ಎರ್ನಾಕುಲಂ: ಕಣ್ಣೂರು ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಬಾಬು ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೆ.ಮಂಜುಷಾ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಬುಧವಾರ ಪುರಸ್ಕರಿಸಿದೆ. ತಮ್ಮ ಅಧಿಕೃತ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದ್ದ ಪ್ರಕರಣದ ವಿಚಾರಣೆ ನಡೆಸಲು ಕೋರ್ಟ್ ಸಮ್ಮತಿ ಸೂಚಿಸಿದೆ. ಸಿಬಿಐ ತನಿಖೆಗೆ ಕೋರಿ ಸಲ್ಲಿಸಿರುವ ಅರ್ಜಿಯ ಬಗ್ಗೆ ನಿಲುವು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ಸಿಬಿಐಗೆ ಹೈಕೋರ್ಟ್ ಸೂಚಿಸಿದೆ. ಪ್ರಕರಣದ ಡೈರಿ ಹಾಗೂ ತನಿಖಾಧಿಕಾರಿಯ ಅಫಿಡವಿಟ್ ಅನ್ನು ಡಿಸೆಂಬರ್ 6ರೊಳಗೆ ಸಲ್ಲಿಸುವಂತೆ ಹೈಕೋರ್ಟ್ ಇದೇ ವೇಳೆ ಸೂಚಿಸಿದೆ.
ಪ್ರಕರಣದ ಅಂತಿಮ ವರದಿಯನ್ನು ನೀಡದಂತೆ ಮಾಡಿಕೊಂಡ ಕುಟುಂಬದ ಮನವಿಯನ್ನ ಕೋರ್ಟ್ ಇದೇ ವೇಳೆ ತಿರಸ್ಕರಿಸಿದೆ. ಕುಟುಂಬದ ಮನವಿಯನ್ನು ಹೈಕೋರ್ಟ್ ಸ್ವೀಕರಿಸಲಿಲ್ಲ. ತನಿಖೆ ಪೂರ್ಣಗೊಳಿಸಲು ವಿರೋಧಿಸುತ್ತಿರುವುದು ಏಕೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಚಾರ್ಜ್ ಶೀಟ್ ಸಲ್ಲಿಸಿದರೂ ನ್ಯಾಯಾಲಯದ ಅಧಿಕಾರ ಕಣ್ಮರೆಯಾಗುವುದಿಲ್ಲ. ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರವೂ ಸಿಬಿಐ ತನಿಖೆಗೆ ಆದೇಶಿಸಬಹುದು ಎಂದು ಏಕಸದಸ್ಯ ಪೀಠ ಹೇಳಿದೆ. ನವೀನ್ ಬಾಬು ಪ್ರಕರಣ ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಇದಕ್ಕೆ ಉತ್ತರಿಸಿದ ನವೀನ್ ಬಾಬು ಕುಟುಂಬದ ಪರ ವಕೀಲರು, ಆರೋಪಿ ಪಿಪಿ ದಿವ್ಯಾ ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷ್ಯಗಳನ್ನು ತಿರುಚಿ ಕೊಲೆ ಮಾಡಿರುವ ಶಂಕೆ ಇದೆ ಎಂದು ಹೇಳಿದರು. ನ್ಯಾಯಮೂರ್ತಿ ಬಚು ಕುರಿಯನ್ ಥಾಮಸ್ ಅವರು ಸಿಬಿಐ ತನಿಖೆಗೆ ಕೋರಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ್ದು, ಈ ಸಂಬಂಧ ಡಿಸೆಂಬರ್ 6ರಂದು ವಿಚಾರಣೆ ನಡೆಯಲಿದೆ.
ಬಾಬು ಅವರು, ಚೆಂಗಲೈನಲ್ಲಿ ಪೆಟ್ರೋಲ್ ಪಂಪ್‌ನ ಅನುಮೋದನೆಯನ್ನು ಹಲವಾರು ತಿಂಗಳುಗಳಿಂದ ವಿಳಂಬಗೊಳಿಸಿದ್ದಕ್ಕಾಗಿ ಪ್ರಕರಣದ ಆರೋಪಿ ದಿವ್ಯಾ ಟೀಕಿಸಿದ್ದರು. ಕಣ್ಣೂರಿನಿಂದ ಅಧಿಕೃತವಾಗಿ ವರ್ಗಾವಣೆಗೊಂಡ ಒಂದು ದಿನದ ಬಳಿಕ ಅಂದರೆ ಅಕ್ಟೋಬರ್ 15 ರಂದು ಬಾಬು ಅವರ ಅಧಿಕೃತ ಕ್ವಾರ್ಟರ್ಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಇದನ್ನು ಓದಿ: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಮನೆ ಪರಿಶೀಲಿಸಿ, ವರದಿ ನೀಡಿ: ಮಧು ಬಂಗಾರಪ್ಪ ಸೂಚನೆ