ಕರ್ನಾಟಕ

karnataka

ETV Bharat / bharat

J&K ವಿಧಾನಸಭೆ ಚುನಾವಣೆ: 2ನೇ ಹಂತದಲ್ಲೂ ಭರ್ಜರಿ ಮತದಾನ: ವೈಷ್ಣೋ ದೇವಿ ಕ್ಷೇತ್ರದಲ್ಲಿ ಶೇ 75ರಷ್ಟು ವೋಟಿಂಗ್​ - voter turnout of 54 per cent

ಜಮ್ಮು ಕಾಶ್ಮೀರ ವಿಧಾನಸಭೆಯ ಎರಡನೇ ಹಂತದ ಮತದಾನ ಪೂರ್ಣಗೊಂಡಿದೆ. 2ನೇ ಹಂತದಲ್ಲಿ ಸಂಜೆ 5 ಗಂಟೆ ವೇಳೆಗೆ ಶೇ 54ರಷ್ಟು ಮತದಾನ ಆಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

j-k-2nd-phase-poll-over-54-percent-voting-till-5-pm
J&K ವಿಧಾನಸಭೆ ಚುನಾವಣೆ: 2ನೇ ಹಂತದಲ್ಲೂ ಭರ್ಜರಿ ಮತದಾನ: ವೈಷ್ಣೋ ದೇವಿ ಕ್ಷೇತ್ರದಲ್ಲಿ ಶೇ 75ರಷ್ಟು ವೋಟಿಂಗ್​ (IANS)

By PTI

Published : Sep 25, 2024, 6:52 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಸಂಜೆ 5 ಗಂಟೆಯವರೆಗೆ ಕಣಿವೆ ರಾಜ್ಯದಲ್ಲಿ ಶೇ 54ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಬಿಗಿ ಭದ್ರತೆಯ ನಡುವೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆಗೆ ಶಾಂತಿಯುತವಾಗಿ ಪೂರ್ಣಗೊಂಡಿದೆ.

ಜಮ್ಮು ಪ್ರದೇಶದ ಶ್ರೀ ಮಾತಾ ವೈಷ್ಣೋ ದೇವಿ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ಮತದಾನವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟಾರೆ ಅತಿ ಹೆಚ್ಚು ಅಂದರೆ ಶೇಕಡಾ 75.29 ರಷ್ಟು ವೋಟಿಂಗ್​ ದಾಖಲಿಸಿದೆ, ಪೂಂಚ್-ಹವೇಲಿ ಶೇ. 72.71ರಷ್ಟು , ಗುಲ್ಬ್‌ಗಢ STಯಲ್ಲಿ ಶೇ 72.19 ಮತ್ತು ಸುರನ್‌ಕೋಟೆ ವ್ಯಾಪ್ತಿಯಲ್ಲಿ ಶೇ 72.18 ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಅಂಕಿ- ಅಂಶಗಳು ಮಾಹಿತಿ ನೀಡಿವೆ.

ಕಾಶ್ಮೀರ ಕಣಿವೆಯ 15 ವಿಧಾನಸಭಾ ಕ್ಷೇತ್ರಗಳಲ್ಲಿ ಖಾನ್‌ಸಾಹಿಬ್‌ನಲ್ಲಿ ಶೇಕಡಾ 67.70 ರಷ್ಟು ಮತದಾನ ದಾಖಲಾಗಿದೆ. ಇನ್ನು ಕಂಗನ್ (ಎಸ್‌ಟಿ) ಶೇ.67.60 ಮತ್ತು ಚ್ರಾರ್-ಇ-ಶರೀಫ್ ಶೇ.66ರಷ್ಟು ಹಕ್ಕು ಚಲಾವಣೆ ಆಗಿರುವ ಮಾಹಿತಿ ದೊರೆತಿದೆ. ಇಲ್ಲಿನ ಹಬ್ಬಕಡಲ್ ಕ್ಷೇತ್ರದಲ್ಲಿ ಸಂಜೆ 5 ಗಂಟೆಯವರೆಗೆ ಅತಿ ಕಡಿಮೆ ಶೇ.15.80ರಷ್ಟು ಮತದಾನವಾಗಿದೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಯಿತು.

ಮೊದಲ ಹಂತದ ಮತದಾನ ಸೆಪ್ಟೆಂಬರ್ 18 ರಂದು ನಡೆದಿದ್ದರೆ ಮೂರನೇ ಮತ್ತು ಕೊನೆಯ ಹಂತದ ಮತದಾನ ಅಕ್ಟೋಬರ್ 1 ರಂದು ನಡೆಯಲಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಇದನ್ನು ಓದಿ :ಮಾರ್ಗದರ್ಶಿತ ಪ್ರವಾಸ ಉತ್ತಮವಲ್ಲ; ಮತದಾನ ವೀಕ್ಷಣೆಗೆ ರಾಜತಾಂತ್ರಿಕ ನಿಯೋಗಕ್ಕೆ ಆಹ್ವಾನದ ಕುರಿತು ಅಬ್ಧುಲ್ಲಾ ಕಿಡಿ - govt for inviting foreign diplomats

ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ: ಮಧ್ಯಾಹ್ನ 1 ಗಂಟೆಗೆ ಶೇ 36.93 ಮತದಾನ - Jammu Kashmir Assembly Election

ABOUT THE AUTHOR

...view details