ಕರ್ನಾಟಕ

karnataka

ETV Bharat / bharat

ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ INS​​​​​ ಅರಿಘಾಟ್​: ಈ ಜಲಾಂತರ್ಗಾಮಿಯ ವಿಶೇಷತೆ ಏನು ಗೊತ್ತೆ? - INS Arighat submarine - INS ARIGHAT SUBMARINE

ಭಾರತದ ಎರಡನೇ ಪರಮಾಣು ಬ್ಯಾಲಿಸ್ಟಿಕ್​ ಕ್ಷಿಪಣಿ ಜಲಾಂತರ್ಗಾಮಿ ಐಎನ್​ಎಸ್​ ಅರಿಘಾಟ್​​ ಶೀಘ್ರದಲ್ಲಿಯೇ ನೌಕಾ ಸೇನೆಯಲ್ಲಿ ಕಾರ್ಯಾಚರಣೆಗೆ ಇಳಿಯಲು ಸಿದ್ಧವಾಗಿದೆ.

Indian Navy is about to reach another milestone, PM will Dedicate INS Arighat  to nation Very soon
ಐಎನ್​ಎಸ್​ ಅರಿಘಾಟ್​​ (ಈಟಿವಿ ಭಾರತ್​​)

By ETV Bharat Karnataka Team

Published : Aug 27, 2024, 1:16 PM IST

ಹೈದರಾಬಾದ್​: ಭಾರತೀಯ ನೌಕಾ ಸೇನೆ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಭಾರತೀಯ ನೌಕಾ ಸೇನೆ ಮತ್ತೊಂದು ಪರಮಾಣು ಜಲಾಂತರ್ಗಾಮಿ (ಸಬ್​ಮರಿನ್​) ಶೀಘ್ರದಲ್ಲೇ ನೌಕಾಸೇನೆಯಲ್ಲಿ ಕಾರ್ಯಾಚರಣೆಗೆ ಇಳಿಯಲಿದೆ. ಅದುವೇ ಐಎನ್​ಎಸ್​ ಅರಿಘಾಟ್​​. ಭಾರತದ ಎರಡನೇ ಪರಮಾಣು ಬ್ಯಾಲಿಸ್ಟಿಕ್​ ಕ್ಷಿಪಣಿ ಜಲಾಂತರ್ಗಾಮಿ ಇದಾಗಿದೆ. ಮೂಲಗಳ ಪ್ರಕಾರ, ಐಎನ್​ಎಸ್​ ಅರಿಘಾಟ್​ ತನ್ನ ಪ್ರಯೋಗವನ್ನು ಯಶಸ್ವಿಯಾಗಿ ಮುಗಿಸಿದ್ದು, ಇನ್ನು ಕೆಲವೇ ದಿನದಲ್ಲಿ ನೌಕಾ ಸೇನೆಯಲ್ಲಿ ಕಾರ್ಯಾಚರಣೆ ಭಾಗವಾಗುವ ಸಾಧ್ಯತೆ ಇದೆ. ಈ ಸಬ್​ಮರಿನ್​ ಭಾರತದ ಕಾರ್ಯತಂತ್ರದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ.

ಐಎನ್​ಎಸ್​ ಅರಿಘಾಟ್​ ವಿಶೇಷತೆ:ಐಎನ್​ಎಸ್​ ಅರಿಘಾಟ್​ ಮೊದಲ ಪೂರ್ಣ ಪ್ರಮಾಣದ ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್​ ಕ್ಷಿಪಣಿಯ ಜಲಾಂತರ್ಗಾಮಿ ಆಗಿದೆ. ಐಎನ್​ಎಸ್​ ಭಾರತದ ಎರಡನೇ ಸಬ್​ ಮರಿನ್ ಇದಾಗಿದೆ. ಮೊದಲನೇ ಸಬ್​ ಮರಿನ್​ ಐಎನ್​ಎಸ್​ ಅರಿಹಂತ್​ ಇದಾಗಿದೆ. 2011ರ ಡಿಸೆಂಬರ್​ನಲ್ಲಿ ಅರಿಹಂತ್​​ ಅನ್ನು ವಿಶಾಖಪಟ್ಟಣಂನ ನೌಕಾ ಡಾಕ್​ಯಾರ್ಡ್​ನಲ್ಲಿನ ನೌಕಾ ನಿರ್ಮಾಣ ಕೇಂದ್ರದಲ್ಲಿ (ಎಸ್​ಬಿಸಿ) ತಯಾರು ಮಾಡಲಾಗುತ್ತಿದೆ. ಮೊದಲ ಹಂತದ ನಿರ್ಮಾಣದ ಬಳಿಕ ನವೆಂಬರ್​ 19, 2017ರಂದು ಇದನ್ನು ಉದ್ಘಾಟಿಸಲಾಯಿತು.

ಲೋಕಸಭಾ ಚುನಾವಣೆ ಬಳಿಕ ರಕ್ಷಣಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜನಾಥ್​ ಸಿಂಗ್​ ವಿಶಾಖ ನೌಕಾ ನೆಲೆಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರು ನೌಕಾ ಅಧಿಕಾರಿಗಳಿಂದ ಐಎನ್​ಎಸ್​ ಅರಿಘಾಟ್​ ಕುರಿತು ಮಾಹಿತಿ ಪಡೆದುಕೊಂಡಿದ್ದರು. ವರದಿಗಳ ಪ್ರಕಾರ, ಪ್ರಧಾನಿ ಮೋದಿ ಅವರು ಈ ತಿಂಗಳ ಅಂತ್ಯ ಅಥವಾ ಸೆಪ್ಟೆಂಬರ್​ನಲ್ಲಿ ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದ್ದು, ಆಗಸ್ಟ್​ 29ರಂದು ರಾಜನಾಥ್​ ಸಿಂಗ್​ ವಿಶಾಖಪಟ್ಟಣಂಗೆ ಭೇಟಿ ನೀಡಲಿದ್ದಾರೆ.

ಐಎನ್​ಎಸ್​ ಅರಿಘಾಟ್​ ವೈಶಿಷ್ಟ್ಯತೆ

  • ಉದ್ದ:111.6 ಮಿಟರ್​
  • ಅಗಲ: 11 ಮೀಟರ್​
  • ಆಳ (ಡ್ರಾಫ್ಟ್​​): 9.5 ಮೀಟರ್​​
  • ವೇಗ: ಪ್ರತಿಗಂಟೆಗೆ 12 - 15 ನಾಟಿಕಲ್​ ಮೈಲ್​​ (ಗಂಟೆಗೆ 22 ರಿಂದ 28 ಕಿ.ಮೀ )
  • ಹೆಚ್ಚುವರಿ ಸೌಲಭ್ಯ: ಸೋನಾರ್​ ಕಮ್ಯೂನಿಕೇಷನ್​ ವ್ಯವಸ್ಥೆ, ಸಮುದ್ರದಲ್ಲಿ ಸಾಗುವ ಕ್ಷಿಪಣಿ, ಆ್ಯಂಟಿ ರೇಡಿಯೇಷನ್​ ಸೆಕ್ಯೂರಿಟಿ ವ್ಯವಸ್ಥೆ ಹೊಂದಿದೆ.

ಇದನ್ನೂ ಓದಿ: 6 ಸುಧಾರಿತ ಜಲಾಂತರ್ಗಾಮಿ ನಿರ್ಮಾಣಕ್ಕೆ ಎಂಡಿಎಲ್​ಗೆ ಅನುಮತಿ ನೀಡಿದ ಭಾರತೀಯ ನೌಕಾ ಸೇನೆ

ABOUT THE AUTHOR

...view details