ಕರ್ನಾಟಕ

karnataka

ETV Bharat / bharat

ಬಂಗಾರ ಬಣ್ಣದ ನಾಗರಹಾವು ನೋಡಿದ್ದೀರಾ? ಇಲ್ಲವಾದಲ್ಲಿ ಇಲ್ಲಿದೆ ನೋಡಿ ಗೋಲ್ಡನ್​ ಕಲರ್​ ನಾಗ! - ANDHRA PRADESH GOLDEN COBRA

ಆಂಧ್ರಪ್ರದೇಶದ ಡಾಲ್ಫಿನ್​​ ಹಿಲ್ಸ್​ನಲ್ಲಿರುವ ನೌಕಾಪಡೆಯ ಕ್ವಾರ್ಟರ್ಸ್‌ನಲ್ಲಿ ಬಂಗಾರ ಬಣ್ಣದ ನಾಗರ ಹಾವೊಂದು ಕಂಡುಬಂದಿದೆ. ಜನರು ಕುತೂಹಲದಿಂದ ವೀಕ್ಷಿಸಿದ್ದಾರೆ.

ಬಂಗಾರ ಬಣ್ಣದ ನಾಗರಹಾವು
ಬಂಗಾರ ಬಣ್ಣದ ನಾಗರಹಾವು (ETV Bharat)

By ETV Bharat Karnataka Team

Published : Nov 13, 2024, 6:10 PM IST

ಅಮರಾವತಿ (ಆಂಧ್ರಪ್ರದೇಶ):ಹಾವುಗಳು ಸಹಜವಾಗಿ ಕಪ್ಪು, ಕಂದು ಬಣ್ಣದಲ್ಲಿ ಬರುತ್ತವೆ. ಮಾನವನ ಆವಾಸ್ಥ ಸ್ಥಾನದಿಂದ ದೂರದಲ್ಲಿ ಬದುಕುವ ಅವು ಆಗಾಗ್ಗೆ ಜನರ ಮಧ್ಯೆ ಗೋಚರಿಸುವುದುಂಟು. ಇಂತಿಪ್ಪ, ಆಂಧ್ರಪ್ರದೇಶದಲ್ಲಿ ಬಂಗಾರದ ಹಾವು ಕಂಡುಬಂದಿದೆ.

ಗಾಬರಿ ಬೇಡ. ಬಂಗಾರದ ಹಾವು ಎಂದರೆ, ಥೇಟ್​ ಬಂಗಾರದ್ದೇ ಅಲ್ಲ. ಚಿನ್ನದ ಹೊಳಪಿನ ನಾಗರಹಾವು ಇದಾಗಿದೆ. ವಿಶಾಖದ ಯಾರಾಡ ಡಾಲ್ಫಿನ್​​ ಹಿಲ್ಸ್​ನಲ್ಲಿರುವ ನೌಕಾಪಡೆಯ ಕ್ವಾರ್ಟರ್ಸ್‌ನಲ್ಲಿ ಇಂಥದ್ದೊಂದು ಹಾವು ಪತ್ತೆಯಾಗಿದೆ. ಇದರ ಹೆಡೆ ಮತ್ತು ದೇಹದ ಭಾಗ ಚಿನ್ನದಂತೆ ಹೊಳೆಯುತ್ತಿದೆ.

ಹಾವುಗಳ ಸಂರಕ್ಷಕ ನಾಗರಾಜ್ ಎಂಬುವರು ಈ ಚಿನ್ನದ ನಾಗರಹಾವನ್ನು ಹಿಡಿದಿದ್ದಾರೆ. ನೌಕಾಪಡೆಯ ನೌಕರರೊಬ್ಬರು ಶೆಡ್‌ನಲ್ಲಿ ಕಾರನ್ನು ತೆಗೆಯುವಾಗ ಈ ಸರೀಸೃಪ ಕಂಡುಬಂದಿದೆ. ತಕ್ಷಣವೇ ನಾಗರಾಜ್​ ಅವರಿಗೆ ಮಾಹಿತಿ ನೀಡಲಾಗಿತ್ತು. ಹಾವಿನ ಮುಂಭಾಗ ಮತ್ತು ಹಿಂಭಾಗ ಚಿನ್ನದ ಬಣ್ಣ ಹೊಂದಿದೆ. ಬಂಗಾರದ ಹಾವನ್ನು ಕಂಡ ಸ್ಥಳೀಯರು ಕುತೂಹಲ ವ್ಯಕ್ತಪಡಿಸಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಇಂಥಹದ್ದೇ ಹಾವನ್ನು ನೋಡಿದ್ದೆ ಎಂದು ಹಾವು ಹಿಡಿಯುವ ನಾಗರಾಜ್​ ಅವರು

ಇದನ್ನೂ ಓದಿ: Watch.. ನಾಗರಹಾವು - ಮುಂಗುಸಿ ನಡುವೆ ರಣಭೀಕರ ಕಾಳಗ: ಕೊನೆಯಲ್ಲೊಂದು ಬಿಗ್​ ಟ್ವಿಸ್ಟ್

ABOUT THE AUTHOR

...view details