ಶ್ರೀನಗರ: ಕಾಶ್ಮೀರ ಕಣಿವೆಯು ಬಿಸಿಲಿನ ಬೇಗೆಯಿಂದ ತತ್ತರಿಸಿದೆ. ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಕಳೆದ ರಾತ್ರಿ ಗರಿಷ್ಠ 24.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮಕ್ಕಳು, ಮಹಿಳೆಯರು, ವಯೋವೃದ್ಧರು ಬಿಸಿಲು ಮತ್ತು ಬಿಸಿ ಗಾಳಿಯಿಂದ ತತ್ತರಿಸಿದ್ದಾರೆ. ಬಿಸಿಲಿನ ಹೊಡೆತದಿಂದ ಹೊರಬರಲು ಫ್ಯಾನ್, ಏರ್ ಕೂಲರ್, ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಎರಡು ದಿನಗಳ ಕಾಲ ಶಾಲೆಗಳಿಗೂ ಕೂಡ ರಜೆ ಘೋಷಿಸಲಾಗಿದೆ.
ಇದು ಸಾಮಾನ್ಯ ದಿನಕ್ಕಿಂತ 6.0 ಡಿಗ್ರಿ ಹೆಚ್ಚಾಗಿದೆ. ಜುಲೈ 21, 1988 ರಂದು ದಾಖಲಾದ ಅತ್ಯಧಿಕ ಕನಿಷ್ಠ ತಾಪಮಾನವು 25.2 ಡಿಗ್ರಿ ಸೆಲ್ಸಿಯಸ್ ಆಗಿದೆ. ಕಾಶ್ಮೀರ ಕಣಿವೆಯಲ್ಲಿ ದಿನದಿಂದ ದಿನಕ್ಕೆ ಸೂರ್ಯನ ಶಾಖ ಹೆಚ್ಚಾಗುತ್ತಿರುವ ಹಿನ್ನೆಲೆ ಜುಲೈ 29 ಮತ್ತು 30 ರಂದು ಪ್ರಾಥಮಿಕ ಹಂತದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ವಿಭಾಗೀಯ ಆಯುಕ್ತ ವಿ ಕೆ ಬಿಧುರಿ ಆದೇಶ ಹೊರಡಿಸಿದ್ದಾರೆ.
ಋತುಮಾನದ ಸರಾಸರಿಗಿಂತ 6 ಡಿಗ್ರಿ ಸೆಲ್ಸಿಯಸ್ ಹೆಚ್ಚು:ಭಾನುವಾರ ಮತ್ತು ಸೋಮವಾರದ ಮಧ್ಯರಾತ್ರಿ ಶ್ರೀನಗರಲ್ಲಿ ಕನಿಷ್ಠ 24.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಋತುಮಾನದ ಸರಾಸರಿಗಿಂತ ಸುಮಾರು 6.0 ಡಿಗ್ರಿ ಡಿಗ್ರಿಗಳಷ್ಟು ಹೆಚ್ಚಾಗಿದೆ. ಈ ತಾಪಮಾನವು ಜುಲೈ 26, 2021 ರಂದು ದಾಖಲಾದ ಎರಡನೇ ಅತಿ ಹೆಚ್ಚು ಕನಿಷ್ಠ ತಾಪಮಾನಕ್ಕೆ ಸರಿಸಮಾನವಾಗಿದೆ. ಜುಲೈ 21, 1988 ರಂದು ದಾಖಲಿಸಲಾದ ಅತ್ಯಧಿಕ ಕನಿಷ್ಠ ತಾಪಮಾನವು 25.2 ಡಿಗ್ರಿ ಸೆಲ್ಸಿಯಸ್ ಆಗಿದೆ. ತಣ್ಣನೆಯ ಕಾಶ್ಮೀರದದಲ್ಲಿ ಸೂರ್ಯನ ಶಾಖದಿಂದ ಜನರು ಬೇಸತ್ತು ಹೋಗಿದ್ದಾರೆ. ಹಲವರು ಏರ್ ಕೂಲರ್‌ಗಳ ಮೊರೆ ಹೋಗುತ್ತಿದ್ದಾರೆ ಎಂದು ಸ್ವತಂತ್ರ ಹವಾಮಾನ ಮುನ್ಸೂಚಕ ಫೈಜಾನ್ ಆರಿಫ್ ಮಾಹಿತಿ ನೀಡಿದ್ದಾರೆ.
ಜನರು ಫ್ಯಾನ್, ಏರ್ ಕೂಲರ್ ಮೊರೆ ಹೋಗಿದ್ದರಿಂದ ಹವಾನಿಯಂತ್ರಿತ (ಎಸಿ) ಗಳಿಗೆ ಬೇಡಿಕೆ ಹೆಚ್ಚಾಗಿದೆ. ಶ್ರೀನಗರದ ಓಲ್ಡ್ ಸಿಟಿಯಲ್ಲಿ ಇವುಗಳ ಮಾರಾಟದ ಪ್ರಮಾಣದಲ್ಲಿ ಹೆಚ್ಚಾಗಿದೆ. ಮರುಭೂಮಿ ಕೂಲರ್‌ಗಳಿಗೆ ಇಷ್ಟು ಬೇಡಿಕೆಯನ್ನು ನಾನು ನೋಡಿಯೇ ಇಲ್ಲ ಎಂದು ಐತಿಹಾಸಿಕ ಜಾಮಿಯಾ ಮಸೀದಿಯ ಹತ್ತಿರದಲ್ಲಿ ವ್ಯಾಪಾರ ನಡೆಸುತ್ತಿರುವ ಚಿಲ್ಲರೆ ವ್ಯಾಪಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.