ಚೆನ್ನೈ, ತಮಿಳುನಾಡು: ಮುಖ್ಯಮಂತ್ರಿ ಎಂ.ಕೆ. ತಮಿಳುನಾಡಿನಲ್ಲಿ ಕೈಗಾರಿಕಾ ಸಂಪನ್ಮೂಲಗಳನ್ನು ಹೆಚ್ಚಿಸಲು ಇನ್ನಿಲ್ಲದ ಪ್ರಯತ್ನ ಆರಂಭಿಸಿದ್ದಾರೆ. ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರಣೆ ಮಾಡುವ ಸಲುವಾಗಿ ಸ್ಟಾಲಿನ್ ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಸೆ.28ರಂದು ರಾಣಿಪೇಟೆ ಪಣಂಪಕ್ಕಂನಲ್ಲಿ ಟಾಟಾದ ಪ್ರೀಮಿಯಂ ಕಾರು ಕಂಪನಿ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ ಆರಂಭವಾಗಲಿದೆ. ಇದಕ್ಕೆ ಸ್ವತಃ ಸಿಎಂ ಎಂ ಕೆ ಸ್ಟಾಲಿನ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸಮ್ಮುಖದಲ್ಲಿ ಮಾರ್ಚ್ 13 (13.03.2024) ರಂದು ಟಾಟಾ ಮೋಟಾರ್ಸ್ ಗ್ರೂಪ್ ಮತ್ತು ಸರ್ಕಾರದ ನಡುವೆ ಕೈಗಾರಿಕಾ ಇಲಾಖೆಯ ಪರವಾಗಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿತ್ತು.
5 ಸಾವಿರ ಜನರಿಗೆ ನೇರ ಉದ್ಯೋಗ:ಈ ಹಿನ್ನೆಲೆಯಲ್ಲಿ ಟಾಟಾ ಮೋಟರ್‌ನ ವಾಹನ ತಯಾರಿಕಾ ಘಟಕವು ರಾಣಿಪೇಟ್ ಜಿಲ್ಲೆಯ ಸಿಪ್‌ಕಾಟ್ ಸಂಕೀರ್ಣದಲ್ಲಿ ಸ್ಥಾಪನೆಯಾಗಲಿದೆ ಎಂದು ಹೇಳಲಾಗಿದೆ. ಸದ್ಯ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ದಿನಾಂಕವನ್ನು ಕೈಗಾರಿಕೆ ಅಧಿಕಾರಿಗಳು ಪ್ರಕಟಿಸಿದ್ದಾರೆ. ಇದರಿಂದ 5,000 ಜನರಿಗೆ ನೇರವಾಗಿ ಮತ್ತು 15,000 ಕ್ಕೂ ಹೆಚ್ಚು ಜನರಿಗೆ ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಈ ವಿಚಾರವನ್ನು ತಮಿಳುನಾಡು ಕೈಗಾರಿಕಾ ಸಚಿವ ಟಿಆರ್ ಪಿ ರಾಜಾ ತಮ್ಮ ಎಕ್ಸ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.