ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ರೆಡ್​ ಅಲರ್ಟ್, ಶಾಲೆಗಳಿಗೆ ರಜೆ​: ಚರಂಡಿಯಲ್ಲಿ ಕೊಚ್ಚಿಹೋದ ತಾಯಿ-ಮಗು, ಭಾರಿ ಮಳೆಗೆ ಜನ ತತ್ತರ - Heavy Rain in Delhi - HEAVY RAIN IN DELHI

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ ದೆಹಲಿ ಜನರು ಸುರಕ್ಷತೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಜೊತೆಗೆ ಅಗತ್ಯವಿದ್ದಲ್ಲಿ ಮಾತ್ರ ರಸ್ತೆಗೆ ಇಳಿಯುವಂತೆ ಸಲಹೆ ನೀಡಲಾಗಿದೆ

heavy-rain-in-delhi-imd-issue-red-alert-for-thursday
ದೆಹಲಿ ಮಳೆ (IANS)

By ETV Bharat Karnataka Team

Published : Aug 1, 2024, 11:38 AM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ರಸ್ತೆಗಳು ಜಲಾವೃವಾಗಿವೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ರಸ್ತೆಗಳು ನದಿಗಳಂತೆ ಆಗಿದ್ದು, ಟ್ರಾಫಿಕ್​ ಸಮಸ್ಯೆ ಉಂಟಾಗಿದೆ. ಗಾಜಿಫುರದಲ್ಲಿ 22 ವರ್ಷದ ಮಹಿಳೆ ಮತ್ತು ಮಗುವೊಂದು ಮಳೆಗೆ ಕೊಚ್ಚಿ ಹೋಗಿದೆ. ಇಂದು ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ರೆಡ್​ ಅಲರ್ಟ್​ ಘೋಷಿಸಲಾಗಿದೆ.

ಧಾರಾಕಾರ ಮಳೆಯಿಂದಾಗಿ ನಗರವನ್ನು ಕಾಳಜಿ ಪ್ರದೇಶವಾಗಿ ಹವಾಮಾನ ಇಲಾಖೆ ಘೋಷಿಸಿದ್ದು, ಜನರು ಸುರಕ್ಷತೆ ಕಾಪಾಡಿಕೊಳ್ಳಲು ಸಲಹೆ ನೀಡಲಾಗಿದೆ. ಜೊತೆಗೆ ಅಗತ್ಯವಿದ್ದಲ್ಲಿ ಮಾತ್ರ ರಸ್ತೆಗೆ ಇಳಿಯುವಂತೆ ಸೂಚನೆ ನೀಡಲಾಗಿದೆ

ದೆಹಲಿಯಲ್ಲಿ ಇಂದು ಶಾಲಾ ಕಾಲೇಹುಗಳಿಗೆ ರಜೆ ಘೋಷಿಸಿದ ಸರ್ಕಾರ: ಗುರುವಾರ ಎಲ್ಲ ಶಾಲೆಗೆ ರಜೆ ಘೋಷಣೆ ಮಾಡಿ ದೆಹಲಿ ಶಿಕ್ಷಣ ಸಚಿವೆ ಅತಿಶಿ ಆದೇಶ ನೀಡಿದ್ದಾರೆ. ಗುರುವಾರ ಕೂಡ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಆಗಸ್ಟ್​ 1ರಂದು ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಕಾಲು ಜಾರಿ ಚರಂಡಿಗೆ ಬಿದ್ದ ತಾಯಿ - ಮಗು:ತನುಜಾ ಎಂಬ 22 ವರ್ಷದ ಮಹಿಳೆ ಮತ್ತು 3 ವರ್ಷದ ಆಕೆಯ ಮಗು ಮಾರುಕಟ್ಟೆಗೆ ಸಾಮಗ್ರಿಕೊಳ್ಳಲು ಹೋದಾಗ ಕಾಲು ಜಾರಿ ಚರಂಡಿಗೆ ಬಿದ್ದು ಕೊಚ್ಚಿ ಹೋಗಿದ್ದಾರೆ. ಖೋಡಾ ಕಾಲೋನಿ ಸಮೀಪದಲ್ಲಿ ಈ ದುರ್ಘಟನೆ ಸಂಭವಿಸಿದೆ. ಭಾರಿ ಮಳೆಯಿಂದಾಗಿ ಉತ್ತರ ದೆಹಲಿಯ ತರಕಾರಿ ಮಂಡಿ ಪ್ರದೇಶ, ರೊಬಿನ್​ ಸಿನಿಮಾ ಮಂದಿರದ ಸಮೀಪದ ಮನೆಗಳು ಕುಸಿದಿದೆ. ನೈರುತ್ಯ ದೆಹಲಿಯಲ್ಲಿ ವಸಂತ್​ ಕುಂಜ್​ನಲ್ಲಿ ಕೂಡ ಮನೆ ಕುಸಿತದಿಂದ ಮಹಿಳೆ ಗಾಯಗೊಂಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ, ಭಾರಿ ಮಳೆಯಿಂದಾಗಿ ಮೆಹ್ರೌಲಿ ಛತ್ತರ್‌ಪುರ ರಸ್ತೆಯಲ್ಲಿ ಪ್ರಯಾಣಿಕರು 1.5 ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್​ನಲ್ಲಿ ಸಿಲುಕಿದರು. ದೆಹಲಿ - ನೋಯ್ಡಾ ಎಕ್ಸ್‌ಪ್ರೆಸ್‌ವೇನಲ್ಲಿ ಭಾರಿ ಟ್ರಾಫಿಕ್ ದಟ್ಟಣೆ ಕಂಡು ಬಂದಿತು.

ಭಾರೀ ಮಳೆಯು ವಿಮಾನಯಾನಗಳ ಸಂಚಾರದಲ್ಲಿ ಕೂಡ ವ್ಯತ್ಯಾಯ ಉಂಟು ಮಾಡಿದೆ. ಕೆಟ್ಟ ಹವಾಮಾನದಿಂದ 10 ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಇನ್ನಷ್ಟು ವಿಮಾನಗಳ ಸಂಚಾರದಲ್ಲಿ ಕೂಡ ವ್ಯತ್ಯಾಯ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.

ಹವಾಮಾನ ಇಲಾಖೆ ಪ್ರಕಾರ, ಬುಧವಾರ ನಗರದ ಸಫ್ದರ್​ಜಂಗ್​ನಲ್ಲಿ ಸಂಜೆ 5.30 ರಿಂದ 8.30ರವರೆಗೆ ದಾಖಲೆಯ 79.2 ಎಂಎಂ ಮಳೆಯಾಗಿದೆ. ಮಯೂರ್​ ವಿಹಾರ್​ನಲ್ಲಿ 119 ಎಂಎಂ, ದೆಹಲಿ ಯುನಿವರ್ಸಿಟಿಯಲ್ಲಿ 77.5 ಎಂಎಂ ಮಳೆಯಾಗಿದೆ.

ಇದನ್ನೂ ಓದಿ: ವಯನಾಡ್ ಭೂಕುಸಿತ; 22 ಮಕ್ಕಳು ಸೇರಿ 243 ಮಂದಿ ಸಾವು; ರಕ್ಷಣಾ ಕಾರ್ಯಕ್ಕೆ ತಾತ್ಕಾಲಿಕ ಬೈಲಿ ಸೇತುವೆ ನಿರ್ಮಿಸಿದ ಸೇನೆ

ABOUT THE AUTHOR

...view details