ಹೈದರಾಬಾದ್: ಅಡುಗೆ ಮಾಡಲು ವಿಳಂಬ ಮಾಡಿದ್ದಕ್ಕೆ ಸಿಟ್ಟಿಗೆದ್ದ ಗಂಡನೊಬ್ಬ ತನ್ನ ಹೆಂಡಿತಿಯನ್ನು ಇಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾನೆ. ನಾಲ್ಕು ದಿನಗಳ ಹಿಂದೆ ಉದ್ಯೋಗಕ್ಕಾಗಿ ಬೇರೆ ರಾಜ್ಯದಿಂದ ಹೈದರಾಬಾದ್ಗೆ ವಲಸೆ ಬಂದ ಕುಟುಂಬವೊಂದರಲ್ಲಿ ಈ ಕೊಲೆ ನಡೆದಿದೆ. ಪತಿ ತನ್ನ ಪತ್ನಿಯ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಅಡುಗೆ ಮಾಡಲು ತಡ ಮಾಡಿದ್ದಕ್ಕೆ ರೊಚ್ಚಿಗೆದ್ದ ಪತಿ: ಇಟ್ಟಿಗೆಯಿಂದ ಹೊಡೆದು ಕೊಲೆ - Husband Killed Wife - HUSBAND KILLED WIFE
ಪತ್ನಿ ಅಡುಗೆ ಮಾಡಲು ತಡ ಮಾಡಿದಳು ಎಂದು ಆಕ್ರೋಶಗೊಂಡ ಪತಿಯೊಬ್ಬ, ಇಟ್ಟಿಗೆಯಿಂದ ಹೊಡೆದು ಕಟ್ಟಿಕೊಂಡ ಹೆಂಡತಿಯನ್ನು ಸಾಯಿಸಿದ್ದಾನೆ.
Published : May 1, 2024, 10:21 AM IST
ಪ್ರಕರಣದ ಬಗ್ಗೆ ಪೊಲೀಸರು ಹೇಳಿದ್ದಿಷ್ಟು:ಬಾಚುಪಲ್ಲಿ ಎಸ್ ಐ ಜಿ.ರಮೇಶ್ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಮಹಾರಾಷ್ಟ್ರದ ರವೀನಾ ದುಬೆ (26) ಮತ್ತು ನವೀನ್ ದಂಪತಿ ಏಪ್ರಿಲ್ 26 ರಂದು ನಗರಕ್ಕೆ ವಲಸೆ ಬಂದಿದ್ದರು. ಪ್ರಗತಿನಗರದ ಕಾಲೇಜು ಹಾಸ್ಟೆಲ್ ಬಳಿಯ ಗುಡಿಸಲಿನಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಒಂದು ವರ್ಷದ ಗಂಡು ಮಗುವಿನೊಂದಿಗೆ ಇಲ್ಲಿಗೆ ಬಂದಿದ್ದರು. ಸೋಮವಾರ ಸಂಜೆ ಗಂಡ - ಹೆಂಡತಿ ಹೊರಗೆ ಹೋಗಿ ರಾತ್ರಿ 9 ಗಂಟೆಗೆ ವಾಪಸ್ ಆಗಿದ್ದರು. ನವೀನ್ ತನ್ನ ಹೆಂಡತಿಯನ್ನು ಬೇಗನೆ ಅಡುಗೆ ಮಾಡುವಂತೆ ಒತ್ತಾಯಿಸಿದ್ದಾನೆ. ಅವಳು ಅಡುಗೆ ಮಾಡುವುದಕ್ಕೆ ತಡ ಮಾಡಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕುಪಿತಗೊಂಡ ಪತಿ ಗುಡಿಸಲಿನ ಆವರಣದಲ್ಲಿರುವ ಇಟ್ಟಿಗೆ ತೆಗೆದುಕೊಂಡು ಪತ್ನಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ:ಕೇರಳ: ಪೊಲೀಸರು, ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ - Shootout