ಕರ್ನಾಟಕ

karnataka

ETV Bharat / bharat

ಶ್ರೀನಗರದಲ್ಲಿ ಭಾರಿ ಹಿಮಪಾತ: ಜಮ್ಮು- ಶ್ರೀನಗರ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು - HEAVY SNOWFALL IN SRINAGAR

ಶುಕ್ರವಾರ ಮಧ್ಯಾಹ್ನದಿಂದ ಭಾರಿ ಹಿಮಪಾತವಾಗುತ್ತಿದ್ದು, ಇದು ಶನಿವಾರ ಕೂಡ ಮುಂದುವರೆದಿದೆ. ಅನೇಕ ಪ್ರದೇಶದಲ್ಲಿ ಸಾಧಾರಣವಾದ ಹಿಮಪಾತವಾಗಿದೆ.

Heavy snowfall disrupts life in Valley hundreds stranded on Jammu Srinagar highway
ಶ್ರೀನಗರದಲ್ಲಿ ಹಿಮಪಾತ (IANS​)

By IANS

Published : Dec 28, 2024, 10:31 AM IST

ಶ್ರೀನಗರ, ಜಮ್ಮು ಕಾಶ್ಮೀರ: ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲಿ ಹಿಮದ ರಾಶಿ ದಟ್ಟವಾಗಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯ ಮಧ್ಯದ ಪಿರ್​ ಪಂಜಲ್​ ಟನಲ್​ ಮತ್ತು ಶ್ರೀನಗರ ನಗರದಲ್ಲಿ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತೆ ಆಗಿದೆ.

ಶುಕ್ರವಾರ ಮಧ್ಯಾಹ್ನದಿಂದ ಭಾರಿ ಹಿಮಪಾತವಾಗುತ್ತಿದ್ದು, ಇದು ಶನಿವಾರ ಕೂಡ ಮುಂದುವರೆದಿದ್ದು, ಅನೇಕ ಪ್ರದೇಶದಲ್ಲಿ ಸಾಧಾರಣ ಹಿಮಪಾತವಾಗಿದೆ.

ರಸ್ತೆಗಳ ಮೇಲೆ ಹಿಮದ ರಾಶಿ:ರಸ್ತೆಗಳಲ್ಲಿ ಹಿಮದ ರಾಶಿಯಿಂದಾಗಿ ರಸ್ತೆಗಳಲ್ಲಿ ಜಾರುವಿಕೆ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನಗಳು ಮುಂದೆ ಸಾಗದೇ ಅಲ್ಲಿಯೇ ನಿಲ್ಲುವಂತಾಗಿದೆ. ಹೆದ್ದಾರಿಯಲ್ಲಿ ಥರಗುಟ್ಟುವ ಚಳಿ ಮತ್ತು ಹಿಮದ ನಡುವೆ ಅನೇಕ ಗಂಟೆಗಳ ಕಾಲ ವಾಹನಗಳು ಮುಂದೆ ಸಾಗದೇ ಟನಲ್​ನಲ್ಲೇ ನಿಂತಿವೆ. ಅಧಿಕಾರಿಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳ ಸಾಗಾಟಕ್ಕೆ ಅನುವು ಮಾಡಿಕೊಡುವ ಪ್ರಯತ್ನಕ್ಕೆ ಮುಂದಾದರೂ, ದಟ್ಟ ಮಂಜಿನ ಮಳೆ ಅದಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದ ವಾಹನಗಳು ನಿಧಾನವಾಗಿ ತೆರಳುವ ಪರಿಸ್ಥಿತಿ ಉಂಟಾಗಿದೆ.

ಭಾರಿ ಹಿಮಪಾತದಿಂದಾಗಿ ಭಾರಿ ಮತ್ತು ಸಣ್ಣ ವಾಹನಗಳು ರಸ್ತೆಯಲ್ಲಿ ಜಾರಿದ್ದು, ಚಾಲಕರು ಕೂಡ ಪ್ರಯಾಣ ಮುಂದುವರೆಸಲು ಹರಸಾಹಸ ಪಡಬೇಕಾಗಿದೆ. ಶನಿವಾರ ಬೆಳಗಿನವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಿದ್ದ ವಾಹನದ ಸಂಚಾರ ಇನ್ನೂ ಹಾಗೇ ಇದೆ.

ಸಹಾಯವಾಣಿ ಆರಂಭಿಸಿದ ಅಧಿಕಾರಿಗಳು:ಅನಿರೀಕ್ಷಿತ ಹಿಮಪಾತದಿಂದ ವಾಹನ ಪ್ರಯಾಣಿಕರು ಸಮಸ್ಯೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಜನರಿಗೆ ಸಹಾಯ ಮಾಡಲು ಅಧಿಕಾರಿಗಳು ಸಹಾಯವಾಣಿ ಆರಂಭಿಸಿದ್ದಾರೆ. ಶ್ರೀನಗರದ ನಗರದ ಎಲ್ಲ ರಸ್ತೆ ಸೇರಿದಂತೆ ಬುಡ್ಗಾಮ್​, ಗಂಡೆರ್ಬಲ್​, ಬಂಡಿಪೊರ, ಬರಮುಲ್ಲಾ, ಕುಪ್ವಾರ, ಪುಲ್ವಾಮ, ಅನಂತ್​ನಾಗ್​​, ಕುಲ್ಗಾಮ್​ ಮತ್ತು ಶೋಫಿಯಾನ ಜಿಲ್ಲೆಗಳಲ್ಲಿ ರಸ್ತೆ ಮೇಲಿನ ಹಿಮವನ್ನು ಯಂತ್ರಗಳಿಂದ ತೆರವು ಮಾಡುವ ಕೆಲಸ ಮಾಡಲಾಗುತ್ತಿದೆ. ಭಾರಿ ಹಿಮದ ಪರಿಣಾಮ ಶ್ರೀನಗರದ ಕೆಲವು ಪ್ರದೇಶದಲ್ಲಿ ವಿದ್ಯುತ್​​ ಸಂಪೂರ್ಣವಾಗಿ ವ್ಯತ್ಯಯವಾಗಿದೆ.

ವಿಪರೀತ ಹಿಮಪಾತದ ಕೆಲವು ತೊಂದರೆಗಳ ಹೊರತಾಗಿ ಇದು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಹರ್ಷ ತಂದಿದೆ. ದೀರ್ಘ ಕಾಲದ ಶುಷ್ಕ ವಾತಾವರಣದ ನಡುವೆ ಈ ಹಿಮ ಉತ್ತಮ ಬಾಬಿ ಬೆಳೆಯುವ ಭರವಸೆ ಮೂಡಿಸಿದೆ. ಕಳೆದ ನಾಲ್ಕು ತಿಂಗಳಿನಿಂದ ಮಳೆಯಾಗದ ಕಾರಣ ಕಣಿವೆಯಲ್ಲಿ ನೀರಿನ ಚಿಲುಮೆ ಮತ್ತು ಬಾವಿಗಳು ನೀರಿನ ಮಟ್ಟ ಕಡಿಮೆಯಾಗಿತ್ತು.

ಶ್ರೀನಗರ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೂಡ ಈ ಋತುಮಾನದ ಮೊದಲ ಹಿಮಪಾತ ಶುಕ್ರವಾರದಿಂದ ಆರಂಭವಾಗಿದೆ. ಸದ್ಯ ಕಣಿವೆ ರಾಜ್ಯದಲ್ಲಿ ಪ್ರವಾಸಿಗರಲ್ಲಿ ಈ ಹಿಮಪಾತ ಸಂತಸ ತಂದಿದ್ದು, ಗುಲ್ಮಾರ್ಗ್, ಪಹಲ್ಗಾಮ್, ಸೋನಾಮಾರ್ಗ್ ಮತ್ತು ಇತರ ಪ್ರವಾಸಿ ತಾಣಗಳಲ್ಲಿ ಸುಮಾರು 10 ಇಂಚುಗಳಷ್ಟು ತಾಜಾ ಹಿಮಪಾತವಾಗಿದೆ.

ಹವಾಮಾನ ಇಲಾಖೆಯು ಮುಂದಿನ 24 ಗಂಟೆಗಳಲ್ಲಿ ಹೆಚ್ಚಿನ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆ ಇದೆ. (ಐಎಎನ್​ಎಸ್​)

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭಾರಿ ಮಳೆ; ಮುಂದುವರಿದ ಕಳಪೆ ವಾತಾವರಣ, ಮರಗಳು ನೆಲಕ್ಕುರುಳಿ ಭಾರಿ ಟ್ರಾಫಿಕ್​ ಜಾಮ್

ABOUT THE AUTHOR

...view details