ಬಿಕಾನೇರ್ (ರಾಜಸ್ಥಾನ):ಇಲ್ಲಿನ ಪ್ರಖ್ಯಾತ ಅಂತಾರಾಷ್ಟ್ರೀಯ ಒಂಟೆ ಹಬ್ಬ ಶುಕ್ರವಾರ ಪರಂಪರೆಯ ನಡಿಗೆಯೊಂದಿಗೆ ಆರಂಭವಾಗಿದೆ. ಲಕ್ಷ್ಮಿನಾಥ ದೇಗುಲದಿಂದ ರಾಮ್ಪುರಿ ಹವೇಲಿ ವರೆಗೆ ಬಿಕಾನೇರ್ ವಾಸ್ತುಶಿಲ್ಪ, ಸಂಸ್ಕೃತಿ ಹಾಗೂ ಕಲೆಗಳನ್ನು ಪ್ರದರ್ಶಿಸುವ ಪರಂಪರೆಯ ನಡಿಗೆಯನ್ನ ಆಯೋಜಿಸಲಾಗಿತ್ತು. ಈ ನಡಿಗೆಯಲ್ಲಿ ದೇಶ - ವಿದೇಶಗಳ ಪ್ರವಾಸಿಗರು ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಆಡಳಿತಾಧಿಕಾರಿಗಳ ಉಪಸ್ಥಿತಿ: ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಮ್ರತಾ ವೃಷ್ಣಿ, ಪೊಲೀಸ್ ವರಿಷ್ಠಾಧಿಕಾರಿ ಕವೇಂದ್ರ ಸಿಂಗ್ ಸಾಗರ್, ಪಾಲಿಕೆ ಆಯುಕ್ತ ಮಯಾಂಕ್ ಮನೀಶ್, ಬಿಡಿಎ ಕಾರ್ಯದರ್ಶಿ ಅಪರ್ಣಾ ಗುಪ್ತಾ, ಸಿಇಒ ಸೋಯಿನ್‌ಲಾಲ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅನಿಲ್ ರಾಥೋಡ್, ಸಹಾಯಕ ನಿರ್ದೇಶಕ ಕಿಶನ್ ಕುಮಾರ್, ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಪವನ್ ಶರ್ಮಾ ಸೇರಿದಂತೆ ಅನೇಕರು ಭಾಗಿಯಾದರು.
ಈ ನಡುವೆಯಲ್ಲಿ ಭಾಗಿಯಾದ ಜಿಲ್ಲಾಧಿಕಾರಿ ನಮ್ರತಾ ವೃಷ್ಟಿ, ಐತಿಹಾಸಿಕ ಬಿಕಾನೇರ್ ಪರಂಪರೆ ನಮ್ಮ ಸಂಸ್ಕೃತಿ ಹಂಚಿಕೊಳ್ಳುತ್ತದೆ. ಅದರ ಬಣ್ಣವೂ ಜಗತ್ತಿನ ಪ್ರವಾಸೋದ್ಯಮ ಭೂಪಟದಲ್ಲಿ ಹರಡಿದೆ. ಈ ಉತ್ಸವಕ್ಕೆ ಆಗಮಿಸಿರುವ ಎಲ್ಲ ಸ್ಥಳೀಯ ಭಾಗಿದಾರರು ಮತ್ತು ಪ್ರವಾಸಿಗರಿಗೆ ಸ್ವಾಗತ ಕೋರುತ್ತೇವೆ ಎಂದ ಅವರು ಈ ಸಂಸ್ಕೃತಿಯಲ್ಲಿ ಭಾಗಿಯಾಗುವ ಮೂಲಕ ಇದನ್ನು ಆಹ್ಲಾದಿಸುವಂತೆ ಕರೆ ನೀಡಿದರು.
ಗಮನ ಸೆಳೆದ ದೊಡ್ಡ ದೊಡ್ಡ ಪೇಟಗಳು: ಈ ನಡಿಗೆಯಲ್ಲಿ ಜಾನಪದ ಕಲಾವಿದ ಪವನ್ ವ್ಯಾಸ್ ಅವರು 2 ಸಾವಿರದ 25 ಅಡಿಯ ದೊಡ್ಡ ಪೇಟವನ್ನು ಧರಿಸಿ ದಾಖಲೆ ನಿರ್ಮಿಸಿದರು. ಈ ಕಾರ್ಯಕ್ರಮದಲ್ಲಿ ನಗಡಾ, ಮಶ್ಕ್, ಚಂಗ್ ಮತ್ತು ಕೊಳಲುಗಳ ವಾದನದ ಜೊತೆಗೆ ಭಜನೆಗಳು ಕೇಳಿ ಬಂದವು. ಮಥೆರನ್ ಬಂದೇಜ್, ಕುಂಬಾರಿಕೆ, ಗೋಲ್ಡನ್ ಪೆನ್ ಕಟ್ಟುವಿಕೆ ಕೌಶಲ್ಯಗಳ ಪ್ರದರ್ಶನ ಕಂಡು ಬಂತು. ಜಾನಪದ ಕಲಾವಿದರು ತಮ್ಮ ಒಂಟೆಗಳನ್ನು ಅದ್ಬುತವಾಗಿ ಅಲಂಕರಿಸಿರುವುದು ಎಲ್ಲರ ಗಮನ ಸೆಳೆಯಿತು. ಬಳೆ, ಶೂ ಮತ್ತು ಚಕ್ರದ ಮೇಲೆ ಮಣ್ಣಿನ ಮಡಕೆ ತಯಾರಿಸುವ ಕಲೆ ಎಲ್ಲರ ಮೆಚ್ಚುಗೆ ಪಡೆಯಿತು. ಐತಿಹಾಸಿಕ ರಮ್ಮತ್ ನಗರದಲ್ಲಿ ಐತಿಹಾಸಿಕ ಸಬ್ಜಿ ಬಜಾರ್ (ತರಕಾರಿ ಮಾರುಕಟ್ಟೆ) ಚೌಕ ಎಲ್ಲರ ಆಕರ್ಷಣೆಯ ಕೇಂದ್ರವಾಯಿತು.