ಕರ್ನಾಟಕ

karnataka

ETV Bharat / bharat

ತಮಿಳುನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ, ಶಾಲೆಗಳಿಗೆ ರಜೆ: ಬೆಂಗಳೂರಲ್ಲೂ ಮೋಡ ಕವಿದ ವಾತಾವರಣ

ತಮಿಳುನಾಡಿನ ಮೈಲಾಡುತುರೈ, ನಾಗಪಟ್ಟಣಂ ಮತ್ತು ಪುದುಚೇರಿಯ ಕಾರೈಕಲ್‌ನ ಜಿಲ್ಲಾಧಿಕಾರಿಗಳು ಶಾಲಾ-ಕಾಲೇಜುಗಳಿಗೆ ದಿನದ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

Heavy rainfall Forecast in TN and Puducherry schools shut
ಮಳೆ (ಸಂಗ್ರಹ ಚಿತ್ರ) (ANI)

By ETV Bharat Karnataka Team

Published : 5 hours ago

ಚೆನ್ನೈ: ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರೀ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಇಂದು ಶಾಲಾ-ಕಾಲೇಜಿಗಳಿಗೆ ರಜೆ ಘೋಷಿಸಲಾಗಿದೆ. ಬೆಂಗಳೂರಿನಲ್ಲೂ ಮಂಗಳವಾರದಿಂದ ಮೋಡ ಕವಿದ ವಾತಾವರಣವಿದೆ.

ತಮಿಳುನಾಡಿನ ಮೈಲಾಡುತುರೈ, ನಾಗಪಟ್ಟಣಂ, ತಿರುವಾರುರ್​​ ಮತ್ತು ಕರೈಕಲ್​ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಪ್ರಾದೇಶಿಕ ಹವಾಮಾನ ಕೇಂದ್ರ ರೆಡ್​ ಅಲರ್ಟ್​ ನೀಡಿದೆ. ಜೊತೆಗೆ ಕಡಲೂರು, ಮಯಿಲದುತ್ತುರೈ ಮತ್ತು ಕರೈಕಲ್​ ಜಿಲ್ಲೆಗಳಲ್ಲಿ ಬುಧವಾರದವರೆಗೂ ರೆಡ್​ ಅಲರ್ಟ್​ ಘೋಷಿಸಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ವಾಯುವ್ಯ ದಿಕ್ಕಿಗೆ ಗಾಳಿ ಬಲಗೊಳ್ಳುವ ಸಾಧ್ಯತೆ ಇದೆ. ಚಂಡಮಾರುತ ಶ್ರೀಲಂಕಾ ಮತ್ತು ತಮಿಳುನಾಡು ಕರಾವಳಿಯ ಉತ್ತರ ಮತ್ತು ವಾಯುವ್ಯ ದಿಕ್ಕಿನೆಡೆಗೆ ಸಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ವಿಲ್ಲುಪುರಂ, ಕಡಲೂರು, ಅರಿಯಲೂರ್​​, ತಂಜಾವೂರ್​, ಪುಡುಕೊಟ್ಟೈ, ಶಿವಗಂಗಾ ಜಿಲ್ಲೆಗಳೂ ಸೇರಿದಂತೆ ಪುದುಚೇರಿಯಲ್ಲಿ 11.56 ಸೆಂ.ಮೀನಿಂದ 20.44 ಸೆಂ.ಮೀವರೆಗೆ ಸಾಧಾರಣದಿಂದ ಅತಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ರಾಮನಾಥಪುರಂ, ತತಿರುಚಿರಪಳ್ಳಿ, ಪೆರಂಬಲೂರ್​, ಕಲಕುರಿಚಿ, ಚೆಂಗಲ್​ಪಟ್ಟು ಜಿಲ್ಲೆಗಳಲ್ಲೂ ಕೂಡ ಮಂಗಳವಾರ ಜೋರು ಮಳೆಯಾಗುವ ಸಾಧ್ಯತೆ ಇದೆ. ಅರಿಯಲೂರ್​​, ತಿರುವರೂರ್​, ನಗಪತ್ತಿನಂ, ತಾಂಜಾವೂರ್​, ಪುದುಕೊಟ್ಟೈ, ವಿಲ್ಲುಪುರಂ ಮತ್ತು ತಿರುಚ್ಚಿ, ಕಾಂಚೀಪುರಂ, ಚೆನ್ನೈ, ಚೆಂಗಲ್​ಪೆಟ್ಟು ಜಿಲ್ಲೆ ಹಾಗೂ ಪುದುಚೇರಿಯಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ನವೆಂಬರ್​ 28ರವರೆಗೆ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ತಮಿಳುನಾಡಿನ ಸುಮಾರು 90 ಅಣೆಕಟ್ಟುಗಳು ಶೇ 60ರಷ್ಟು ಭರ್ತಿಯಾಗಿದೆ.(ಐಎಎನ್​ಎಸ್​)

ಇದನ್ನೂ ಓದಿ: ಕುಟುಂಬದ 4 ಮತಗಳಲ್ಲಿ MNS ಅಭ್ಯರ್ಥಿಗೆ ಬಿದ್ದಿದ್ದು 2 ಮಾತ್ರ!

ABOUT THE AUTHOR

...view details