ಹೈದರಾಬಾದ್: ಐಐಟಿ ಹೈದರಾಬಾದ್ನ ಜಪಾನ್ ಕೆರಿಯರ್ ಡೇ -2024ರಲ್ಲಿ ಆಚರಣೆ ಮಾಡಲಾಗಿದ್ದು, ಪ್ರತಿಷ್ಟಿತ ಜಪಾನಿ ಕಂಪನಿಗಳು ಭಾಗಿಯಾಗಿದ್ದು, ಐಐಟಿ ಎಚ್ನ ವಿದ್ಯಾರ್ಥಿಗಳಿಗೆ ಅಲ್ಲಿಯೇ ಇಂಟರ್ನ್ಶಿಪ್ ಅವಕಾಶ ಒದಗಿಸಲಾಗಿದೆ.
ಐಐಟಿಎಚ್ನಲ್ಲಿ 2018ರಿಂದ ಜಪಾನ್ ವಿದೇಶಿ ವ್ಯಾಪಾರ ಸಂಘಟನೆಯಿಂದ (ಜೆಇಟಿಆರ್ಒ) ಪ್ರತಿ ವರ್ಷ ಈ ದಿನಾಚರಣೆ ನಡೆಸಲಾಗುತ್ತಿದೆ. ಆದರೆ, ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮವನ್ನು ಎರಡು ದಿನಗಳ ಕಾಲ ಆಚರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ವೃತ್ತಿಗೆ ಅವಕಾಶವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ 18 ಜಪಾನಿ ಕಂಪನಿಗಳು ಪ್ರತಿನಿಧಿಗಳು ಭಾಗಿಯಾಗಿದ್ದವು. ಈ ವೇಳೆ, ಜಪಾನಿನ ಕಂಪನಿಗಳು ತಮ್ಮ ಸಂಸ್ಥೆಗಳಿಗೆ ಸೇರುವುದರಿಂದ ಆಗಲಿರುವ ಪ್ರಯೋಜನ ಏನು ಎಂಬ ಕುರಿತು ಆಳವಾಗಿ ವಿವರಣೆ ಮಾಡಿದವು. ಅಲ್ಲದೇ, 9 ಕಂಪನಿಗಳು ಇಂಟರ್ನ್ಶಿಪ್ಗೆ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಮುಖಾಮುಖಿ ಸಂದರ್ಶನ ನಡೆಸಿದವು.
ಜೆಇಟಿಆರ್ಇಒ ಪ್ರಧಾನ ನಿರ್ದೇಶಕ (ಬೆಂಗಳೂರು) ತೊಶಿರೊ ಮಿಜುಟನಿ ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗಿಯಾದ ಕಂಪನಿಗಳಲ್ಲಿ ಎಂಟು ಮಲ್ಟಿನ್ಯಾಷನಲ್ ಕಾರ್ಪೊರೇಷನ್ಸ್, ಐದು ಮೈಕ್ರೋ ಮತ್ತು ಮಧ್ಯಮ ಎಂಟರ್ಪ್ರೈಸೆಸ್ ಮತ್ತು ಐದು ಸಣ್ಣ ಕಂಪನಿಗಳಾಗಿವೆ. ಜಪಾನ್ ಐಟಿ ಇಂಜಿನಿಯರಿಂಗ್ ಕೊರತೆ ಎದುರಿಸುತ್ತಿದ್ದು, ಈ ಹಿನ್ನಲೆ ಭಾರತದ ಇಂಜಿನಿಯರಿಂಗ್ಗಳಿಗೆ ಅವಕಾಶ ಸೃಷ್ಟಿಸಲಾಗುವುದು ಎಂದಿದ್ದಾರೆ. ತಮ್ಮ ಸಂಸ್ಥೆಗಳಲ್ಲಿ ಐಐಟಿ ಹೈದರಾಬಾದ್ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ತುದಿಗಾಲಲ್ಲಿ ಇದ್ದೇವೆ. ಕೌಶಲ್ಯ ಮತ್ತು ಜ್ಞಾನವೂ ಹೊಸ ಅವಿಷ್ಕಾರಕ್ಕೆ ಕಾರಣವಾಗುತ್ತದೆ ಎಂದು ನಂಬಿದ್ದೇವೆ.