ಶ್ರೀನಗರ: ಮಹತ್ವದ ಆದೇಶ ಪ್ರಕಟಿಸಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಶ್ರೀನನಗರದಲ್ಲಿರುವ ಅನೇಕ ದೇವಸ್ಥಾನದ ಆಸ್ತಿಗಳನ್ನು ನಿಯಂತ್ರಣಕ್ಕೆ ಪಡೆಯುವಂತೆ ಜಿಲ್ಲಾ ಆಯುಕ್ತರಿಗೆ ಸೂಚಿಸಿದೆ. ಇದೇ ವೇಳೆ ಸ್ಥಳೀಯರೊಂದಿಗೆ ಸೇರಿ ಮಹಂತರು ಮತ್ತು ಬಾಬಾಗಳು, ಸ್ಥಳೀಯರು ಪರಿಸ್ಥಿತಿಯ ಲಾಭ ಪಡೆದುಕೊಂಡಿದ್ದಾರೆ ಎಂದು ಕೋರ್ಟ್ ತಿಳಿಸಿದೆ.
ಶ್ರೀನಗರದ ಬಾರ್ಜುಲ್ಲಾದಲ್ಲಿರುವ ಐತಿಹಾಸಿಕ ರಘುನಾಥ್ ಜಿ ದೇವಸ್ಥಾನದ ಆಸ್ತಿಯನ್ನು ವಶಕ್ಕೆ ಪಡೆಯುವಂತೆ ಶ್ರೀನಗರ ಆಡಳಿತಕ್ಕೆ ನ್ಯಾಯಾಲಯ ಆದೇಶಿಸಿದೆ. ದೇಗುಲದ 159 ಕನಲ್ನ ಭೂಮಿಯನ್ನು ಕಾಶ್ಮೀರ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಮಿಯಾನ್ ಕ್ವಯುಮ್ ಮತ್ತು ಆತನ ಸಹೋದರ ಸ್ವಾದೀನ ಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಈ ಸಂಬಂಧ ಮಂಗಳವಾರ ಶ್ರೀನಗರದ ಜಿಲ್ಲಾ ಆಯುಕ್ತರಿಗೆ ನಿರ್ದೇಶಿಸಿದ ನ್ಯಾಯಾಲಯ, ಶ್ರೀನಗರದಲ್ಲಿನ ಸತು ಬರ್ಬರ್ ಶ್ರೀ ಭಜರಂಗ್ ದೇವ್ ಧರಮ್ ದಾಸ್ ಜಿ ಮಂದಿರ್ ಸೇರಿದಂತೆ ಹಲವು ದೇಗುಲದ ಆಸ್ತಿ ಮತ್ತು ನಿರ್ವಹಣೆಯನ್ನು ವಹಿಸಿಕೊಳ್ಳುವಂತೆ ತಿಳಿಸಿದೆ. 1990ರ ಬಳಿಕ ಅತಿಕ್ರಮಣಗಳು ಮತ್ತು ದುರುಪಯೋಗಕ್ಕೆ ಒಳಗಾಗಿರುವ ಪ್ರದೇಶದಾದ್ಯಂತ ದೇವಾಲಯಗಳ ಸ್ವತ್ತುಗಳನ್ನು ರಕ್ಷಿಸುವ ಮತ್ತು ನಿರ್ವಹಣೆ ಈ ಆದೇಶದ ಉದ್ದೇಶವಾಗಿದೆ.
ನ್ಯಾ. ಸಂಜೀವ್ ಕುಮಾರ್ ಮತ್ತು ಎಂಎ ಚೌಧರಿ ಒಳಗೊಂಡ ವಿಭಾಗೀಯ ಪೀಠ, ಈ ಅರ್ಜಿ ವಿಲೇವಾರಿ ನಡೆಸಿದೆ. ಜೊತೆಗೆ ದೇಗುಲಗಳ ಒಟ್ಟಾರೆ ನಿರ್ವಹಣೆ ಮತ್ತು ದೈನಂದಿನ ಸಂಪ್ರದಾಯ ಮೇಲ್ವಿಚಾರಣೆ ನಡೆಸಲು ಕಂದಾಯ ಮತ್ತು ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಸಮಿತಿಯನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಈ ದೇಗುಲಗಳ ಆಸ್ತಿಯು ದೇವರಿಗೆ ಸಂಬಂಧಿಸಿದ್ದಾಗಿದೆ. ಈ ಸಂಬಂಧ ಯಾವುದೇ ವ್ಯಕ್ತಿ ಮಾಲೀಕತ್ವ ಅಥವಾ ನಿರ್ವಹಣೆ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದಿದೆ.
ಇದೇ ವೇಳೆ ನ್ಯಾಯಾಲಯ, ಮಹಾರಾಜರ ಈ ದೇಗುಲಗಳ ನಿರ್ಮಾಣಕ್ಕೆ ತಮ್ಮ ಆಸ್ತಿಯನ್ನು ನೀಡಿದ್ದಾರೆ ಎಂದು ತಿಳಿಸಿತು. ಈ ದೇಗುಲಗಳಿಂದ ಬರುವ ಆದಾಯವನ್ನು ದೇಗುಲಗಳ ನಿರ್ವಹಣೆ ಮತ್ತು ದತ್ತಿ ಚಟುವಟಿಕೆಗೆ ಬಳಕೆ ಮಾಡಲು ಬೆಂಬಲಿಸಬೇಕು. ಈ ಆಸ್ತಿ ದಾಖಲಾಗದೇ ಇರುವ ಹಿನ್ನೆಲೆ ಇದೀಗ ಇವು ನಿರ್ವಹಣೆ ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದಗಳು ಹುಟ್ಟಿಕೊಂಡಿವೆ.
ಬಾರ್ಜುಲ್ಲಾದಲ್ಲಿರುವ ರಘುನಾಥ್ ಜಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮಿಯಾನ್ ಕ್ವಯುಮ್ ಮತ್ತು ಆತನ ಸಹೋದರ ವಶಕ್ಕೆ ಪಡೆದಿರುವ ಆರು ಕನಲ್ಸ್ ಸೇರಿದಂತೆ 159 ಕನಲ್ ಭೂಮಿ ಸ್ವಾಧೀನ ಪಡಿಸಿಕೊಂಡಿರುವ 159 ಕನಲ್ ಅನ್ನು ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯ ಆದೇಶಿಸಿದೆ. ಈ ಆಸ್ತಿ ಹಕ್ಕಿನ ಕುರಿತಾಗಿ ಮಿಯಾನ್ ಕುಟುಂಬ ಈ ಹಿಂದೆ ಕಾಶ್ಮೀರದ ವಿಭಾಗೀಯ ಆಯುಕ್ತರ ಆದೇಶವನ್ನು ಪ್ರಶ್ನಿಸಿ ಸರಣಿ ಅರ್ಜಿಗಳನ್ನು ಸಲ್ಲಿಸಿತ್ತು.
ಇದನ್ನೂ ಓದಿ: ವಯನಾಡ್ನಲ್ಲಿ ಭೂಕುಸಿತಕ್ಕೆ ಕಾರಣ ಬಹಿರಂಗ: ನಾಲ್ಕು ದೇಶಗಳ ಸಂಶೋಧಕರ ತಂಡದ ವರದಿ ಹೀಗಿದೆ