದೆ.
ಕೋರ್ಟ್ ಈ ಹಿಂದೆ ನೀಡಿದ ಸಮನ್ಸ್ ಜಾರಿ ಮಾಡಿದ ಬಳಿಕ ಆರೋಪಿಗಳು ಕೋರ್ಟ್ ಮುಂದೆ ಆರೋಪಿಗಳು ಹಾಜರಾಗಿದ್ದರು. ಆರೋಪಿಗಳ ವಿರುದ್ಧದ ಪೂರಕ ಆರೋಪ ಪಟ್ಟಿಯನ್ನು ಪರಿಗಣಿಸಿದ ಬಳಿಕ ನ್ಯಾಯಾಧೀಶರು ಸಮನ್ಸ್ ಜಾರಿ ಮಾಡಿದ್ದರು. ಆಗಸ್ಟ್ 6ರಂದು ಜಾರಿ ನಿರ್ದೇಶನಾಲಯ ಕೋರ್ಟ್ ಮುಂದೆ ಅಂತಿಮ ವರದಿ ಸಲ್ಲಿಸಿತು.
ಸಿಬಿಐ ಎಫ್ಐಆರ್ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿತು. 2004 ರಿಂದ 2009ರಲ್ಲಿ ಲಾಲು ಪ್ರಸಾದ್ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಪಶ್ಚಿಮ ಕೇಂದ್ರ ರೈಲ್ವೆ ವಲಯದಲ್ಲಿ ಮಧ್ಯಪ್ರದೇಶ ಜಬಲ್ಪುರ್ನಲ್ಲಿ ಗ್ರೂಪ್ ಡಿ ನೇಮಕಾತಿಯಲ್ಲಿ ಈ ಅವ್ಯವಹಾರ ನಡೆದಿತ್ತು. ಉದ್ಯೋಗ ಪಡೆದದವರು ನೇಮಕಾತಿಗೆ ಬದಲಾಗಿ ಆರ್ಜೆಡಿ ಮುಖ್ಯಸ್ಥರು ಅಥವಾ ಅವರ ಸಹಚರರಿಗೆ ಉಡುಗೊರೆಯಾಗಿ ಭೂಮಿಯನ್ನು ವರ್ಗಾವಣೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ: ಪುಟ್ಟ ಮಗುವಿನ ಮೇಲೆ ದಾಳಿ ಮಾಡಿದ ನರಭಕ್ಷಕ ತೋಳ ಕೊಂದು ಹಾಕಿದ ಗ್ರಾಮಸ್ಥರು