ನವದೆಹಲಿ:ಕೇಂದ್ರದ ಬಜೆಟ್ ಅಧಿವೇಶನ ಆರಂಭ ದಿನವಾದ ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2024-25ರ ಆರ್ಥಿಕ ಸಮೀಕ್ಷೆ ಮಂಡಿಸಿದರು. ಆರ್ಥಿಕತೆ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಬಜೆಟ್ಗೆ ಮುಂಚಿತವಾಗಿ ಸರ್ಕಾರವು ಪ್ರಸ್ತುತಪಡಿಸುವ ವಾರ್ಷಿಕ ದಾಖಲೆ ಆರ್ಥಿಕ ಸಮೀಕ್ಷೆಯಾಗಿದೆ. ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಈ ಆರ್ಥಿಕ ಸಮೀಕ್ಷೆ ಸಿದ್ಧಪಡಿಸಲಾಗಿದೆ.
ವಿಶ್ವದ ಮೂರನೇ ಶಕ್ತಿಯಾಗಲು ರಫ್ತು ಹೆಚ್ಚಿಸಬೇಕೆಂದು ಸಲಹೆ: ಇಲ್ಲಿವೆ ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳ ವಿವರ - ECONOMIC SURVEY
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2024-25ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಇದರಲ್ಲಿನ ಪ್ರಮುಖಾಂಶಗಳ ಮಾಹಿತಿ ಇಲ್ಲಿದೆ.
ಕೇಂದ್ರ ಬಜೆಟ್ (ETV Bharat)
Published : Jan 31, 2025, 4:29 PM IST
|Updated : Jan 31, 2025, 5:33 PM IST
2024-25ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಮುಖಾಂಶಗಳೇನು?:
- 2026ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯನ್ನು ಶೇ.6.3 ಮತ್ತು ಶೇ.6.8ರ ನಡುವೆ ಇರಬಹುದೆಂದು ಅಂದಾಜಿಸಲಾಗಿದೆ. ಸದ್ಯ 2025ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ. 6.4ರಷ್ಟಿದೆ.
- ಸಾರ್ವಜನಿಕ ಬಂಡವಾಳ ಮತ್ತು ಸುಧಾರಿತ ವ್ಯಾಪಾರ ಬೆಂಬಲಿತವಾದ ಹೂಡಿಕೆ ಚಟುವಟಿಕೆಗಳು ಹೆಚ್ಚಾಗುವ ನಿರೀಕ್ಷೆಯಿದೆ.
- ಜಾಗತಿಕ ರಾಜಕೀಯ, ಆರ್ಥಿಕ ಅನಿಶ್ಚಿತತೆಗಳ ನಡುವೆ ಹಣದುಬ್ಬರದ ಅಪಾಯವು 2026ರ ಹಣಕಾಸು ವರ್ಷದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ.
- ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಭಾರತವು ತಳಮಟ್ಟದಲ್ಲಿ ರಚನಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸಬೇಕು ಹಾಗೂ ನಿಯಂತ್ರಣಗಳನ್ನು ತೆಗೆದುಹಾಕಬೇಕು ಎಂದು ಸಮೀಕ್ಷೆಯು ಪ್ರತಿಪಾದಿಸಿದೆ.
- ರಫ್ತು ಹೆಚ್ಚಿಸಲು ಮತ್ತು ಹೂಡಿಕೆಯನ್ನು ಆಕರ್ಷಿಸಲು ಭಾರತ ಹೆಚ್ಚಾಗಿ ಪ್ರಯತ್ನಿಸಬೇಕು.
- ಭಾರತದ ಹೆಚ್ಚಿನ ಬೆಳವಣಿಗೆ ಕಾಣಲು ಮುಂದಿನ ಎರಡು ದಶಕಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ನಿರಂತರವಾಗಿ ಹೂಡಿಕೆ ಪ್ರಮಾಣವನ್ನು ಏರಿಕೆ ಮಾಡುವುದು.
- ಗುಜರಾತ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಂತಹ ಕೆಲವೇ ರಾಜ್ಯಗಳು ಮಾತ್ರ ಜನರ ತಮ್ಮ ಜೀವನ ನಿರ್ವಹಣೆಗೆ ಬೇಕಾದಷ್ಟು ಆದಾಯ ಗಳಿಸಲು ನೆರವಾಗಲು ಕೈಗಾರಿಕಾ ವಲಯದ ಮೇಲಿನ ಅವಲಂಬನೆ ಲಾಭ ಮಾಡಿಕೊಳ್ಳಲು ಸಮರ್ಥವಾಗಿವೆ.
- ಕೃತಕ ಬುದ್ಧಿಮತ್ತೆ ಬಗ್ಗೆಯೂ ಸಮೀಕ್ಷೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಎಐಗೆ ಸೂಕ್ತವಾದ ಆಡಳಿತ ಚೌಕಟ್ಟು ಇಲ್ಲದೇ ಇದ್ದಲ್ಲಿ, ಇದು ತಂತ್ರಜ್ಞಾನದ ದುರುಪಯೋಗಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.
- ಕಾರ್ಪೊರೇಟ್ ವಲಯವು ಹೆಚ್ಚಾಗಿ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಬೇಕು.
- ಹವಾಮಾನ ಬದಲಾವಣೆ ಕಾರಣದಿಂದ ವಿವಿಧ ಬೆಳೆ ಪ್ರಭೇದಗಳನ್ನು ಅಭಿವೃದ್ಧಿಪಡಿಸಿ ಇಳುವರಿ ಹೆಚ್ಚಿಸುವುದು ಮತ್ತು ಬೆಳೆ ಹಾನಿಯನ್ನು ಕಡಿಮೆ ಮಾಡುವುದರ ಜೊತೆಗೆ ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಟೊಮೆಟೊ ಮತ್ತು ಈರುಳ್ಳಿ ಉತ್ಪಾದನೆಯನ್ನು ಹೆಚ್ಚಿಸಲು ಸಂಶೋಧನೆಗೆ ಆದ್ಯತೆ ನೀಡುವುದು
- 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಭಾರತವು ಸುಮಾರು ಒಂದು ಅಥವಾ ಎರಡು ದಶಕಗಳವರೆಗೆ ಸರಾಸರಿ ಶೇ.8 ರಷ್ಟು ಬೆಳವಣಿಗೆ ಕಾಣಬೇಕಿದೆ .
- ಅಗತ್ಯ ಬೆಳವಣಿಗೆ ಸಾಧಿಸಲು ಹೂಡಿಕೆಯು ಶೇ.31 ರಿಂದ 35 ಕ್ಕೆ ಏರಬೇಕಾಗಿದೆ.
- ಆರ್ಥಿಕ ನೀತಿಯು ವ್ಯವಸ್ಥಿತವಾಗಿ ನಿಯಂತ್ರಣ ಸಡಿಲಗೊಳಿಸುವತ್ತ ಗಮನ ಕೇಂದ್ರಿಕರಿಸಬೇಕು.
- ಉತ್ಪಾದನಾ ವಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮತ್ತು ಕೃತಕ ಬುದ್ಧಿಮತ್ತೆ (AI), ರೊಬೊಟಿಕ್ಸ್ ಮತ್ತು ಜೈವಿಕ ತಂತ್ರಜ್ಞಾನದಂತಹ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ.
- 640.3 ಬಿಲಿಯನ್ ಡಾಲರ್ ವಿದೇಶಿ ವಿನಿಮಯ 10 ತಿಂಗಳ ಆಮದು ಮತ್ತು ಶೇ.90 ರಷ್ಟು ಬಾಹ್ಯ ಸಾಲವನ್ನು ಸರಿದೂಗಿಸಲು ಬೇಕಾಗುತ್ತದೆ.
- ಈಸ್ ಆಫ್ ಡೂಯಿಂಗ್ ಬಿಸಿನೆಸ್ (ಇಒಡಿಬಿ) 2.0 ರಾಜ್ಯ ಸರ್ಕಾರಗಳ ನೇತೃತ್ವದ ಉಪಕ್ರಮವಾಗಿದ್ದು, ವ್ಯಾಪಾರಗಳಲ್ಲಿನ ಸಮಸ್ಯೆಗಳ ಮೂಲ ಕಾರಣಗಳನ್ನು ಸರಿಪಡಿಸುವತ್ತ ಗಮನ ಹರಿಸಬೇಕು.
- 2025ರ ನಾಲ್ಕನೇ ತ್ರೈಮಾಸಿಕದಲ್ಲಿ ಆಹಾರ ಹಣದುಬ್ಬರ ಕಡಿಮೆಯಾಗುವ ಸಾಧ್ಯತೆಯಿದೆ.
- 2024ರಲ್ಲಿ ರೂಪಾಯಿ ಮೌಲ್ಯ ಕುಸಿತಕ್ಕೆ ಬಲವಾದ ಅಮೆರಿಕ ಡಾಲರ್ ಮತ್ತು ಜಾಗತಿಕ ರಾಜಕೀಯ ಉದ್ವಿಗ್ನತೆಗಳು ಕಾರಣ ಎಂದು ಸಮೀಕ್ಷೆ ಹೇಳಿದೆ.
- ದಿವಾಳಿತನ ಕಾನೂನಿನ ಪರಿಣಾಮ ಸಾವಿರಾರು ಸಾಲಗಾರರು ಆರಂಭಿಕ ಹಂತಗಳಲ್ಲಿಯೇ ತಮ್ಮ ಸಂಕಷ್ಟವನ್ನು ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಸಮೀಕ್ಷೆ ತಿಳಿಸಿದೆ.
ಇದನ್ನೂ ಓದಿ:ಭಾರತ ಶೀಘ್ರದಲ್ಲೇ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆ: ರಾಷ್ಟ್ರಪತಿ ಮುರ್ಮು
Last Updated : Jan 31, 2025, 5:33 PM IST