ನರ್ಮದಾ (ಗುಜರಾತ್):ನರ್ಮದಾ ನದಿಯಲ್ಲಿ ಸ್ನಾನ ಮಾಡಲು ಇಳಿದ ಮೂವರು ಮಕ್ಕಳು ಸೇರಿ ಎಂಟು ಮಂದಿ ಮುಳುಗಿರುವ ಘಟನೆ ಗುಜರಾತ್ನಲ್ಲಿ ನಡೆದೆ. ಸ್ಥಳೀಯರು ಒಬ್ಬ ಯುವಕನನ್ನು ರಕ್ಷಿಸಿದ್ದು, ಇನ್ನೂ 7 ಜನರು ನಾಪತ್ತೆಯಾಗಿದ್ದಾರೆ.
ಇಲ್ಲಿನ ಪೊಯಿಚಾ ಪ್ರದೇಶಕ್ಕೆ ಸೂರತ್‌ನಿಂದ ಕೆಲವರು ಪ್ರವಾಸಕ್ಕೆ ಎಂದು ಬಂದಿದ್ದರು. ಈ ವೇಳೆ, ಸಮೀಪದ ನರ್ಮದಾ ನದಿಯಲ್ಲಿ ಎಂಟು ಮಂದಿ ಸ್ನಾನಕ್ಕೆ ಇಳಿದಿದ್ದರು. ಆದರೆ, ನದಿ ನೀರಿನ ಆಳ ಹೆಚ್ಚಿರುವುದನ್ನು ಅರಿಯದೇ ಒಬ್ಬರ ಹಿಂದೆ ಒಬ್ಬರಂತೆ ಮುಳುಗಲು ಆರಂಭಿಸಿದ್ದರು ಎಂದು ತಿಳಿದು ಬಂದಿದೆ. ನೀರಿನಲ್ಲಿ ಮುಳುಗಿದ ಜನರು ಸಹಾಯಕ್ಕಾಗಿ ಕೂಗುವುದನ್ನು ಕೇಳಿದ ಕೆಲವು ಸ್ಥಳೀಯರು ದೋಣಿಯವರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ.