ಹೈದರಾಬಾದ್: ಹೋಳಿ ಎಂದರೆ ಸಣ್ಣವರಿಂದ ದೊಡ್ಡವರವರೆಗೆ ಸಂಭ್ರಮ ಮನೆ ಮಾಡುತ್ತದೆ. ಆದರೆ, ಈ ಬಾರಿಯ ಬಣ್ಣದಬ್ಬದ ಆಚರಣೆಗೆ ಸೂರ್ಯನ ತಾಪವೂ ಸೇರಲಿದೆ. ಈ ವರ್ಷ ಸೂರ್ಯನ ತಾಪ ಹೆಚ್ಚಿದ್ದು, ಹೋಳಿ ಹಬ್ಬದ ದಿನ 40 ಡಿಗ್ರಿ ಸೆಲ್ಸಿಯಸ್ವರೆಗೂ ಇರಲಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಅಮೆರಿಕ ಮೂಲಕ ಕ್ಲೈಮೇಟ್ ಸೆಂಟರ್ ಅಧ್ಯಯನ ನಡೆಸಿದೆ.
1970ರಿಂದ ತಾಪಮಾನದ ದತ್ತಾಂಶವನ್ನು ವಿಶ್ಲೇಷಣೆ ಮಾಡಿದ್ದು, ಈ ಬಾರಿ ಎಂದೂ ಕಂಡರಿಯದ ರೀತಿಯಲ್ಲಿ ತಾಪಮಾನ ಹೆಚ್ಚಳವನ್ನು ಈ ದಿನ ಕಾಣಬಹುದಾಗಿದೆ. ಇದಕ್ಕೆ ಕಾರಣ ಹವಾಮಾನ ಬದಲಾವಣೆ ಆಗಿದೆ.
ಈ ಕೇಂದ್ರವು ಭಾರತದೆಲ್ಲೆಡೆಯ ತಾಪಮಾನದ ಮಾದರಿಯನ್ನು ಅನುಸರಿಸಿ ಅಧ್ಯಯನ ನಡೆಸಿದ್ದು, ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಬಿಸಿ ಹವಾಮಾನ ಹೆಚ್ಚಲಿದೆ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 1970ರ ಬಳಿಕ ಇದೇ ಮೊದಲ ಬಾರಿ ಈ ಅವಧಿಯಲ್ಲಿ 2.8 ಡಿಗ್ರಿ ಸೆಲ್ಸಿಯನ್ ತಾಪಮಾನ ಹೆಚ್ಚಳ ಕಾಣಲಿದೆ. ಏಪ್ರಿಲ್ನಲ್ಲಿ ದೇಶದ ಬಹುತೇಕ ಕಡೆ ಶಾಖದ ಹೆಚ್ಚಳ ಕಾಣಲಿದ್ದು, ಮಿಜೋರಾಂನಲ್ಲಿ ಕೂಡ 1.9 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗಲಿದೆ.
ಹೋಳಿಗೆ ಮುಂದೆ ಹೆಚ್ಚಲಿರುವ ಈ ತಾಪಮಾನದ ಹೆಚ್ಚಳದಿಂದ 9 ರಾಜ್ಯಗಳಲ್ಲಿ ವಿಪರೀತ ಬೇಸಿಗೆ ಅನುಭವ ಉಂಟಾಗಲಿದೆ. 1970ರಿಂದ ಭಾರತದಲ್ಲಿ ಮಹಾರಾಷ್ಟ್ರ, ಬಿಹಾರ ಮತ್ತು ಛತ್ತೀಸ್ಗಡ್ ಹೊರತಾಗಿ ಉಳಿದೆಡೆ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಿಲ್ಲ. ಆದರೆ, ಈ ವರ್ಷ ಈ ಮೂರು ರಾಜ್ಯಗಳ ಜೊತೆಗೆ ಮತ್ತೆ 9 ರಾಜ್ಯಗಳಲ್ಲಿ ಅಂದರೆ, ರಾಜಸ್ಥಾನ್, ಗುಜರಾತ್, ತೆಲಂಗಾಣ, ಮಧ್ಯಪ್ರದೇಶ, ಒಡಿಶಾ ಮತ್ತು ಆಂಧ್ರದಲ್ಲಿ ಕೂಡ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಲಿದೆ.
ಮಾರ್ಚ್ ಮತ್ತು ಏಪ್ರಿಲ್ನಲ್ಲಿನ ಶಾಖದ ದರದ ಲೆಕ್ಕಾಚಾರದ ಅನುಸಾರ ಮಹಾರಾಷ್ಟ್ರದಲ್ಲಿ ಶೇ 14ರಷ್ಟು ತಾಪಮಾನ ಹೆಚ್ಚಲಿದ್ದು, ಇಲ್ಲಿನ ಜನರು ಹೆಚ್ಚಿನ ಬೇಸಿಗೆಯ ಬೇಗೆ ಅನುಭವಿಸಲಿದ್ದಾರೆ. ಒಟ್ಟು 37 ನಗರದಲ್ಲಿ 40 ಡಿಗ್ರಿ ಸೆಲ್ಸಿಯಸ್ ಅಥವಾ ಅಧಿಕ ತಾಪಮಾನದ ಬಿಸಿಯನ್ನು ಅನುಭವಿಸುವ ಸಾಧ್ಯತೆ ಶೇ 1ರಷ್ಟಿದೆ. ಇನ್ನು 11 ನಗರಗಳಲ್ಲಿ ಈ ಅನುಭವ ಪಡೆಯುವ ಸಾಧ್ಯತೆ ಶೇ 10ಕ್ಕಿಂತ ಹೆಚ್ಚಿದೆ.
ಮಧುರೈ ಹೊರತಾಗಿ ಭಾರತದಲ್ಲಿನ 15 ನಗರಗಳು 40 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದುವ ಸಾಧ್ಯತೆ ಇದೆ ಇದರಲ್ಲಿ ಬಿಲಾಸ್ಪುರ್ ಅತಿ ಹೆಚ್ಚಿನ ಅಪಾಯ ಅಂದರೆ ಶೇ 31ರಷ್ಟು ಹೊಂದಿದೆ. ಇಂದೋರ್ನಲ್ಲಿ ಕೂಡ ಈ ಅಪಾಯವು ಶೇ 8ರಷ್ಟು ಇದ್ದು, ಕಳೆದ ಬಾರಿಗಿಂತ 8.1ರಷ್ಟು ಪಟ್ಟು ಹೆಚ್ಚಿನ ಬಿಸಿ ಅನುಭವ ಇಲ್ಲಿನ ಜನರು ಪಡೆಯಲಿದ್ದಾರೆ. ಮಧುರೈ ಮತ್ತು ಭೋಪಾಲ್ನಲ್ಲಿ ಈ ಬದಲಾವಣೆ ದೊಡ್ಡಮಟ್ಟದಲ್ಲಿಲ್ಲ. ಇಲ್ಲಿ ಬಿಸಿ ತಾಪಮಾನ ಕ್ರಮವಾಗಿ 7.1 ಮತ್ತು 5.5ರಷ್ಟು ಹೆಚ್ಚಿರುವ ಸಾಧ್ಯತೆ ಇದೆ.
ತಾಪಮಾನದಲ್ಲಿ ಅನಿಶ್ಚಿತ ರೂಪಾಂತರದಿಂದ ಈ ಬದಲಾವಣೆ ಕಾಣಬಹುದಾಗಿದೆ. ಈಗಾಗಲೇ ಚಳಿಗಾಲದಲ್ಲಿ ಬೇಸಿಗೆ ಅನುಭವ ಆಗುತ್ತಿದೆ. ಫೆಬ್ರವರಿಯಲ್ಲಿಯೇ ಶಾಖದ ಬಿಸಿ ಕಂಡಿದ್ದು, ಈ ಮಾರ್ಚ್ನಲ್ಲಿ ಕೂಡ ಇದೇ ಪರಿಸ್ಥಿತಿ ಮುಂದುವರೆದಿದೆ. ಭಾರತದಲ್ಲಿ ತಾಪಮಾನವು ಮಾನವನಿಂದ ಆದ ಹವಾಮಾನ ಬದಲಾಣೆಯ ಪರಿಣಾಮ ಎಂಬುದು ಸ್ಪಷ್ಟವಾಗಿದೆ ಎಂದು ಕ್ಲೈಮೆಟ್ ಸೆಂಟ್ರಲ್ನ ಡಾ. ಆ್ಯಂಡ್ರೊ ಪೆರ್ಶಿಂಗ್ ತಿಳಿಸಿದ್ದಾರೆ.
ಬಿಸಿಲಿನ ತಾಪಮಾನ ಹೆಚ್ಚಳದ ಹಿಂದೆ ಹವಾಮಾನ ಬದಲಾವಣೆ ಕಾರಣ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ತಾಪಮಾನದ ಮಾದರಿಗಳಲ್ಲಿ ಬದಲಾವಣೆಯನ್ನು ನಾವು ಕಾಣುತ್ತಿದ್ದೇವೆ. ಮಾರ್ಚ್ನಲ್ಲಿ ಶಾಖದ ಅಲೆ ಅಪರೂಪ ಆದರೆ, ಜಾಗತಿಕ ತಾಪಮಾನದಿಂದ ಹೆಚ್ಚಿನ ಉಷ್ಣತೆಯ ಏರಿಕೆ ಕಾಣಬಹುದಾಗಿದೆ. ಇದೇ ರೀತಿಯ ಹವಾಮಾನ ಪರಿಸ್ಥಿತಿಯು ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಹವಾಮಾನ ಬದಲಾವಣೆಯಿಂದ ಆರೋಗ್ಯ ಸಮಸ್ಯೆ ಹೆಚ್ಚಳ: ವೈದ್ಯರ ಎಚ್ಚರಿಕೆ