ಕರ್ನಾಟಕ

karnataka

ETV Bharat / bharat

ಇಂದು ಅಂತಾರಾಷ್ಟ್ರೀಯ ಡೇ ಆಫ್​ ಚಾರಿಟಿ: ಸಹಾನುಭೂತಿಗೆ ಜಾಗತಿಕ ಕರೆ - International Day of Charity - INTERNATIONAL DAY OF CHARITY

ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಅಂತಾರಾಷ್ಟ್ರೀಯ ಚಾರಿಟಿ ದಿನವನ್ನು ಆಚರಿಸಲಾಗುತ್ತದೆ. ಜಾಗೃತಿ ಮೂಡಿಸಲು ಮತ್ತು ಲೋಕೋಪಕಾರಿ ಚಟುವಟಿಕೆಗಳನ್ನು ಉತ್ತೇಜಿಸಲು ವಿಶ್ವಾದ್ಯಂತ ವ್ಯಕ್ತಿಗಳು, ದತ್ತಿ ಸಂಸ್ಥೆಗಳು ಮತ್ತು ಸ್ವಯಂಸೇವಕರನ್ನು ಒಂದುಗೂಡಿಸುವ ಗುರಿಯನ್ನು ಈ ದಿನವು ಹೊಂದಿದೆ. ಈ ದಿನವನ್ನು ಮದರ್ ತೆರೇಸಾ ಅವರ ಮರಣ ವಾರ್ಷಿಕೋತ್ಸವವಾಗಿಯೂ ಸ್ಮರಣೆ ಮಾಡಿಕೊಳ್ಳಲಾಗುತ್ತದೆ. 1979 ರಲ್ಲಿ ಮದರ್​ ತೆರೇಸಾ ನೊಬೆಲ್ ಶಾಂತಿ ಪ್ರಶಸ್ತಿ ಪಡೆದುಕೊಂಡರು.

International Day of Charity
ಇಂದು ಅಂತಾರಾಷ್ಟ್ರೀಯ ಡೇ ಆಫ್​ ಚಾರಿಟಿ: ಸಹಾನುಭೂತಿಗೆ ಜಾಗತಿಕ ಕರೆ (ETV Bharat)

By ETV Bharat Karnataka Team

Published : Sep 5, 2024, 4:18 AM IST

ಹೈದರಾಬಾದ್: ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಅಂತಾರಾಷ್ಟ್ರೀಯ ಚಾರಿಟಿ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ಸ್ಥಳೀಯ, ರಾಷ್ಟ್ರೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತಿಗಳು, ದತ್ತಿ ಸಂಸ್ಥೆಗಳು, ಲೋಕೋಪಕಾರಿ ಗುಂಪುಗಳು ಮತ್ತು ಸ್ವಯಂಸೇವಕರನ್ನು ಒಳಗೊಂಡಂತೆ, ಜಗತ್ತಿನಾದ್ಯಂತ ದತ್ತಿ ಚಟುವಟಿಕೆಗಳಿಗಾಗಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ಇತಿಹಾಸ: 2012 ರಲ್ಲಿ, ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅಧಿಕೃತವಾಗಿ ಸೆಪ್ಟೆಂಬರ್ 5 ಅನ್ನು ಅಂತಾರಾಷ್ಟ್ರೀಯ ಚಾರಿಟಿ ದಿನವೆಂದು ಘೋಷಿಸಲಾಯಿತು. ಮಾನವೀಯ ಬಿಕ್ಕಟ್ಟುಗಳನ್ನು ಪರಿಹರಿಸುವಲ್ಲಿ ಮತ್ತು ಜಾಗತಿಕವಾಗಿ ಸುಸ್ಥಿರ ಅಭಿವೃದ್ಧಿ ಉತ್ತೇಜಿಸುವಲ್ಲಿ ಚಾರಿಟಿಯು ನಿರ್ಣಾಯಕ ಪಾತ್ರವನ್ನು ಗುರುತಿಸುತ್ತದೆ. ಈ ದಿನವು ಮದರ್ ತೆರೇಸಾ ಅವರ ಮರಣ ವಾರ್ಷಿಕೋತ್ಸವವನ್ನು ಸ್ಮರಿಸುತ್ತದೆ. 1979 ರಲ್ಲಿ ತೆರೇಸಾ ಅವರು ನೊಬೆಲ್ ಶಾಂತಿ ಪ್ರಶಸ್ತಿ ಪಡೆದರು. ಬಡತನ ಮತ್ತು ನೋವಿನಿಂದ ಬಳಲುತ್ತಿರುವ ಮನಸುಗಳ ಆರೈಕೆ ಮತ್ತು ಸೇವೆಯನ್ನು ನೀಡಿದ ಅವರ ಪ್ರಯತ್ನಗಳಿಗಾಗಿ ಅವರನ್ನು ಸ್ಮರಿಸಲಾಗುತ್ತದೆ.


ಮದರ್ ತೆರೇಸಾ: 1910 ರಲ್ಲಿ ಆಗ್ನೆಸ್ ಗೊಂಕ್ಷಾ ಬೊಜಾಕ್ಸಿಯಲ್ಲಿ ಜನಿಸಿದ ಮದರ್ ತೆರೇಸಾ, 1928 ರಲ್ಲಿ ಭಾರತಕ್ಕೆ ಆಗಮಿಸಿದರು. ಭಾರತಕ್ಕೆ ಬಂದ ತೆರೇಸಾ ನಿರ್ಗತಿಕರಿಗೆ ಸಹಾಯ ಮಾಡಲು ತನ್ನನ್ನು ತಾವು ಅರ್ಪಿಸಿಕೊಂಡರು. 1948 ರಲ್ಲಿ ಅವರು ಭಾರತೀಯ ಪೌರತ್ವ ಪಡೆದುಕೊಂಡರು. 1950 ರಲ್ಲಿ ಕಲ್ಕತ್ತಾದಲ್ಲಿ (ಈಗ ಕೋಲ್ಕತ್ತಾ) ಮಿಷನರೀಸ್ ಆಫ್ ಚಾರಿಟಿ ಸ್ಥಾಪಿಸಿದರು, ಈ ಸಂಸ್ಥೆ ನಗರದಲ್ಲಿನ ಬಡವರು ಮತ್ತು ನಿರ್ಗತಿಕರ ಏಳಿಗೆ ಹಾಗೂ ಬದುಕು ಕಲ್ಪಿಸುವ ಕೆಲಸಕ್ಕಾಗಿ ಜಾಗತಿಕ ಮನ್ನಣೆ ಗಳಿಸಿಕೊಂಡಿತು.

45 ವರ್ಷಗಳಿಗೂ ಹೆಚ್ಚು ಕಾಲ, ಬಡವರು ಮತ್ತು ನಿರಾಶ್ರಿತರಿಗೆ ಧರ್ಮಶಾಲೆಗಳು ಮತ್ತು ಮನೆಗಳನ್ನು ಸ್ಥಾಪಿಸುವುದು ಸೇರಿದಂತೆ ಭಾರತ ಮತ್ತು ಇತರ ದೇಶಗಳಲ್ಲಿ ಮಿಷನರೀಸ್ ಆಫ್ ಚಾರಿಟಿಯ ವಿಸ್ತರಣೆ ಮಾಡಲಾಯಿತು, ಬಡವರು, ರೋಗಿಗಳು, ಅನಾಥರು ಮತ್ತು ಸಾವಿನ ಅಂಚಿನಲ್ಲಿರುವವರ ಸೇವೆ ಮಾಡುವ ಮೂಲಕ ಲಕ್ಷಾಂತರ ಜನರಿಗೆ ಆಶ್ರಯ ನೀಡಲಾಯಿತು.

ಮದರ್ ತೆರೇಸಾ ಅವರ ಸೇವೆಗಾಗಿ ಅವರನ್ನು ವ್ಯಾಪಕವಾಗಿ ಪ್ರಶಂಸಿಸಲಾಗಿದೆ ಮತ್ತು ಅವರು ನೊಬೆಲ್ ಶಾಂತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮದರ್ ತೆರೇಸಾ ಅವರು ಸೆಪ್ಟೆಂಬರ್ 5, 1997 ರಂದು ತಮ್ಮ 87 ನೇ ವಯಸ್ಸಿನಲ್ಲಿ ನಿಧನರಾದರು.

ಅಂತಾರಾಷ್ಟ್ರೀಯ ದತ್ತಿ ದಿನದ ಉದ್ದೇಶಗಳು:

  • ಅಂತಾರಾಷ್ಟ್ರೀಯ ಚಾರಿಟಿ ದಿನದ UN ಸ್ಥಾಪನೆಯು ಧನಾತ್ಮಕ ಬದಲಾವಣೆ ತರುವಲ್ಲಿ ದಾನದ ಶಕ್ತಿಯನ್ನು ಪರಿಚಯಿಸುತ್ತದೆ
  • ಅಂತಾರಾಷ್ಟ್ರೀಯ ಚಾರಿಟಿ ದಿನವು ಮಾನವ ಸಂಕಟದ ಮುಖಾಂತರ ಒಗ್ಗಟ್ಟು ಮತ್ತು ಸಹಾನುಭೂತಿಯಿಂದ ಕಾರ್ಯನಿರ್ವಹಿಸಲು ಜಗತ್ತಿಗೆ ಕರೆ ನೀಡುತ್ತದೆ
  • ಇದು ಜನರನ್ನು ಸಜ್ಜುಗೊಳಿಸಲು ಮತ್ತು ಸಮಾಜಕ್ಕೆ ಸ್ಥಿತಿಸ್ಥಾಪಕತ್ವ ಮತ್ತು ಒಳಗೊಳ್ಳುವಿಕೆಯನ್ನು ತರಲು ಸ್ವಯಂಸೇವಕ ಮತ್ತು ಲೋಕೋಪಕಾರಿ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ
  • ಅಂತಾರಾಷ್ಟ್ರೀಯ ದಿನಗಳು ಗಮನಾರ್ಹ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.
  • ಪ್ರತಿಯೊಬ್ಬರಿಗೂ ಜಗತ್ತನ್ನು ಸುಧಾರಿಸಲು ಪ್ರತಿಯೊಬ್ಬರೂ ಸಾಧ್ಯವಿರುವ ರೀತಿಯಲ್ಲಿ ಕೊಡುಗೆ ನೀಡಬೇಕು. ಇದು ನಿಮ್ಮ ಸಮಯ ಅಥವಾ ಪ್ರತಿಭೆಯನ್ನು ಉತ್ತಮ ಉದ್ದೇಶಕ್ಕಾಗಿ ಮೀಸಲಿಡುವ ಮೂಲಕ ಸಮಾಜ ಸೇವೆಗೆ ಮುಡಿಪಾಗಿಡಬಹುದು. ಅಥವಾ ನಿಮ್ಮ ದಿನಚರಿಯಲ್ಲಿ ನೀವು ಎದುರಿಸುತ್ತಿರುವ ಪರಿಚಯವಿಲ್ಲದ ವ್ಯಕ್ತಿಗಳಿಗೆ ದಯೆ ತೋರಿಸುವಷ್ಟು ನೆರವು ನೀಡುವ ವಿಶಾಲ ಹೃದಯಿಗಳಾಬಹುದು. ಆದಾಗ್ಯೂ, ನೀವು ಚಾರಿಟಿಗೆ ಅಗತ್ಯ ನೆರವು ನೀಡುವ ಮೂಲಕ ಬದಲಾವಣೆ ತರಲು ಮುಂದಾಗಬಹುದು.
  • ದೇಣಿಗೆ, ಸ್ವಯಂಸೇವಕ, ನಿಧಿಸಂಗ್ರಹ ಮತ್ತು ಸಮುದಾಯ ಸೇವೆ ಸೇರಿದಂತೆ ಚಾರಿಟಿ ಹಲವು ರೂಪಗಳಲ್ಲಿ ಸಮಾಜಸೇವೆಗೆ ತೆರದುಕೊಳ್ಳುತ್ತದೆ. ವ್ಯಕ್ತಿಗಳಿಂದ ಹಿಡಿದು ದೊಡ್ಡ ಕಂಪನಿಗಳು ಮತ್ತು ಸಣ್ಣ ಸ್ಥಳೀಯ ವ್ಯವಹಾರಗಳವರೆಗೆ ಯಾರಾದರೂ ತೊಡಗಿಸಿಕೊಳ್ಳಬಹುದು

ಜನರು ದಾನ ಮಾಡಲು ಹಲವು ಕಾರಣಗಳಿವೆ, ಅವುಗಳೆಂದರೆ:

  • ಇತರರಿಗೆ ಸಹಾಯ ಮಾಡುವುದು:ದಾನವು ದುಃಖವನ್ನು ನಿವಾರಿಸಲು, ಬಲವಾದ ಸಮುದಾಯಗಳನ್ನು ನಿರ್ಮಿಸಲು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವ ಗುಣ ಹೊಂದಿದೆ.
  • ಯೋಗಕ್ಷೇಮದ ಸುಧಾರಣೆ:ಇತರರಿಗೆ ಸಹಾಯ ಮಾಡುವ ಜನರು ಸಂತೋಷವಾಗಿರುತ್ತಾರೆ ಮತ್ತು ದಾನ ನೀಡುವಿಕೆಯು ಮತ್ತೊಬ್ಬರ ಆರೋಗ್ಯ ಮತ್ತು ಯೋಗಕ್ಷೇಮದಿಂದ ನೋಡಿಕೊಳ್ಳಲು ಪ್ರಯೋಜನಕಾರಿಯಾಗಿದೆ
  • ತೆರಿಗೆ ವಿನಾಯಿತಿಗಳು:ಲಾಭೋದ್ದೇಶವಿಲ್ಲದ ಅಥವಾ ಇತರ ದತ್ತಿ ಸಂಸ್ಥೆಗಳಿಗೆ ದೇಣಿಗೆಗಳು ತೆರಿಗೆ -ವಿನಾಯತಿಗೆ ಒಳಗಾಗುತ್ತವೆ, ಇದು ನಿಮ್ಮ ತೆರಿಗೆ ಬಿಲ್ ಅನ್ನು ಕಡಿಮೆ ಮಾಡಬಹುದು
  • ವೈಯಕ್ತಿಕ ಬೆಳವಣಿಗೆ: ಚಾರಿಟಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಸಹಾನುಭೂತಿಯನ್ನು ಬೆಳೆಸುತ್ತದೆ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
  • ಹಣ ನಿರ್ವಹಣೆ:ನಿಯಮಿತ ದೇಣಿಗೆಯನ್ನು ಸ್ಥಾಪಿಸುವುದು ನಿಮ್ಮ ವೈಯಕ್ತಿಕ ಹಣಕಾಸಿನ ಬಗ್ಗೆ ಹೆಚ್ಚು ಗಮನ ಹರಿಸಲು ಇದು ನಿಮ್ಮನ್ನು ಪ್ರೋತ್ಸಾಹಿಸುತ್ತದೆ.
  • ಜಾಗೃತಿ ಮೂಡಿಸುವುದು: ದತ್ತಿ ಸಂಸ್ಥೆಗಳು ಸಮಾಜದ ಸಮಸ್ಯೆಗಳ ಅರಿವನ್ನು ಮೂಡಿಸಬಹುದು ಮತ್ತು ಮಾಹಿತಿ ನೀಡಬಹುದು
  • ರೋಲ್ ಮಾಡೆಲ್ ಆಗಲು ಸಹಾಯ: ನಿಮ್ಮ ನಡವಳಿಕೆಗಳು ಇತರರ ಗಮನ ಸೆಳೆಯುವಂತೆ ಪ್ರೇರೇಪಿಸಬಹುದು.

ಅಂತಾರಾಷ್ಟ್ರೀಯ ದತ್ತಿ ದಿನವನ್ನು ಆಚರಿಸುವುದು ಹೇಗೆ?:

ದಾನ:ಈ ದಿನದ ಮೊದಲ ಹೆಜ್ಜೆಯೇ ದಾನ. ನಿಮ್ಮ ಮೌಲ್ಯಗಳೊಂದಿಗೆ ಹೊಂದಿಕೊಳ್ಳುವ ಚಾರಿಟಿಗೆ ಕೊಡುಗೆ ನೀಡಿ. ನೀವು ಹಣವನ್ನು ದಾನ ಮಾಡಬಹುದು ಅಥವಾ ಅಗತ್ಯವಿರುವ ಜನರಿಗೆ ದಾನ ಮಾಡಲು ಬಟ್ಟೆ ಮತ್ತು ಪುಸ್ತಕಗಳಂತಹ ವಸ್ತುಗಳನ್ನು ಸಂಗ್ರಹಿಸಬಹುದು.

ಸ್ವಯಂಸೇವಕ:ನೀವು ಸ್ವಯಂಸೇವಕ ಚಟುವಟಿಕೆಗಳಲ್ಲಿ ಸಹ ತೊಡಗಿಸಿಕೊಳ್ಳಬಹುದು

ಜಾಗೃತಿ ಮೂಡಿಸಿ:ಬಡತನವನ್ನು ಕೊನೆಗೊಳಿಸುವ ಮಹತ್ವದ ಕುರಿತು ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮ ಮತ್ತು ಇತರ ಚಾನಲ್‌ಗಳನ್ನು ಬಳಸಿಕೊಳ್ಳಿ.

ದೇಣಿಗೆ ಸಂಗ್ರಹ ಕಾರ್ಯಕ್ರಮ ಆಯೋಜಿಸುವ ಮೂಲಕ ಅಗತ್ಯ ಇರುವವರಿಗೆ ನೆರವು ನೀಡಬಹುದು

ಇದನ್ನು ಓದಿ:' ಪಕ್ಷಾಂತರಿ ಶಾಸಕರಿಗೆ ಪಿಂಚಣಿ ಇಲ್ಲ': ಹಿಮಾಚಲ ವಿಧಾನಸಭೆಯಲ್ಲಿ ಮಹತ್ವದ ಮಸೂದೆ ಪಾಸ್​ - NO PENSION FOR MLAS

ABOUT THE AUTHOR

...view details