ಕರ್ನಾಟಕ

karnataka

ETV Bharat / bharat

ಭಾರತದ ರಕ್ಷಣಾ ವಲಯಕ್ಕೆ ಮುಂದಿನ 10 ವರ್ಷಗಳಲ್ಲಿ 138 ಬಿಲಿಯನ್ ಡಾಲರ್ ಹೂಡಿಕೆಗೆ ಅವಕಾಶ: ಇಂಡಿಯಾ ಡಿಫೆನ್ಸ್ ವರದಿ - INDIA DEFENCE REPORT - INDIA DEFENCE REPORT

ಭಾರತದ ರಕ್ಷಣಾ ವಲಯವು 2024 - 32ರ ಹಣಕಾಸು ವರ್ಷದಲ್ಲಿ 138 ಬಿಲಿಯನ್ ಡಾಲರ್ ಲಾಭದಾಯಕ ಆರ್ಡರ್ ಅವಕಾಶವನ್ನು ಹೊಂದಿದೆ ಎಂದು ನೊಮುರಾದ 'ಇಂಡಿಯಾ ಡಿಫೆನ್ಸ್' ಎಂಬ ವರದಿ ತಿಳಿಸಿದೆ.

ಇಂಡಿಯಾ ಡಿಫೆನ್ಸ್ ವರದಿ
ಇಂಡಿಯಾ ಡಿಫೆನ್ಸ್ ವರದಿ (ಕೃಪೆ: ANI)

By ETV Bharat Karnataka Team

Published : May 11, 2024, 4:15 PM IST

Updated : May 11, 2024, 4:27 PM IST

ನವದೆಹಲಿ: ರಕ್ಷಣಾ ಉಪಕರಣಗಳು, ತಂತ್ರಜ್ಞಾನಗಳು ಮತ್ತು ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಮಧ್ಯೆ ಭಾರತದ ರಕ್ಷಣಾ ವಲಯವು 2024 - 32ರ ಹಣಕಾಸು ವರ್ಷದಲ್ಲಿ 138 ಬಿಲಿಯನ್ ಡಾಲರ್ ಲಾಭದಾಯಕ ಆರ್ಡರ್​ ಪಡೆದುಕೊಳ್ಳುವ ಅವಕಾಶಗಳನ್ನು ಹೊಂದಿದೆ. ಇದು ರಕ್ಷಣಾ ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿರುವ ಕಂಪನಿಗಳಿಗೆ ಅನುಕೂಲಕರವಾಗಲಿದೆ ಎಂದು ನೊಮುರಾದ 'ಇಂಡಿಯಾ ಡಿಫೆನ್ಸ್' ಎಂಬ ವರದಿ ತಿಳಿಸಿದೆ.

ಭಾರತದ ರಕ್ಷಣಾ ಬಂಡವಾಳ ವೆಚ್ಚವು ಹಣಕಾಸು ವರ್ಷ 30ರ ವೇಳೆಗೆ ಒಟ್ಟು ಬಜೆಟ್​ನ ಶೇಕಡಾ 37 ಕ್ಕೆ ಏರಲು ಸಜ್ಜಾಗಿದೆ ಎಂದು ವರದಿ ಹೇಳಿದೆ. ಇದು ಹಣಕಾಸು ವರ್ಷ 25 ರಲ್ಲಿ ಯೋಜಿತ ಶೇಕಡಾ 29 ರಿಂದ ಗಣನೀಯ ಹೆಚ್ಚಳವನ್ನು ಸೂಚಿಸುತ್ತದೆ. 2024-30ರ ಹಣಕಾಸು ವರ್ಷದಲ್ಲಿ 15.5 ಟ್ರಿಲಿಯನ್ ರೂ.ಗಳ ಸಂಚಿತ ಬಂಡವಾಳ ಹೂಡಿಕೆಗೆ ಸಮನಾಗಿದೆ. ಇದು ಹಿಂದಿನ ಅವಧಿಗಳಿಗೆ ಹೋಲಿಸಿದರೆ ಗಣನೀಯ ಬೆಳವಣಿಗೆಯನ್ನು ಸೂಚಿಸುತ್ತದೆ.

ದೇಶೀಯ ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಉತ್ತೇಜಿಸಲು ಅನುಕೂಲಕರ ನೀತಿ ಸುಧಾರಣೆಗಳು, ಪ್ರೋತ್ಸಾಹಕಗಳು ಮತ್ತು ಉಪಕ್ರಮಗಳ ಮೂಲಕ ಭಾರತ ಸರ್ಕಾರ ರಕ್ಷಣಾ ವಲಯವನ್ನು ಸಕ್ರಿಯವಾಗಿ ಬೆಂಬಲಿಸುತ್ತಿದೆ. ರಕ್ಷಣಾ ಬಂಡವಾಳ ವೆಚ್ಚದ ಪಾಲು ಹಣಕಾಸು ವರ್ಷ 30 (FY24RE: 26%) ರಲ್ಲಿ ಒಟ್ಟು ರಕ್ಷಣಾ ಬಜೆಟ್​ನ ಶೇ 37ರಷ್ಟು ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು 2024-30ರ ಹಣಕಾಸು ವರ್ಷದಲ್ಲಿ 186 ಬಿಲಿಯನ್ ಡಾಲರ್ ಸಂಚಿತ ಬಂಡವಾಳ ವೆಚ್ಚವನ್ನು ಸೂಚಿಸುತ್ತದೆ (ಸಂಚಿತ ಹಣಕಾಸು ವರ್ಷ 18-24 ಎಫ್: ಯುಎಸ್​ಡಿ 93 ಬಿಲಿಯನ್) ಎಂದು ವರದಿ ತಿಳಿಸಿದೆ.

ಹೆಚ್ಚುತ್ತಿರುವ ರಕ್ಷಣಾ ಬಜೆಟ್, ಆಧುನೀಕರಣ ಪ್ರಯತ್ನಗಳು ಮತ್ತು "ಮೇಕ್ ಇನ್ ಇಂಡಿಯಾ" ನಂತಹ ಉಪಕ್ರಮಗಳ ಅಡಿ ದೇಶೀಯ ಉತ್ಪಾದನೆಯ ಮೇಲೆ ಸರ್ಕಾರದ ಗಮನ ಈ ಬೆಳವಣಿಗೆಗೆ ಕಾರಣವಾಗಿದೆ. ವರದಿ ಪ್ರಕಾರ, ರಕ್ಷಣಾ ವಲಯವು ವಿವಿಧ ವಿಭಾಗಗಳಲ್ಲಿ ಲಾಭದಾಯಕ ಅವಕಾಶಗಳನ್ನು ಒದಗಿಸುತ್ತದೆ. ವಿಮಾನ, ಹೆಲಿಕಾಪ್ಟರ್‌ಗಳು, ಮಾನವರಹಿತ ವೈಮಾನಿಕ ವಾಹನಗಳು (UAV), ಏವಿಯಾನಿಕ್ಸ್ ಮತ್ತು ಸಂಬಂಧಿತ ಇತರ ತಯಾರಿಕೆಯಲ್ಲಿ ಹೂಡಿಕೆಯನ್ನು ಒಳಗೊಂಡಿರುವ ರಕ್ಷಣಾ ಏರೋಸ್ಪೇಸ್ ವಲಯವು ಬಿಲಿಯನ್ ಡಾಲರ್ ಹೊಂದಿದೆ. ನೌಕಾ ಹಡಗುಗಳು, ಜಲಾಂತರ್ಗಾಮಿ ನೌಕೆಗಳು, ಗಸ್ತು ದೋಣಿಗಳು ಮತ್ತು ಕಡಲ ಭದ್ರತೆ ಹೆಚ್ಚಿಸಲು ಬೆಂಬಲ ಹಡಗುಗಳಿಗೆ USD 38 ಬಿಲಿಯನ್ ಸಾಮರ್ಥ್ಯವನ್ನು ಹೊಂದಿರುವ ರಕ್ಷಣಾ ಹಡಗು ನಿರ್ಮಾಣವು ಮತ್ತೊಂದು ಮಹತ್ವದ ವಲಯವಾಗಿದೆ.

ಕ್ಷಿಪಣಿಗಳು / ಫಿರಂಗಿ / ಬಂದೂಕು ತಯಾರಿಕೆಯಲ್ಲಿನ ಹೂಡಿಕೆಗಳು 21 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಇದು ತನ್ನ ಫಿರಂಗಿ ಮತ್ತು ಕ್ಷಿಪಣಿ ಸಾಮರ್ಥ್ಯಗಳನ್ನು ಹೆಚ್ಚಿಸುವ ಭಾರತದ ಪ್ರಯತ್ನಗಳಿಗೆ ಅನುಗುಣವಾಗಿದೆ. ವರದಿಯು, ರಕ್ಷಣಾ ರಫ್ತುಗಳಲ್ಲಿ ಗಣನೀಯ ಬೆಳವಣಿಗೆಯನ್ನು ತೋರಿಸುತ್ತದೆ. ಇದು ಒಟ್ಟು 29 ಬಿಲಿಯನ್ ಯುಎಸ್​ಡಿಗೆ ತಲುಪುವ ನಿರೀಕ್ಷೆಯಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ (ಎಚ್‌ಎಎಲ್) ಷೇರುಗಳು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ತಯಾರಿಯಲ್ಲಿ ಶೇಕಡಾ 28 ರಷ್ಟು ಸಾಮರ್ಥ್ಯ ಹೊಂದಿದೆ ಎಂದು ವರದಿ ಹೇಳುತ್ತದೆ.

ಕಳೆದ ಒಂದು ವರ್ಷದಲ್ಲಿ ಎಚ್ಎಎಲ್ ಷೇರುಗಳು ಶೇಕಡಾ 156 ರಷ್ಟು ಏರಿಕೆಯಾಗಿ 3877 ರೂ.ಗೆ ತಲುಪಿದೆ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಷೇರುಗಳು ಒಂದು ವರ್ಷದಲ್ಲಿ ಶೇಕಡಾ 109 ರಷ್ಟು ಏರಿಕೆಯಾಗಿ 227 ರೂ.ಗೆ ತಲುಪಿದೆ. ರಫ್ತು, ತಂತ್ರಜ್ಞಾನ ವರ್ಗಾವಣೆ ಮತ್ತು ಸಹಯೋಗದ ಮೂಲಕ ತನ್ನ ಜಾಗತಿಕ ಅಸ್ತಿತ್ವವನ್ನು ವಿಸ್ತರಿಸಲು ಭಾರತದ ರಕ್ಷಣಾ ಉದ್ಯಮದ ಗಮನ ಹೆಚ್ಚುತ್ತಿರುವುದನ್ನು ವರದಿ ಒತ್ತಿಹೇಳುತ್ತದೆ.

ರಕ್ಷಣಾ ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿರುವ ಕಂಪನಿಗಳು ರಫ್ತು ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ತಮ್ಮ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ಸಜ್ಜಾಗಿವೆ.

ಇದನ್ನೂ ಓದಿ:ಛತ್ತೀಸಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ: 12 ನಕ್ಸಲೀಯರ ಹತ್ಯೆ ಮಾಡಿದ ಭದ್ರತಾ ಪಡೆಗಳು - ENCOUNTER MANY NAXALITE KILLED

Last Updated : May 11, 2024, 4:27 PM IST

ABOUT THE AUTHOR

...view details