ರಾಂಚಿ, ಜಾರ್ಖಂಡ್: ಆಹಾರ ಸುರಕ್ಷೆ ಕಾಳಜಿ ವಿಚಾರವಾದರೂ ಅನೇಕ ಬಾರಿ ಜನರು ಇದನ್ನು ನಿರ್ಲಕ್ಷ್ಯಿಸಿ ಬಾಯಿ ಚಪಲ ತೀರಿಸಿಕೊಳ್ಳಲು ಮುಂದಾಗುತ್ತಾರೆ. ಅದರಲ್ಲೂ, ಬಾಯಲ್ಲಿ ನೀರು ಬರಿಸುವ ಗೋಲ್ಗಪ್ಪ, ಪಾನಿಪೂರಿಯ ನೀರಿನ ಬಗ್ಗೆ ಅನೇಕ ಆಘಾತಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದೀಗ ಜಾರ್ಖಂಡ್ನಲ್ಲಿ ಕೇಳಿ ಬಂದಿರುವ ಪ್ರಕರಣ ಜನರನ್ನು ಬೆಚ್ಚಿಬೀಳಿಸುತ್ತಿರುವುದಂತೂ ಸುಳ್ಳಲ್ಲ.
ಗೋಲ್ ಗಪ್ಪ ಅಥವಾ ಪಾನಿಪಾರಿಗಳನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ ಜೀವಕ್ಕೆ ಕುತ್ತು ತರುವಂತಹ ಹಾನಿಕಾರಕ ಅಂಶ ಇರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಈ ಗೋಲ್ ಗಪ್ಪ ಸೇವನೆಯು ಕ್ಯಾನ್ಸರ್ನಂತಹ ಅಪಾಯವನ್ನು ಹೆಚ್ಚಿಸಲಿದೆ ಎಂದಿದ್ದಾರೆ.
ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ರವಾನೆ:ಅಕ್ಟೋಬರ್ನಲ್ಲಿ ಜಾರ್ಖಂಡ್ನ ಗಾರ್ವಾ ಆಹಾರ ಸುರಕ್ಷತಾ ಅಧಿಕಾರಿಯು ಗೋಲ್ಗಪ್ಪ ಅಥವಾ ಪಾನಿ ಪುರಿ ತಯಾರಿಸಲು ಬಳಸುವ ನೀರಿನ ಮಾದರಿಯನ್ನು ರಾಂಚಿಯ ನಾಂಕುಮ್‌ನಲ್ಲಿರುವ ರಾಜ್ಯ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದರು.
ಪತ್ತೆಯಾಗಿದ್ದು. ಆಸಿಡ್ಕಾರಕ ವಸ್ತು:ಪರೀಕ್ಷೆಗೆ ಕಳುಹಿಸಿದ ಗೋಲ್ಗಪ್ಪವನ್ನು ತಯಾರಿಸಲು ಹುಳಿ ನೀರು ಬಳಕೆ ಮಾಡಲಾಗಿದೆ. ಆದರೆ, ಈ ಹುಳಿ ನೀರು ಯಾವುದೇ ನಿಂಬೆ ಅಥವಾ ಹುಣಸೆಯಿಂದ ಮಾಡಿದ ನೀರಲ್ಲ. ಬದಲಾಗಿ ಫ್ಯಾಕ್ಟರಿಗಳಲ್ಲಿ ಬಳಕೆ ಮಾಡುವ ಸಿಟ್ರಿಲ್ ಆಸಿಡ್ ಅಥವಾ ಟೈಟ್ರಿಟಿಕ್ ಆಮ್ಲವಾಗಿದೆ.
ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿರುವ ರಾಜ್ಯ ಆಹಾರ ಪರೀಕ್ಷಾ ಪ್ರಯೋಗಾಲಯದ ಆಹಾರ ವಿಶ್ಲೇಷಕ ಚತುರ್ಭುಜ್ ಮೀನಾ, ಗೋಲ್ಗಪ್ಪದಲ್ಲಿ ಪತ್ತೆಯಾಗಿರುವ ಅಂಶವೂ ಕಾರ್ಖಾನೆಗಳಲ್ಲಿ ಬಳಕೆ ಮಾಡುವ ಹೈಡ್ರೋಕ್ಲೋರಿಕ್ ಆಮ್ಲವಾಗಿದೆ ಎಂದಿದ್ದಾರೆ.
ಇದು ಹಲ್ಲು ಅಥವಾ ಕರುಳಿಗೆ ಅಪಾಯಕಾರಿಯಾಗಿದೆ. ತನಿಖೆಯ ಬಳಿಕ ವರದಿ ಕೈ ಸೇರಿದ್ದು, ಗಾರ್ವಾ ಆಹಾರ ಅಧಿಕಾರಿಗಳು ಇದೀಗ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಶೌಚಾಲಯ ಬಳಕೆ ಮಾಡುವ ಆಮ್ಲ:2024 ಅಕ್ಟೋಬರ್ 15ರಂದು ಕೈ ಸೇರಿರುವ ವರದಿಯಲ್ಲಿ ಗೋಲ್ಗಪ್ಪದಲ್ಲಿ ಶೌಚಾಲಯ ಶುಚಿಗೆ ಬಳಕೆ ಮಾಡುವ ವಸ್ತು ಬಳಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಸದ್ಯಕ್ಕೆ ಈ ಮಾದರಿಗಳನ್ನು ರಾಂಚಿಯಲ್ಲಿ ಕೂಡ ಪರೀಕ್ಷೆಗೆ ಕಳುಹಿಸಲಾಗಿದೆ. ಇಲ್ಲಿ ಕೂಡ ಇದರಲ್ಲಿ ಹಾರ್ಪಿಂಗ್ ಅಂಶ ಇರುವುದು ಕಂಡು ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದರುವ ಚರುರ್ಭುಜ್ ಮೀನಾ, ಕಾರ್ಖಾನೆಗಳಲ್ಲಿ ಬಳಸುವ ಹೈಡ್ರೋಕ್ಲೋರಿಕ್ ಆಮ್ಲವನ್ನು ಟಾಯ್ಲೆಟ್ ಕ್ಲೀನರ್‌ಗಳಲ್ಲಿ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
ಕಾನ್ಸರ್ ಮತ್ತು ಫೈಬ್ರೋಸಿಸ್ಗೆ ಕಾರಣವಾಗುವ ಹೈಡ್ರೋಕ್ಲೋರಿಕ್ ಆಮ್ಲ: ಪುಚ್ಕಾ, ಪಾನಿಪುರಿ ಅಥವಾ ಗೋಲ್ಗಪ್ಪದ ನೀರಿನಲ್ಲಿ ಹೈಡ್ರೋಕ್ಲೋರಿಕ್ ಅಂಶ ಪತ್ತೆಯಾಗಿರುವ ಕುರಿತು ರಿಮ್ಸ್ನ ವೈದ್ಯಕೀಯ ವಿಭಾಗದ ನಿವೃತ್ತ ಮುಖ್ಯಸ್ಥರಾಗಿರುವ ಡಾ ವಿದ್ಯಾಪತಿ ಮಾತನಾಡಿ, ಇದು ಹಲ್ಲು ಮತ್ತು ಹೊಟ್ಟೆಯ ಸಮಸ್ಯೆಗೆ ಕಾರಣವಾಗುತ್ತದೆ ಹಾಗೇ ಫೈಬ್ರೋಸಿಸ್ ಮತ್ತು ಕ್ಯಾನ್ಸರ್ಗೂ ಕಾರಣವಾಗಬಹುದು ಎಂದಿದ್ದಾರೆ.
ಇದನ್ನೂ ಓದಿ: ಉಗ್ರರ ಗುಂಡಿಗೆ ಬಲಿಯಾದ ಶ್ವಾನ, ಫ್ಯಾಂಟಮ್ ತ್ಯಾಗಕ್ಕೆ ಕಣ್ಣೀರಿನ ವಿದಾಯ ಹೇಳಿದ ಸೇನೆ