ನಿಜಾಮಾಬಾದ್ (ತೆಲಂಗಾಣ) : ಸುಲಭ ಹಣ ಗಳಿಕೆಯ ಆಮಿಷ ನೀಡುತ್ತಿರುವ ಟೆಲಿಗ್ರಾಮ್ನಂತರ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಯುವಕರನ್ನು ಸೈಬರ್ ಕ್ರೈಮ್‌ಗಳ ಕರಾಳ ಜಗತ್ತಿಗೆ ಸೆಳೆಯುತ್ತಿವೆ. ಮನೆಯಿಂದ ಕೆಲಸ ಮಾಡುವ ಅವಕಾಶಗಳ ನೆಪದಲ್ಲಿ ವಂಚಕರು ಯುವಕರ ಅಮಾಯಕತೆಯನ್ನ ಬಳಸಿಕೊಳ್ಳುತ್ತಿದ್ದಾರೆ. ಯುವಕರಿಗೆ ಈ ಬಗ್ಗೆ ಅರಿವಿಲ್ಲದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದಾರೆ. ತ್ವರಿತ ಹಣ ಗಳಿಕೆಯ ಈ ಸುಳ್ಳು ಭರವಸೆ ಸಂತ್ರಸ್ತರನ್ನು ಮೋಸ ಮತ್ತು ಸಂಕಷ್ಟಕ್ಕೆ ಸಿಲುಕಿಸುತ್ತಿದೆ.
ಸೈಬರ್ ಕ್ರೈಮ್ ಸ್ಕೀಮ್‌ನಲ್ಲಿ ಸಿಲುಕಿದ ಯುವತಿ :25 ವರ್ಷದ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಮನೆಯಿಂದ ಕೆಲಸ ಮಾಡುವ ಜಾಹೀರಾತನ್ನ ಕಂಡು ತನ್ನ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್ ಮತ್ತು ಚೆಕ್‌ಬುಕ್‌ನಂತಹ ವೈಯಕ್ತಿಕ ವಿವರಗಳನ್ನು ಅಪರಾಧಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಅವಳ ಖಾತೆಗೆ ಹಣ ಬಂದಿದೆ. ಇದನ್ನ ಕಂಡ ಯುವತಿ ಈ ಕೆಲಸ ನಿಜವೆಂದು ತಿಳಿದಿದ್ದಾಳೆ. ಇದಾದ ನಂತರ ಪೊಲೀಸರು ಆಕೆಯನ್ನ ಸಂಪರ್ಕಿಸಿದಾಗ ತನ್ನ ಬ್ಯಾಂಕ್ ಖಾತೆಯನ್ನ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗಿದೆ ಎಂಬುದು ಗೊತ್ತಾಗಿದೆ.
1 ಲಕ್ಷಕ್ಕೂ ಅಧಿಕ ಮೊತ್ತದ ಆಘಾತಕಾರಿ ವಂಚನೆ : ಈ ತಿಂಗಳ 8 ಮತ್ತು 9 ರಂದು ನರೇಶ್ ಎಂಬುವವರ ಬ್ಯಾಂಕ್ ಖಾತೆಯಿಂದ ಅವರಿಗೆ ತಿಳಿಯದಂತೆ 1,04,999 ರೂ ಹಣ ವಿಥ್ ಡ್ರಾ ಆಗಿದೆ. ಇದಾದ ನಂತರ ನರೇಶ್ ಅವರು ಜನವರಿ 11 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆಟೋನಗರದ ಮೊಹಮ್ಮದ್ ಅಬ್ದುಲ್ (23) ಖಾತೆಗೆ ಹಣ ವರ್ಗಾವಣೆಯಾಗಿದೆ ಎಂಬುದನ್ನ ಪತ್ತೆ ಮಾಡಿದ್ದರು. ನಂತರ ಮೊಹಮ್ಮದ್ ಜೊತೆಗೆ ಗುಡುಮುಳದ ನಿತೀಶ್ (24) ಎಂಬಾತನನ್ನೂ ವಂಚನೆಯಲ್ಲಿ ತೊಡಗಿದ್ದಕ್ಕಾಗಿ ಬಂಧಿಸಿದ್ದಾರೆ.