ನವದೆಹಲಿ:ಇಂದು ನಡೆದ ಹರಿಯಾಣ ವಿಧಾನಸಭೆ ಚುನಾವಣೆಯ ಬೆನ್ನಲ್ಲೇ, ಚುನಾವಣೋತ್ತರ ಫಲಿತಾಂಶ ಪ್ರಕಟವಾಗಿದೆ. ಹಲವು ಮಾಧ್ಯಮಗಳು, ಏಜೆನ್ಸಿಗಳು ತಮ್ಮ ಸರ್ವೇ ಬಿಡುಗಡೆ ಮಾಡಿವೆ. ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದರೆ, ಜಮ್ಮು- ಕಾಶ್ಮೀರದಲ್ಲಿ ಅತಂತ್ರವಾದರೂ, ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ.
ಜಮ್ಮು ಕಾಶ್ಮೀರ ವಿಧಾನಸಭೆಯ 90 ಸ್ಥಾನಗಳಿಗೆ ಮೂರು ಹಂತದಲ್ಲಿ ಮತದಾನ ನಡೆದಿದೆ. ಶೇಕಡಾ 63 ರಷ್ಟು ಮತದಾನವಾಗಿದ್ದು, ಮ್ಯಾಜಿಕ್ ನಂಬರ್ 46 ಬೇಕಿದೆ. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫ್ರೆನ್ಸ್ ಪಕ್ಷಗಳು ಚುನಾವಣಾ ಫೂರ್ವದಲ್ಲಿಯೇ ಮೈತ್ರಿ ಮಾಡಿಕೊಂಡಿದ್ದು, ಎರಡು ಪಕ್ಷಗಳು ಸದ್ಯ ಮುನ್ನಡೆಯಲ್ಲಿವೆ. ಕೆಲ ಸಮೀಕ್ಷೆಗಳ ಪ್ರಕಾರ, ಬಿಜೆಪಿ ಕೂಡ ಅಧಿಕಾರದ ಸಮೀಪ ಬರುವ ಸಾಧ್ಯತೆ ಇದೆ ಎಂದು ಹೇಳಿವೆ.
ಇನ್ನು ಹರಿಯಾಣ ವಿಧಾನಸಭೆಯ 90 ಸ್ಥಾನಗಳಿಗೆ ಶನಿವಾರ (ಅಕ್ಟೋಬರ್ 5) ಮತದಾನ ನಡೆದಿದ್ದು, ಶೇಕಡಾ 61 ಕ್ಕೂ ಅಧಿಕ ಮತದಾನವಾಗಿದೆ. ತನ್ನ ಆಡಳಿತದಲ್ಲಿದ್ದ ರಾಜ್ಯವು ಈ ಬಾರಿ ಬಿಜೆಪಿಯಿಂದ ಕೈತಪ್ಪುವ ಸಾಧ್ಯತೆ ಹೆಚ್ಚಿದ ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಅಕ್ಟೋಬರ್ 8 ರಂದು ಅಧಿಕೃತ ಫಲಿತಾಂಶ ಹೊರಬೀಳಲಿದೆ.
ಹರಿಯಾಣ ವಿಧಾನಸಭೆ ಫಲಿತಾಂಶ
ದೈನಿಕ ಭಾಸ್ಕರ್ಸಮೀಕ್ಷೆಯ ಪ್ರಕಾರ, ಹರಿಯಾಣದಲ್ಲಿ ಬಿಜೆಪಿಗೆ 15-29 ಸ್ಥಾನಗಳು ಬಂದರೆ, ಕಾಂಗ್ರೆಸ್ 44-54 ಸ್ಥಾನ, ಜೆಜೆಪಿ 0-1, ಐಎನ್ಎಲ್ಡಿ 1-5, ಆಪ್ 0-1, ಇತರ 4-9 ಸ್ಥಾನಗಳು ಬರಲಿವೆ ಎಂದು ಹೇಳಿದೆ.
ಧ್ರುವ್ ರಿಸರ್ಚ್ಸರ್ವೇ ಪ್ರಕಾರ, ಬಿಜೆಪಿ 22-32 ಸ್ಥಾನ, ಕಾಂಗ್ರೆಸ್ 50-64, ಜೆಜೆಪಿ 0, ಐಎನ್ಎಲ್ಡಿ 0, ಆಪ್ 0, ಇತರ 2-8 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ.